ಭೈರವೇಶ್ವರ ಕಾವ್ಯದ
ಕಥಾಮಣಿ ಸೂತ್ರರತ್ನಾಕರದಲ್ಲಿನ ಸಾಂಸ್ಕೃತಿಕ ಅಂಶಗಳು
ಡಾ.ಸಿ.ನಾಗಭೂಷಣ
ಸಂಸ್ಕೃತಿಯು ತನ್ನ ಸಾಮಾನ್ಯ ಹಾಗೂ ಜನಪ್ರಿಯ ನೆಲೆಯಲ್ಲಿ ಪವಿತ್ರವೂ ಪ್ರಾಚೀನವೂ ಆದುದು, ಪೂರ್ವಿಕರಿಂದ ಬಂದುದ್ದು, ನಾವು ಅದನ್ನು ಅನುಸರಿಸಬೇಕು ಹಾಗೂ ಅನ್ಯರಿಂದ ರಕ್ಷಿಸಬೇಕು
ಎನ್ನುವ ಆಶಯವನ್ನು ಹೊಂದಿದ್ದು ಸಂಸ್ಕೃತಿಗಿರುವ ಅನೇಕ ಅರ್ಥಗಳಲ್ಲಿ ಒಂದಾಗಿ ಪರಿಣಮಿಸಿದೆ.
ಜೊತೆಗೆ ನಮ್ಮ ಧರ್ಮದ ಅಥವಾ ನಾಡಿನ ಸಾಂಕೇತಿಕ ಗುರುತಾಗಿಯು ಪರಿಣಮಿಸಿದೆ. ಆಧುನಿಕ ಕಾಲದಲ್ಲಿ
ಬಳಕೆಗೊಂಡ ಪದಗಳಲ್ಲಿ ಸಂಸ್ಕೃತಿಯು ಒಂದಾಗಿದ್ದು ವಿಭಿನ್ನ ಕ್ಷೇತ್ರಗಳಲ್ಲಿ, ವಿಭಿನ್ನ ಸ್ತರಗಳಲ್ಲಿ ವಿಭಿನ್ನ ಆಯಾಮಗಳಲ್ಲಿ ನಿರಂತರ
ಬದಲಾವಣೆಗಳನ್ನು ಹೊಂದುತ್ತಾ ಬಂದಿದೆ. ಸಂಸ್ಕೃತಿಯು ಜೈವಿಕ ಘಟಕಕ್ಕೆ ಸಂವಾದಿಯಾಗಿಯೇ ಹಂತ
ಹಂತವಾಗಿ ಬೆಳೆಯುತ್ತ ಕೆಲವು ಅಂಶಗಳನ್ನು ಸ್ವೀಕರಿಸುತ್ತ, ಕೆಲವನ್ನು ಕಳೆದುಕೊಳ್ಳುತ್ತ ಹಲವನ್ನು ನವೀಕರಿಸುತ್ತಾ
ಚಲನಶೀಲವಾಗಿರುವುದು ಇದರ ಮೂಲ ಲಕ್ಷಣವಾಗಿದೆ. ಸಂಸ್ಕೃತಿಯು ಜನಾಂಗವೊಂದರ ಬಾಹ್ಯ ಆಂತರಿಕ ಜೀವನ
ವಿಧಾನವನ್ನು ಪ್ರತಿನಿಧಿಸುತ್ತದೆ. ಮಾನವನ ಪರಿಸರದ ಭಾಗವೂ ಆಗಿದೆ. ಜೊತೆಗೆ ಸಮುದಾಯದ
ಜ್ಞಾನಸಂಪತ್ತು,
ನಂಬಿಕೆಗಳು, ಕಲಾಪ್ರಕಾರಗಳು, ನೈತಿಕನೆಲೆ, ರೀತಿರಿವಾಜುಗಳು, ಆಚರಣೆ ಮುಂತಾದ ಸಂಕೀರ್ಣ ಒಳವಿಭಾಗಗಳನ್ನು ಒಳಗೊಂಡಿರುತ್ತವೆ.
ಪ್ರತೀ ಮನುಷ್ಯನೂ ಒಂದಲ್ಲೊಂದು ಸಂಸ್ಕೃತಿಯ ಸದಸ್ಯನಾಗಿ ಆ ಸಾಂಸ್ಕೃತಿಕ ಅಂಶಗಳು ವ್ಯಕ್ತಿತ್ವದ
ಮೇಲೆ ಮಾಡುವ ಪರಿಣಾಮಗಳನ್ನು ಸ್ಥಿರಪಡಿಸುತ್ತಾನೆ. ಶಂಬಾ ಜೋಶಿಯವರ ಮಾತಿನಲ್ಲಿಯೇ ಹೇಳುವುದಾದರೆ
ಸಂಸ್ಕೃತಿಯನ್ನು ರೂಪಿಸುತ್ತಾ ಹೋಗುವ ಮನುಷ್ಯ ತನ್ನನ್ನು ತಾನೇ ರೂಪಿಸಿ ಕೊಳ್ಳುತ್ತಾನೆ. ಮನುಷ್ಯ
ಮತ್ತು ಸಂಸ್ಕೃತಿಗೆ ಇರುವ ಸಂಬಂಧ ಸಾವಯವವಾದುದು. ಸಮಾಜವನ್ನು ಬಿಟ್ಟು ಸಂಸ್ಕೃತಿಯಿಲ್ಲ.
ಸಂಸ್ಕೃತಿಯನ್ನು ಬಿಟ್ಟು ಸಮಾಜವಿಲ್ಲ.
ಸಂಸ್ಕೃತಿಯ ಮೂರು ನೆಲೆಗಳಾದ ಕಾಲದೇಶಗಳ ಸೀಮೆಗಳನ್ನು ನಿವಾರಿಸಿಕೊಂಡ ವಿಶ್ವಮಾನ್ಯವಾದ
ಮಾನವ ಸಂಸ್ಕೃತಿ,
ಕಾಲದೇಶಗಳಿಗೆ ಬದ್ಧವಾಗಿ ನಿರ್ದಿಷ್ಟ ಸಮುದಾಯದ
ಆಸ್ತಿಯಾಗಿ ಗೋಚರಿಸುವ ಪ್ರಾದೇಶಿಕ ಸಂಸ್ಕೃತಿ ಮತ್ತು ತನ್ನದೇ ಆದ ಮೌಲ್ಯಗಳಿಂದ ನಿರೂಪಿತವಾದ ವ್ಯಕ್ತಿ ನಿಷ್ಟವಾದ
ವೈಯಕ್ತಿಕ ಸಂಸ್ಕೃತಿ. ಇವುಗಳಲ್ಲಿ ವೈಯಕ್ತಿಕ ಸಂಸ್ಕೃತಿಯೇ ವಿಕಸನದ ಮೆಟ್ಟಲುಗಳನ್ನೊಂದದಾಗಿ ಏರಿ
ವಿಶ್ವಸಂಸ್ಕೃತಿಯನ್ನು ರೂಪಿಸುತ್ತದೆ. ಸಂಸ್ಕೃತಿಯು ಚಲನಶೀಲತೆಯ ಅಂತರ್ಗತ ಗುಣವನ್ನು
ಹೊಂದಿರುತ್ತದೆ.
ಸಂಸ್ಕೃತಿ ಪದಕ್ಕೆ ಓದುಗರಲ್ಲಿ ಮೂಡುವ ಚಿತ್ರಗಳು
ಏಕರೂಪಿಯಾದುದಲ್ಲವಾಗಿದ್ದು ಬಹುರೂಪಿ ಅರ್ಥಗಳಲ್ಲಿ ಬಳಕೆಯಾಗುತ್ತಿದೆ. ಆಧುನಿಕ ಕಾಲದಲ್ಲಿ ಸಂಸ್ಕೃತಿಯು ಆಯಾಕಾಲದ ಸಾಮಾಜಿಕ ಬೆಳವಣಿಗೆಗಳಿಗೆ ತಕ್ಕಂತೆ
ವಿಭಿನ್ನ ಅರ್ಥಗಳನ್ನು ಪಡೆದುಕೊಂಡು ಬೌದ್ಧಿಕವಾಗಿ ರೂಪಿಸಿ ಕೊಂಡ ಪರಿಕಲ್ಪನೆಯಾಗಿದೆ. ಹೊಸ ಹೊಸ
ಅರ್ಥಗಳನ್ನು ಒಳಗೊಳ್ಳುತ್ತಲೇ ಅಧ್ಯಯನಕ್ಕೊಳಗಾಗುತ್ತಿದೆ. ಸಂಸ್ಕೃತಿ ಪದವನ್ನು ಬಳಸಿಕೊಂಡು ವಿವಿಧ ಪರಿಭಾಷೆ ಪದಗಳು
ರೂಪುಗೊಂಡಿವೆ. ಧರ್ಮಗಳ ಹೆಸರಿನ ಜೊತೆ ಸೇರಿ ಹಿಂದೂ ಸಂಸ್ಕೃತಿ, ಜೈನ ಸಂಸ್ಕೃತಿ,
ಎಂಬ ಪರಿಕಲ್ಪನೆಗಳು,
ಜಾತಿ ಬುಡುಕಟ್ಟುಗಳ ಜೊತೆ
ಸೇರಿ ದಲಿತ ಸಂಸ್ಕೃತಿ, ಹೆಳವರ ಸಂಸ್ಕೃತಿ ಎಂಬ ಪರಿಕಲ್ಪನೆಗಳು,
ದೇಶವಾಚಿಕೆಗಳಲ್ಲಿ,
ಭಾರತೀಯ ಸಂಸ್ಕೃತಿ,
ಅಮೇರಿಕಾ ಸಂಸ್ಕೃತಿ ಎಂಬ
ಪರಿಕಲ್ಪನೆಗಳು, ಭಾಷಾ ವಾಚಿಕಗಳಲ್ಲಿ, ಕನ್ನಡ ಸಂಸ್ಕೃತಿ,ತಮಿಳು ಸಂಸ್ಕೃತಿ,
ಎಂಬ ಪರಿಕಲ್ಪನೆಗಳು,
ಜೊತೆಗೆ ಗ್ರಾಮೀಣ
ಸಂಸ್ಕೃತಿ, ಪರ್ಯಾಯ ಸಂಸ್ಕೃತಿ, ಪ್ರತಿ ಸಂಸ್ಕೃತಿ,
ಉಪಸಂಸ್ಕೃತಿ ಇತ್ಯಾದಿ
ಬೇರೆ ಬೇರೆ ಆಶಯದ ಪರಿಕಲ್ಪನೆಗಳು, ಜೊತೆಗೆ ಶ್ರಮ ಸಂಸ್ಕೃತಿ,ಸಮಾಜವಾದಿ ಸಂಸ್ಕೃತಿ, ಬಂಡವಾಳ ಶಾಹಿ ಸಂಸ್ಕೃತಿ,
ಪುಸ್ತಕ ಸಂಸ್ಕೃತಿ,
ಸಿನಿಮಾ ಸಂಸ್ಕೃತಿ
ಇತ್ಯಾದಿ ಹಲವಾರು ಆಶಯಗಳ ಪರಿಭಾಷೆಯ ಪರಿಕಲ್ಪನೆಗಳಲ್ಲಿ ಸಂಸ್ಕೃತಿಯು ಅರ್ಥವೈವಿಧ್ಯವನ್ನು
ವಿಸ್ತರಿಸಿ ಕೊಂಡಿದೆ. ಸಂಸ್ಕೃತಿಯ ಪರಿಕಲ್ಪನೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಂಸ್ಕೃತಿಕ
ಅಧ್ಯಯನವೂ ಆಗಿದೆ. ಇಲ್ಲಿಯವರೆಗೂ ಸಂಸ್ಕೃತಿಯನ್ನು ಪರಿಕಲ್ಪನೆಯನ್ನಾಗಿ ಪರಿಗಣಿಸಿ ಅದರ ಸ್ವರೂಪದ
ಬಗೆಗೆ ಚಿಂತನೆ ಮಾಡಿದ್ದಾರೆ. ಸಂಸ್ಕೃತಿಯನ್ನು ಕುರಿತು ಡಿ.ವಿ.ಜಿ ಮೊದಲುಗೊಂಡು ಪಾಶ್ಚಾತ್ಯ
ವಿದ್ವಾಂಸ ಟಿ.ಎಸ್.ಇಲಿಯಟ್ ನವರೆಗೂ ವ್ಯಾಖ್ಯಾನಿಸಿದ್ದಾರೆ. ಇದು ಒಂದು ರೀತಿಯಲ್ಲಿ ರಹಮತ್
ತರಿಕೆರೆಯವರು ಹೇಳುವಂತೆ ಸಂಸ್ಕೃತಿ ಎಂಬುದು ಬೌದ್ಧಿಕ ಚರ್ಚೆ ಮಾಡುವವರು ಬಳಸುವ ಒಂದು ಪರಿಭಾಷೆ
ಎಂಬುದು ಒಪ್ಪತಕ್ಕದ್ದೇ ಆಗಿದೆ. ಸಂಸ್ಕೃತಿ ಶಬ್ದವನ್ನು ಪರಿಭಾಷೆಯಾಗಿ ಬಳಸುತ್ತಿರುವ
ವಿದ್ವಾಂಸರಲ್ಲೂ ಈ ಪದವನ್ನು ಕುರಿತಾಗಿ ಏಕಾಭಿಪ್ರಾಯದ ಖಚಿತ ಉತ್ತರವಿಲ್ಲ.
ಸಾಂಸ್ಕೃತಿಕ ಎಂಬುದು ಸಾಮಾಜಿಕ ರಾಜಕೀಯ, ಆರ್ಥಿಕ ವಿಚಾರಗಳನ್ನು ಹೇಳಲು ಸಜ್ಜುಗೊಂಡ ಭಾಷಾ
ಸಂಕೇತವಾಗಿದೆ. ಅಂದರೆ ರಾಜಕೀಯ, ಆರ್ಥಿಕ, ಸಾಮಾಜಿಕವಾದ ಲೋಕದೃಷ್ಟಿಯನ್ನು ಸೂಚಿಸುವ ಸೈದ್ಧಾಂತಿಕ
ಪರಿಭಾಷೆ. ಸಾಂಸ್ಕೃತಿಕ ಅಧ್ಯಯನದ ಮೂಲಕ ಸಂಸ್ಕೃತಿಯ ಚಿಂತನೆ ನಡೆದಿದೆ. ಶಂಬಾ ಜೋಶಿ, ಮಾಸ್ತಿಯವರು ಈ ನಿಟ್ಟಿನಲ್ಲಿ ಮೊದಲಿಗರಾಗಿ ಕಂಡು
ಬರುತ್ತಾರೆ. ಸಾಂಸ್ಕೃತಿಕ ಸಂಶೋಧನೆಯ ಮುಖ್ಯ ಉದ್ದೇಶ ಗತಕಾಲವನ್ನು ವರ್ತಮಾನ
ಕಾಲದ ಅಗತ್ಯಕ್ಕೆ ತಕ್ಕಂತೆ ಮರುರಚನೆ ಮಾಡಿಕೊಳ್ಳುವುದು. ಸಂಸ್ಕೃತಿ ಎನ್ನುವುದು ಅರ್ಥಪೂರ್ಣ
ಕ್ರಿಯೆಗಳ ವ್ಯವಸ್ಥೆ, ರಾಜಕೀಯ ಹಾಗೂ ಆರ್ಥಿಕ
ಶಕ್ತಿಗಳ ಕಾರಣದಿಂದ ಮೂಡುತ್ತದೆ. ಇಪ್ಪತ್ತನೇ ಶತಮಾನದಲ್ಲಿ ಸಂಸ್ಕೃತಿಯನ್ನು ಕುರಿತು ನಡೆದಿರುವ
ಅಧ್ಯಯನವು ಬಹುಮುಖೀ ಆಯಾಮವುಳ್ಳ ಅಂತರ್‌ಶಿಸ್ತೀಯವಾಗಿದೆ. ಸಂಸ್ಕೃತಿಯನ್ನು
ಕುರಿತಾಗೆ ಕನ್ನಡದಲ್ಲಿ ನಡೆದಿರುವ ಅಧ್ಯಯನವು ಎರಡು ನೆಲೆಗಳಲ್ಲಿ ವ್ಯವಸ್ಥೆಗೊಂಡಿದೆ. 1.ಸಂಸ್ಕೃತಿ ಶೋಧ, 2.ಸಂಸ್ಕೃತಿ ಚಿಂತನೆ.
ಸಂಸ್ಕೃತಿ
ಶೋಧವು ಸಾಂಸ್ಕೃತಿಕ ಚಿಂತನೆಯ ನೆಲೆಗಳನ್ನು ಆಶ್ರಯಿಸುತ್ತದೆ ಮತ್ತು ರೂಪಿಸುತ್ತದೆ. ಸಂಸ್ಕೃತಿ
ಚಿಂತನೆಯ ನೆಲೆಯು ಸಾಂಸ್ಕೃತಿಕ ಶೋಧಗಳ ಫಲಿತಾಂಶವನ್ನು ಒಳಗೊಂಡಿರುತ್ತದೆ. ಸಾಹಿತ್ಯ, ಚರಿತ್ರೆ, ಧರ್ಮ, ರಾಜಕೀಯ
ಮತ್ತು ಆರ್ಥಿಕತೆಗಳು ಕನ್ನಡ ಸಂಸ್ಕೃತಿಯ ಚಿಂತನೆಯ ಹಲವು ಮುಖ್ಯ ಕೇಂದ್ರಗಳಾಗಿವೆ. ಸಂಸ್ಕೃತಿಗೆ
ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವುದಾಗಲೀ, ವಿವರಿಸುವುದಾಗಲೀ
ತನಗೆ ತಾನೆ ಪೂರ್ಣ ರೂಪಿಯಾದ ಕಾಲದೇಶ ವಿಮುಕ್ತವಾದ ಸಂಗತಿಯಲ್ಲ. ಸಂಸ್ಕೃತಿಗೆ ಸಂಬಂಧಿಸಿದ
ಹಿಂದಿನ ಸಿದ್ಧಾಂತ ಇಂದಿನ ನಮ್ಮ ಸಾಂಸ್ಕೃತಿಕ ವೈರುದ್ಧ್ಯಗಳ
ಫಲಿತವಾಗಿ ತೋರುತ್ತದೆ. ಉದಾ|| ವಿಜಯನಗರ
ಸಾಮ್ರಾಜ್ಯದ ಅವನತಿಯ ಕಾಲದಲ್ಲಿ ದೇವಾಲಯಗಳು ನಾಶಗೊಂಡವು. ಈ ಪ್ರಕ್ರಿಯೆಯಲ್ಲಿ ಮುಸ್ಲಿಂ ಪ್ರಮುಖ
ಪಾತ್ರವನ್ನು ವಿವರಿಸುವ ಚಾರಿತ್ರಿಕ ಪುನಾರಚನೆಯ ವಿಶ್ಲೇಷಣೆಯು, ವಿಜಯನಗರದ ಶೈವ ಮತ್ತು ವೈಷ್ಣವ ದೇವಾಲಯಗಳಲ್ಲಿ ಅಧಿಕವಾಗಿ ವೈಷ್ಣವ
ದೇವಾಲಯಗಳೇ ವಿನಾಶವಾಗಿ ಸಾಕಷ್ಟು ಶೈವ ದೇವಾಲಯಗಳು ನಾಶವಾಗದೆ ಉಳಿದುದರ ಹಿನ್ನಲೆಗೆ ಸಾಕಾಗದು. ಈ
ವಿವರದ ವಿಶ್ಲೇಷಣೆಗೆ ಇನ್ನೂ ಹೆಚ್ಚಿನ ಮಾಹಿತಿ ಹಾಗೂ ವಿವರಣೆಗಳು ಅವಶ್ಯಕವಾಗಿ ಬೇಕಾಗುತ್ತವೆ.
ಇದು ಸಾಂಸ್ಕೃತಿಕ ಅಧ್ಯಯನಗಳನ್ನು ರೂಪಿಸುವ ಸಿದ್ಧಾಂತಗಳು ಸದ್ಯದ ಒತ್ತಡಗಳಿಂದ
ನಿರ್ದೇಶಿತವಾಗಿರುತ್ತವೆಂಬ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತವೆ.
ಸಂಸ್ಕೃತಿಯನ್ನು ಧರ್ಮದೊಡನೆ ಮುಖ್ಯವಾಗಿ
ಗುರುತಿಸಿಕೊಂಡ ಸಂಶೋಧನೆಯು ಜೈನ, ಬೌದ್ಧ
ಮತ್ತು ವೀರಶೈವ ಧರ್ಮದ ನಂಬಿಕೆಗಳು ಮತ್ತು ಕಲಾತ್ಮಕ ಸೃಷ್ಟಿಗಳು ವೈದಿಕ ಹಿಂದೂ ಧರ್ಮದ ನಂಬಿಕೆ
ಹಾಗೂ ತಾತ್ವಿಕ ನಿಲುವುಗಳಿಗಿಂತ ಭಿನ್ನವಾದವು ಎಂಬುದನ್ನು ಬಹುಮಟ್ಟಿಗೆ ಪ್ರತಿಪಾದಿಸುತ್ತವೆ.
ಸ್ವಾತಂತ್ರ್ಯ ಪೂರ್ವದಲ್ಲಿ ಸಂಸ್ಕೃತಿಯ ಸಂಶೋಧನೆಯು, ಸಂಸ್ಕೃತಿಯನ್ನು ಚರಿತ್ರೆಯ ಒಂದು ಭಾಗವಾಗಿ ಪರಿಗಣಿಸಿ
ಸಾಂಸ್ಕೃತಿಕ ಕಥನವನ್ನು ರೂಪಿಸುವ ಮಾದರಿಯಾಗಿತ್ತು. ಜೊತೆಗೆ ಗತಕಾಲವನ್ನು ಕಾಲಾನುಕ್ರಮದಲ್ಲಿ
ಹೊಂದಿಸುವುದಾಗಿತ್ತು. ಕನ್ನಡ ಸಂಸ್ಕೃತಿ ಚರಿತ್ರೆಯ ಹಳಮೆಯನ್ನು ಸಾಧಿಸುವುದು, ಆ ಮೂಲಕ ಅಭಿಮಾನವನ್ನು ಮೂಡಿಸುವುದಾಗಿತ್ತು. ಸಂಸ್ಕೃತಿ
ಶೋಧನೆಯ ನೆಪದಲ್ಲಿ ಸಾಂಸ್ಕೃತಿಕ ಅಭಿವ್ಯಕ್ತಿಯ ವಿವಿಧ ರೂಪಗಳಾದ ಭಾಷಿಕ ಸಂಕೇತಗಳು, ದೈವಗಳನ್ನು ಕುರಿತ ಸಂಕೇತ ನಿಷ್ಠ ಪರಿಭಾಷೆ, ಸಂಪ್ರದಾಯ, ಸ್ಥಳನಾಮ, ಆಚರಣೆ
ಇತ್ಯಾದಿಗಳನ್ನು ವಿಶ್ಲೇಷಣೆಗೆ ಗುರಿಪಡಿಸಿರುವ ಪ್ರಯತ್ನವನ್ನು ಕಾಣಬಹುದಾಗಿದೆ. ಇಲ್ಲೆಲ್ಲಾ
ಅಂತರ ಶಿಸ್ತೀಯ ಅಧ್ಯಯನವನ್ನು ಬಳಸಿದ್ದಾರೆ. ಈ ನಿಟ್ಟಿನಲ್ಲಿ ಶಂಬಾ
ಜೋಶಿಯವರ ಸಂಶೋಧನಾ ವಿಧಾನವನ್ನು ಹೆಸರಿಸಬಹುದು.
ಸಂಸ್ಕೃತಿ ಅಧ್ಯಯನದಲ್ಲಿ ಕೆಲವೊಂದು ಕಾಲಘಟ್ಟಗಳನ್ನು
ಗುರುತಿಸಬಹುದಾಗಿದೆ. ಮಾಸ್ತಿಯಿಂದ ಹಿಡಿದು ಅನಂತಮೂರ್ತಿ, ಬರಗೂರ ಅವರ ವರೆಗೂ ಕನ್ನಡ ಸಂಸ್ಕೃತಿಯನ್ನು ವಿವಿಧ
ಕಾಲಘಟ್ಟಗಳಲ್ಲಿ ಅರ್ಥೈಸಿರುವುದನ್ನು ನೋಡಬಹುದಾಗಿದೆ. ಸಂಸ್ಕೃತಿಯ ಅಧ್ಯಯನದ ಸ್ವರೂಪವನ್ನು
ಚಿಂತನಾ ಕ್ರಮದ ಹಿನ್ನೆಲೆಯಲ್ಲಿ ಉದಾರವಾದಿ, ಪರಿಷ್ಕರಣಾವಾದಿ, ವಿಚಾರವಾದಿ, ನಿರ್ವಸಹಾತುವಾದಿ, ಶೂದ್ರವಾದಿ, ದಲಿತವಾದಿ, ಎಡವಾದಿ, ಆಧುನಿಕೋತ್ತರವಾದಿ ಎಂದು ಗುರುತಿಸುವ ಪ್ರಯತ್ನ ಮಾಡಲಾಗಿದೆ.
ಉದಾರವಾದಿ ಘಟ್ಟದಲ್ಲಿ ಸಂಸ್ಕೃತಿಯ ಚಿಂತನೆಯು ಸಭ್ಯತೆ ಮತ್ತು ಶಿಷ್ಠಾಚಾರಕ್ಕೆ
ಸಂಬಂಧಿಸಿದ್ದಾಗಿದೆ. ಜೀವನದಲ್ಲಿರುವ ಶಿಷ್ಠ, ಉದಾರ, ಮಾನವತಾವಾದಿ ನಿದರ್ಶನಗಳನ್ನು ಆಯ್ದು ಸಂಸ್ಕೃತಿಯನ್ನು
ಕಟ್ಟುವುದಾಗಿರುತ್ತದೆ.
ಆಧುನಿಕ ಕಾಲದಲ್ಲಿ ಬೌದ್ಧಿಕ ಪರಿಕಲ್ಪನೆಯಾಗಿ
ರೂಪುಗೊಂಡ ಸಂಸ್ಕೃತಿ ಎಂಬ ಪರಿಭಾಷೆಗೆ ಕನ್ನಡದಲ್ಲಿ ಸುಮಾರು 90 ವರ್ಷಗಳ ಇತಿಹಾಸವಿದೆ. ಕನ್ನಡದಲ್ಲಿ ಸಂಸ್ಕೃತಿಯನ್ನು ಕುರಿತ
ಅಧ್ಯಯನದಲ್ಲಿ ಧಾರ್ಮಿಕ ಆದರ್ಶಗಳು, ಗತಕಾಲದಲ್ಲಿ
ಪೂರ್ವಜರು ಮಾಡಿದ ಸಾಧನೆ ಇತ್ಯಾದಿ ಜನಪ್ರಿಯ ಭಾವನಾತ್ಮಕ ಅರ್ಥಗಳ ಜೊತೆಗೆ ಬೇರೆ ಬೇರೆ
ಅರ್ಥಗಳನ್ನು ಪಡೆದುಕೊಳ್ಳುತ್ತ ಬಂದಿದೆ. ಅನೇಕ ಜ್ಞಾನಶಿಸ್ತುಗಳಲ್ಲಿ ವಿಭಿನ್ನ ಶೈಕ್ಷಣಿಕ ಅರ್ಥಗಳಲ್ಲಿ ಬಳಕೆಯಾಗಿದೆ. ಕನ್ನಡದಲ್ಲಿ ಸಂಸ್ಕೃತಿ
ಶಬ್ದವು ಸಾಮಾಜಿಕ,
ರಾಜಕೀಯ ಆರ್ಥಿಕ ವಿಚಾರಗಳನ್ನು ನಿರೂಪಿಸಲು ಸಜ್ಜುಗೊಂಡ
ಭಾಷಿಕ ಸಂಕೇತವಾಗಿ ಆಧುನಿಕ ಕಾಲದಲ್ಲಿ ರೂಪುಗೊಂಡ ಪರಿಕಲ್ಪನೆಯಾಗಿದೆ. ಅಂದರೆ ಸಮುದಾಯ ಬದುಕುವ, ಆಲೋಚಿಸುವ, ಸಮಸ್ತ ಆಯಾಮಗಳನ್ನು ಒಳಗೊಳ್ಳುವ ಪರಿಭಾಷೆಯಾಗಿ ರೂಪುಗೊಂಡಿದೆ.
ಕನ್ನಡದಲ್ಲಿ ಸಂಸ್ಕೃತಿ ಚಿಂತನೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳು ನಡೆದಿವೆ. ಸಂಸ್ಕೃತಿ
ಪರಿಕಲ್ಪನೆ ಕುರಿತು ತಾತ್ವಿಕವಾಗಿ ಚಿಂತನೆ ಮಾಡುವುದು ಅದರ ಅರ್ಥವನ್ನು ಉದಾಹರಣೆಗಳ ಮೂಲಕ
ನಿರೂಪಿಸುವುದು ಇತರರ ಚಿಂತನೆಗಳ ಜೊತೆಗೆ ವಾಗ್ವಾದ ನಡೆಸುವುದು ಇತ್ಯಾದಿ ಅಧ್ಯಯನಗಳು ಸಂಸ್ಕೃತಿ
ಚಿಂತನೆಯ ಚೌಕಟ್ಟಿನಲ್ಲಿ ನಡೆದಿವೆ. ಅದೇ ರೀತಿ ಸಾಂಸ್ಕೃತಿಕ ಅಧ್ಯಯನವು ಯಾವುದಾದರೊಂದು
ವಿಷಯವನ್ನು ಆರಿಸಿಕೊಂಡು ಒಂದು ಅಧ್ಯಯನದ ಮೂಲಕ ವಿಶ್ಲೇಷಿಸುವುದಾಗಿದೆ.
ಸಾಂಸ್ಕೃತಿಕ ಪದಕ್ಕೆ ಅರ್ಥ ವೈವಿಧ್ಯತೆ ಅರ್ಥಖಚಿತತೆ
ಇಲ್ಲ ಎನ್ನುವುದು ಕೆಲವು ವಿದ್ವಾಂಸರ ಅಭಿಪ್ರಾಯ. ಆದಾಗ್ಯೂ ಸಾಂಸ್ಕೃತಿಕ ಪದದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಹಿತ್ಯಕ, ಧಾರ್ಮಿಕ ಇತ್ಯಾದಿ ವಿಷಯದ ಬಹು ಮಗ್ಗಲುಗಳನ್ನು ಕಾಣುತ್ತೇವೆ. ಈ ಎಲ್ಲಾ ಜ್ಞಾನ ಶಿಸ್ತುಗಳ ವಿಶಾಲ ಪರಿಕಲ್ಪನೆಯಾಗಿ `ಸಾಂಸ್ಕೃತಿಕ’ ಪರಿಭಾಷೆಯನ್ನು ಗ್ರಹಿಸಬಹುದಾಗಿದೆ. ಸಾಂಸ್ಕೃತಿಕ
ಅಧ್ಯಯನವು ಬಹು ಪರಿಕಲ್ಪನೆಗಳು. ಬಹು ಶಿಸ್ತೀಯವಾದ ಅಧ್ಯಯನ ವಿಧಾನ, ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಇತ್ಯಾದಿ ಆಯಾಮಗಳನ್ನು ಒಳಗೊಂಡ ಬಹುಕೇಂದ್ರಿತ, ಬಹುಸ್ತರೀಯ ಬದುಕಿನ ಹಲವು ಆಯಾಮಗಳನ್ನು ಅಖಂಡವಾಗಿ
ಹಿಡಿವ ಸಂಯುಕ್ತ ಭಾಷೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿ ಎಂಬ ಪರಿಕಲ್ಪನೆಯ ಅರ್ಥ ಬದಲಾಗುತ್ತಿದೆ. ಅದೇ ರೀತಿ
ಸಂಸ್ಕೃತಿ ಶೋಧ ಹಾಗೂ ಚಿಂತನೆಯ ಕೇಂದ್ರಗಳೂ ಬದಲಾಗುತ್ತ ಬಂದಿದೆ. ಧರ್ಮ, ಜಾತಿ, ರಾಷ್ಟ್ರ,ವ್ಯಕ್ತಿ,
ಪ್ರದೇಶ, ರಾಜ್ಯ, ಸಾಹಿತ್ಯ, ಚರಿತ್ರೆ, ಜನಾಂಗ, ಸಮಾಜ, ರಾಜಕೀಯ ಆರ್ಥಿಕತೆ ಇವು ಕನ್ನಡದ ಸಂಸ್ಕೃತಿ ಚಿಂತನೆಯ
ಹಲವು ಮುಖ್ಯ ಕೇಂದ್ರಗಳಾಗಿವೆ. ಎಪ್ಪತ್ತರ ದಶಕದಿಂದೀಚೆಗೆ ರಾಜಕೀಯ ಮತ್ತು ಆರ್ಥಿಕತೆಯ ವ್ಯವಸ್ಥೆ
ಮತ್ತು ಸಂಸ್ಕೃತಿಗೆ ಇರುವ ಸಂಬಂಧದ ಚಿಂತನೆ ಪ್ರಾಮುಖ್ಯತೆ
ಪಡೆದಿದೆ. ಸಮಾಜದ ಪ್ರಧಾನ ಜನವರ್ಗದ ಸಂಸ್ಕೃತಿಗೆ ಪ್ರತಿಯಾದ ಸಂಸ್ಕೃತಿಯ ಧಾರೆಯನ್ನು
ಕಂಡರಿಸಿಕೊಳ್ಳುವ ಯತ್ನ, ಚರಿತ್ರೆಯ ಮರು ನಿರೂಪಣೆ, ಸಂಸ್ಕೃತಿಗೆ ಇರುವ ರಾಜಕೀಯ ಆಯಾಮವನ್ನು ಅರಿಯುವ ಮತ್ತು
ಪ್ರತಿಪಾದಿಸುವ ಸಿದ್ಧಾಂತದ ನಿರೂಪಣೆ ಇವುಗಳಿಗೆ ಪ್ರಾಮುಖ್ಯತೆ ಸಂದಿದೆ.
ಒಂದು ಕೃತಿಯನ್ನು ರಚಿಸಲು ಹೊರಡುವ ಕೃತಿಕಾರ
ಪಾತ್ರಗಳ ನಡೆನುಡಿ, ವರ್ತನೆಗಳಲ್ಲಿ ಸಂಸ್ಕೃತಿಯನ್ನು ಕಾಣಿಸಿಕೊಡುವುದರ
ಜೊತೆಗೆ ಅದಕ್ಕೆ ಪೂರಕ-ಪ್ರೇರಕವಾದ ಹೊರ ಆವರಣವನ್ನು ಸೃಜಿಸುತ್ತಾನೆ. ಹೊರ ಆವರಣದ ನಾಗರಿಕ ಪರಿಕರಗಳೂ, ವ್ಯಕ್ತಿಗಳ ಸಾಮಾಜಿಕ ರೀತಿ ನೀತಿಗಳು, ವರ್ತನೆಗಳೆಲ್ಲವೂ ಸಂಸ್ಕೃತಿಯೇ ಆಗುತ್ತವೆ. ಈ ಒಂದು ತಿಳುವಳಿಕೆಯ
ಹಿನ್ನೆಲೆಯಲ್ಲಿ `ಭೈರವೇಶ್ವರ
ಕಾವ್ಯದ ಕಥಾಮಣಿ ಸೂತ್ರರತ್ನಾಕರ' ಈ
ಕೃತಿಯಲ್ಲಿ ಕಂಡು ಬರುವಂಥ ಹೇರಳವಾದ ಸಾಂಸ್ಕೃತಿಕ
ಸಾಮಗ್ರಿಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.
ನಾಗರಿಕತೆಯನ್ನು ಯಾಂತ್ರಿಕತೆ ಮತ್ತು
ಆಧುನಿಕ ವಸ್ತು ಸಾಮಗ್ರಿಗಳಲ್ಲಾದ ಪ್ರಗತಿ, ಬದಲಾವಣೆಯನ್ನು
ಸೂಚಿಸುವ ಪದವಾಗಿಯೂ
ಸಂಸ್ಕೃತಿಯನ್ನು ಅಂತರಂಗದ ಭಾವಜನ್ಯವಾದ
ಸಾಹಿತ್ಯ,
ಸಂಗೀತ,ಶಿಲ್ಪ
ನೃತ್ಯ ಇತ್ಯಾದಿ ಕಲಾ ಪ್ರಕೃತಿ ಸೂಚಕವಾಗಿ
ಬಳಸಿದ್ದಾರೆ. ಯಾಂತ್ರಿಕ ಪ್ರಗತಿಗಳನ್ನು ಮುಂದಿಟ್ಟುಕೊಂಡು ನಾಗರೀಕತೆಯ ಅಂಶಗಳು ಯಾವುವು, ಸಾಂಸ್ಕೃತಿಕ ಅಂಶಗಳು ಯಾವುವು ಎಂಬುದನ್ನು
ನಿರ್ದಿಷ್ಟವಾಗಿ ಗುರುತಿಸಬಹುದಾದರೂ
ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನ ಇಟ್ಟುಕೊಂಡು ಈ ರೀತಿಯಾಗಿ ಸಂಸ್ಕೃತಿ ಮತ್ತು ನಾಗರಿಕತೆಯ ನಡುವಿನ ವ್ಯತ್ಯಾಸಗಳನ್ನು ಗೀಚು ಗೆರೆ ಹಾಕಿ
ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗಲಾರದೆಂಬುದನ್ನು ಅವರು ತಿಳಿಸಿದ್ದಾರೆ. ಅದೇ ಸಂದರ್ಭದಲ್ಲಿ ರಾಜಕೀಯದಿಂದ ಸಮಾಜ ರೂಪುಗೊಂಡಿತೋ, ಸಾಮಾಜಿಕ ಸನ್ನಿವೇಶದಲ್ಲಿ ರಾಜಕೀಯ ರೂಪುಗೊಂಡಿತೋ
ಎಂಬುದನ್ನು ಬಿಡಿಸಿ ಹೇಳಲು
ಸಾಧ್ಯವಿಲ್ಲ. ಅಂದರೆ ಜನ ಮಾನಸದ ವಸ್ತುನಿಷ್ಠ ಅಭಿಪ್ರಾಯಗಳಿಂದ
ರಾಜಕೀಯ ರೂಪುಗೊಂಡಿರಬಹುದು ಅಥವಾ ರಾಜಕೀಯವೆಂಬ
ಹೊರ ಆವರಣದಿಂದ ಸಮಾಜದ ಅಂತರಂಗ
ರೂಪುಗೊಂಡಿರಬಹುದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ನಾಗರಿಕತೆಯೆಂಬುದು
ಸಂಸ್ಕೃತಿಯಲ್ಲಿ ಪರ್ಯಾವಸಾನ
ಹೊಂದುವಂತದ್ದು. ನಾಗರಿಕತೆ ಬಹಿರಂಗವಾದ ವಸ್ತು. ಸಂಸ್ಕೃತಿಗೆ ಸಂಬಂಧ ಪಟ್ಟದ್ದು.
ಸಂಸ್ಕೃತಿ ಅಂತರಂಗಕ್ಕೆ ಸಂಬಂಧ ಪಟ್ಟದ್ದು.
ಅಂತರಂಗದ ಒಲವಿನ ಅವಿಷ್ಕಾರವೇ ಬಹಿರಂಗದ
ವಸ್ತು ಸುಧಾರಣೆಗೆ ಪ್ರೇರಕವಾಗಿರಬಹುದು. ಅದೇನೇ ಇರಲಿ ನಮಗೆ
ಮುಖ್ಯವಾದುದು ಸಂಸ್ಕೃತಿಯೆಂಬುದು ನಮ್ಮ ಇತಿಹಾಸ ಕಲೆ ರಾಜಕೀಯ, ಧರ್ಮ, ಸಾಹಿತ್ಯ
ಕಲೆ ಎಲ್ಲವನ್ನು ಒಳಗೊಂಡ ಸಂಗತಿಯಾಗಿದ್ದು ಅದು ಸಾಹಿತ್ಯ ಸಾಂಸ್ಕೃತಿಕ ಪ್ರಭಾವಗಳಿಗೆ ಒಳಗಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕವಿಯ ಕೃತಿಯು ಸಮಕಾಲೀನ
ಸಮಾಜದ ಕೈಗನ್ನಡಿಯೂ ಆಗುತ್ತದೆ. ಜೊತೆಗೆ
ಸಾಂಸ್ಕೃತಿಕ ಬದುಕಿನ ದಾಖಲೆಯೂ ಆಗಿರುತ್ತದೆ.
ಸಹಜ ಪ್ರಕೃತಿಯಿಂದ ಹಿಡಿದು ಮಾನವ
ನಿರ್ಮಿತ ಕೃತಕ ಪರಿಸರದ ವ್ಯಾಪ್ತಿಯೊಳಗಿನ ಸಾಮಗ್ರಿಗಳು, (ಬಳಕೆ, ವಸ್ತುಗಳು)
ಜನರ ವರ್ತನೆಗಳು,
ಚಿಂತನೆಗಳು, ಅನುಭವಗಳು, ಕಲಾ
ನೈಪುಣ್ಯತೆಗಳು- ಸಾಮಾಜಿಕ ಶಿಷ್ಟಾಚಾರಗಳು, ಜಾತಿ ವ್ಯವಸ್ಥೆ, ನಂಬಿಕೆ, ಮೌಢ್ಯತೆ, ಹೆಣ್ಣು-ಗಂಡು
ಲಿಂಗತಾರತಮ್ಯ ಶಾಸ್ತ್ರಗಳು, ಹೀಗೆ
ಒಂದೇ ಎರಡೇ ನೂರಾರು ವಿಚಾರಗಳು ಸಾಂದರ್ಭಿಕವಾಗಿ
ಬಂದು ಕಾವ್ಯ ಕೃತಿಯಲ್ಲಿ ಮೂಡಿಬಂದಿರುತ್ತವೆ. ಈ ಹಿನ್ನೆಲೆಯಲ್ಲಿ ಇಲ್ಲಿಯವರೆಗೂ ಅಧ್ಯಯನಕ್ಕೊಳ ಪಡದ ಬಹುಮಟ್ಟಿಗೆ ಅಲಕ್ಷಿತವಾಗಿಯೇ ಉಳಿದಿರುವ ಶಾಂತಲಿಂಗದೇಶಿಕನ
ಭೈರವೇಶ್ವರ ಕಾವ್ಯದ ಕಥಾಮಣೀಸೂತ್ರರತ್ನಾಕರ ಸಂಕಲಿತ ಕಾವ್ಯದಲ್ಲಿ ಕಂಡುಬರುವ ಸಾಂಸ್ಕೃತಿಕ ಅಂಶಗಳನ್ನು ಇಲ್ಲಿ ಗಮನಿಸುವ ಪ್ರಯತ್ನವನ್ನು ಮೊದಲಬಾರಿಗೆ ಮಾಡಲಾಗಿದೆ.
ಕವಿಯ ಇತಿವೃತ್ತ: ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ ಕೃತಿಯ ಸಮಾಪ್ತಿ
ವಾಕ್ಯದಲ್ಲಿಯ `ಭಕ್ತಿ ಜ್ಞಾನ ವೈರಾಗ್ಯವೇ ರೂಪುವೆತ್ತ ಷಟ್‍ಸ್ಥಲಾಚಾರ್ಯ
ವಿರಕ್ತ ನಮಃ ಶಿವಾಯ ದೇವರೆಂಬ ಸದ್ಗುರು ಮೂರ್ತಿಯಲ್ಲಿ ಅವರ ಮಹಾನುಭಾವ ವಾಕ್ಯ ಪ್ರಸನ್ನ
ಪ್ರಸಾದಾಮೃತಮಂ ಭೈರವದೇವನ ಕಾವ್ಯದಲ್ಲಿ ಸೂಚನೆಯಾಗಿರ್ದ ಕಥೆಗಳನ್ನು ವಿಶಾಲವಾಗಿ ಬರೆದು
ಸಂಗ್ರಹಿಸೆಂದು ನಿರೂಪಿಸೆ' ಎನ್ನುವ
ಹೇಳಿಕೆಯಿಂದ ಈ ಕೃತಿಯನ್ನು ರಚಿಸಿದ ಕವಿಯ ಹೆಸರು ಶಾಂತಲಿಂಗದೇಶಿಕ ಎಂಬುದು ವ್ಯಕ್ತವಾಗುತ್ತದೆ.
ಈ ಕೃತಿಯಲ್ಲಿಯ ಕವಿಯನ್ನು ಕುರಿತ ಹಾಗೆ ಆಂತರೀಕ ಸಾಕ್ಷ್ಯಗಳಿಂದ ತಿಳಿದುಬರುವ ಸಂಗತಿಗಳೆಂದರೆ
-
1.
ಈ ಕಾವ್ಯದ ಕರ್ತೃ ಶಾಂತಲಿಂಗ ದೇಶಿಕ
2.
ಈತನ ಗುರು ಷಟ್‍ಸ್ಥಲಾಚಾರ್ಯ ವಿರಕ್ತ ನಮಃ ಶಿವಾಯ ದೇವರು
3.
ಕನ್ನಡ, ಸಂಸ್ಕೃತ, ಪ್ರಾಕೃತ, ಮರಾಠಿ, ತೆಲುಗು, ತಮಿಳು ಭಾಷೆಗಳಲ್ಲಿ ಬಲ್ಲಿದನಾಗಿ ವೇದಾಗಮ ಪುರಾಣ, ಇತಿಹಾಸಗಳ ಸಾರವನ್ನು ಹೀರಿ ಈ ಕೃತಿಯನ್ನು ರಚಿಸಿದ್ದಾನೆ.
ಕೃತಿಯು ರಚನೆಗೊಂಡ ಕಾಲದ ಬಗೆಗೆ ಕವಿಯೇ ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ.`ಶಾಲಿವಾಹನ ಶಕ 1594ನೆಯ
ಪರಿಧಾವಿ ಸಂವತ್ಸರದ ಮಾರ್ಗಶಿರ ಮಾಸ ಶುದ್ಧ 10
ಉತ್ತರ ಭಾದ್ರಪದ ನಕ್ಷತ್ರ ಶನಿವಾರದಲ್ಲಿ ಸಂಗ್ರಹಿಸಿ ಬರೆದು ಸಂಪೂರ್ಣವಾಯಿತು' ಎನ್ನುವ ಉಲ್ಲೇಖದಿಂದ ಈ ಕೃತಿಯು ಕ್ರಿ.ಶ.1672ರಲ್ಲಿ ರಚನೆಯಾಗಿದೆ. ಕವಿಯ ವೈಯಕ್ತಿಕ ವಿವರಗಳ ಬಗೆಗೆ ಈ
ಕೃತಿಯಲ್ಲಾಗಲೀ,
ನಂತರದ ಕೃತಿಗಳಲ್ಲಾಗಲೀ
ತಿಳಿದುಬಂದಿಲ್ಲ. ಕವಿಯು
ಷಟ್‍ಸ್ಥಲಾಚಾರ್ಯ ವಿರಕ್ತ ನಮಃ ಶಿವಾಯ ದೇವರ ಶಿಷ್ಯನಾಗಿ ವಿರಕ್ತಾಶ್ರಮವನ್ನು ಸ್ವೀಕರಿಸಿದಂತೆ
ತಿಳಿದುಬಂದಿದೆ. `ಶಾಂತಲಿಂಗ ದೇಶಿಕ' ಹೆಸರು ಈ ಅಂಶವನ್ನು ಪುಷ್ಟೀಕರಿಸುತ್ತದೆ. `ದೇಶಿಕ' ಅಂದರೆ
ಗುರು,
ಮಾರ್ಗದರ್ಶಕ ಎಂದು ಹೇಳುವುದುಂಟು. ದೇಶಿಕರು
ನಿರಾಭಾರಿಗಳಾಗಿದ್ದು ಮನೆ, ಮಾರು, ಕುಲ, ಕುಟುಂಬಗಳನ್ನು
ತೊರೆದು ದೇಶವನ್ನು ಸಂಚರಿಸುತ್ತ ಶಿವಾನುಭವ ಸಂಪನ್ನರಾಗಿರುವವರು. ವೀರಶೈವ ಸಾಹಿತ್ಯದಲ್ಲಿ
ಅಲ್ಲಲ್ಲಿ ಇಂತಹ ದೇಶಿಕರ ಪ್ರಸ್ತಾಪ ಬಂದಿದೆ. ಉದಾ: 1. ಮುರಿಗೆಯ ದೇಶಿಕ 2. ಸದಾಶಿವ ದೇಶಿಕ 3. ಷಡಕ್ಷರ
ದೇವರ ಗುರು ಪರಂಪರೆಯ ಚಿಕ್ಕವೀರ ದೇಶಿಕ ಶಿಖಾಮಣಿ ಇತ್ಯಾದಿಯವರನ್ನು ಹೆಸರಿಸಬಹುದು. ಈ
ಹಿನ್ನೆಲೆಯಲ್ಲಿ `ದೇಶಿಕ' ಹೆಸರನ್ನು
ಅನ್ವರ್ಥವಾಗಿ ಹೊತ್ತಿರುವಂತೆ ಶಾಂತಲಿಂಗ ಕವಿಯು ವಿರಕ್ತಾಶ್ರಮಿ ಯಾಗಿರಬೇಕು ಎಂಬುದಾಗಿ
ತಿಳಿದುಬರುತ್ತದೆ. ವಿರಕ್ತಾಶ್ರಮಿಯಾದ ಶಾಂತಲಿಂಗರು ತನ್ನ ತಂದೆ-ತಾಯಿಗಳ ಹೆಸರು, ಜನ್ಮಸ್ಥಳ, ಪ್ರಾದೇಶಿಕ ವಿಷಯಗಳ ಬಗೆಗೆ ನಿರುತ್ತರರಾಗಿದ್ದಾರೆ. ಪೂರ್ವಾಶ್ರಮ
ನಿರಸನ ಮಾಡಿದ ವಿರಕ್ತಾಶ್ರಮವಾಸಿಗಳಿಗೆ ಹಿಂದಿನ ಸಂಬಂಧ ತಪ್ಪಿ ಹೋಗುವುದರಿಂದ ಅವರು ಕೇವಲ
ಗುರುವಿನ ಕರಕಮಲ ಸಂಜಾತರಾದ್ದರಿಂದ ಗುರುವಿನ ಹೆಸರನ್ನು ಮಾತ್ರ ಉಲ್ಲೇಖಿಸುವುದುಂಟು. ಶಾಂತಲಿಂಗ
ದೇಶಿಕರು ಮಾಡಿರುವುದು ಅದನ್ನೇ. ಕವಿಯ ಜನ್ಮಸ್ಥಳದ ಬಗೆಗೆ ಈ
ಕೃತಿಯನ್ನು ಸಂಪಾದಿಸಿದ ಸಂಪಾದಕರುಗಳಾದ ಆರ್.ಸಿ.ಹಿರೇಮಠ ಮತ್ತು ಎಂ.ಎಸ್.ಸುಂಕಾಪುರ ಅವರು ಉತ್ತರ
ದೇಶ ಎಂದು ಹೇಳಿದ್ದಾರೆ. ಅಂದರೆ ಉತ್ತರ ಕರ್ನಾಟಕದವನಾಗಿರಬೇಕು ಎಂದು ಊಹಿಸಿದ್ದಾರೆ. ಅವರು
ಊಹಿಸಲು ಕಾರಣ ಇಷ್ಟೇ. ಈ ಕೃತಿಯನ್ನು ಹೋಲುವಂತಹ ಭೈರವೇಶ್ವರ ಕಾವ್ಯದ ಕಥಾಸಾಗರ ಮತ್ತು ಉಚಿತ
ಕತೆಗಳು ಸಂಕಲನ ಕೃತಿಯನ್ನು ಸಿದ್ಧಪಡಿಸಿದ ಉತ್ತರ ದೇಶದ ಬಸವಲಿಂಗನು (ಕಾಲ ಕ್ರಿ.ಶ.1600) ಉತ್ತರ ದೇಶದವನಾಗಿದ್ದು, ಅದೇ ಮಾದರಿಯಲ್ಲಿ ಆಕರ ಗ್ರಂಥವನ್ನು ಹೋಲುವ ರೀತಿಯಲ್ಲಿ
ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರವನ್ನು ಸಂಕಲಿಸಿರುವ ಶಾಂತಲಿಂಗದೇಶಿಕನು ಉತ್ತರ
ನಾಡಿನವನಾಗಿದ್ದಾನೆ ಎಂದು ಊಹಿಸಿದ್ದಾರೆ. ಆದರೆ ಹಸ್ತಪ್ರತಿ ತಜ್ಞರಾದ ಶ್ರೀ ಎಸ್.ಶಿವಣ್ಣನವರು
ಇತ್ತೀಚೆಗೆ ಉತ್ತರ ದೇಶದ ಬಸವಲಿಂಗನ ಕಾಲವನ್ನು ಕ್ರಿ.ಶ.1600ಕ್ಕೆ ಬದಲಾಗಿ ಕ್ರಿ.ಶ.1678-79 ಎಂದು ಆಕರಗಳ ಹಿನ್ನೆಲೆಯಲ್ಲಿ ಖಚಿತಪಡಿಸಿದ್ದಾರೆ. ಹೀಗಾಗಿ
ಇಲ್ಲಿಯವರೆಗೂ ತಾಳಿದ್ದ ಉತ್ತರ ದೇಶದ ಬಸವಲಿಂಗನ ಸಂಕಲಿತ ಕೃತಿಗಳನ್ನು ಅನುಸರಿಸಿ ಶಾಂತಲಿಂಗ
ದೇಶಿಕನು ಈ ಕೃತಿಯನ್ನು ಸಿದ್ಧಪಡಿಸಿದ್ದಾನೆ ಎನ್ನುವ ಅಭಿಪ್ರಾಯವನ್ನು ನಿರಾಕರಿಸಬೇಕಾಗಿದೆ.
ಯಾಕೆಂದರೆ ಈ ರೀತಿಯ ಮಹತ್ವಪೂರ್ಣ ಸಂಕಲನ ಕೃತಿಯನ್ನು ಉತ್ತರ ದೇಶದ ಬಸವಲಿಂಗನಿಗಿಂತ ಮೊದಲೇ
ಸಿದ್ಧಪಡಿಸಿದ ಕೀರ್ತಿ ಶಾಂತಲಿಂಗ ದೇಶಿಕನಿಗೆ ಸಲ್ಲುತ್ತದೆ. ಹೀಗಾಗಿ ಸಂಪಾದಕರ ಅಭಿಪ್ರಾಯವನ್ನು
ಪುಷ್ಟೀಕರಿಸಲು ಸಾಧ್ಯವಿಲ್ಲ. ಕವಿಯು ಬಸವಪೂರ್ವ ಯುಗ, ಬಸವಯುಗ ಮತ್ತು ಬಸವೋತ್ತರ ಯುಗದ ನೂತನ ಶರಣರ ಬಗೆಗೆ
ಪ್ರಸ್ತಾಪಿಸುವಾಗ ಕಲ್ಯಾಣ ನಾಡಿನ ಶರಣರ ಜನ್ಮಸ್ಥಳ, ಪ್ರಾದೇಶಿಕ ನೆಲೆ ಇತ್ಯಾದಿ ಅಂಶಗಳ ಬಗೆಗೆ ಖಚಿತ ಸಂಗತಿಗಳನ್ನು
ವ್ಯಕ್ತಪಡಿಸಿರುವುದರಿಂದ ಕಲ್ಯಾಣ ನಾಡಿನ ಭೌಗೋಳಿಕ ಪ್ರದೇಶದ ಪರಿಚಯ ವಿಶೇಷವಾಗಿದ್ದಂತೆ
ಕಂಡುಬರುತ್ತದೆ. ಹೀಗಾಗಿ ಕಲ್ಯಾಣ ಕರ್ನಾಟಕ ನಾಡಿನವನಾಗಿದ್ದಿರಬೇಕು ಎಂದು ಊಹಿಸಲು ಅವಕಾಶ ಇದೆ.
ಈ ಸಂಕಲನ ಕೃತಿ ರಚನೆಗೆ ಹಿನ್ನೆಲೆಯಾಗಿರುವ ಭೈರವೇಶ್ವರನ ಚರಿತೆ: ಮೋಪೂರಿನ ದೊರೆ ಸಂಗಮ
ರಾಜ ಮತ್ತು ಮಹಾದೇವಿಯರೆಂಬ ಶಿವಭಕ್ತರ ಉದರದಲ್ಲಿ ಜನಿಸಿದ ಭೈರವ ರಾಜನು ಪ್ರಹುಡಾಚಾರ್ಯನೆಂಬ
ಪುರಾಣಿಕನಿಂದ ಕೀರ್ತಿಶಾಲಿಗಳಾದ ಅನೇಕ ದಾನವೀರ ದೊರೆಗಳ ಚರಿತ್ರೆಯನ್ನು, ಶೈವ-ವೀರಶೈವದನ್ವಯ ಮುಕ್ತರಾದ ಮಹಾನುಭಾವರ
ಚರಿತ್ರೆಗಳನ್ನು ಕೇಳಿ ಅವರಂತೆ ಮೋಕ್ಷಾಪೇಕ್ಷಿಯಾಗುವನು. ಸ್ವಪ್ನದಲ್ಲಿ ಸೋಮನಾಥನು ಬಂದು
ಮಲ್ಲಿಪಟ್ಟಣಕ್ಕೆ ಹೋಗಬೇಕೆಂದು ಅಪ್ಪಣೆ ಕೊಡುವನು. ಅರಸೊತ್ತಿಗೆಯನ್ನು ಬಿಟ್ಟು ಪತ್ನಿ ಪುತ್ರ
ಸಮೇತನಾಗಿ ಭೈರವರಸನು ಮಲ್ಲಿ ಪಟ್ಟಣಕ್ಕೆ ಬರುವನು. ಭೈರವ ರಾಜನು ಹಾಲ ಸೋಮೇಶ್ವರನ ರೂಪದಿಂದ ಬಂದ
ಸೋಸಲೆಯ ಸೋಮನಾಥನಿಂದ ದೀಕ್ಷೆಯನ್ನು ಪಡೆದು ಸೋಸಲೆಗೆ ತೆರಳುವನು. ಅಲ್ಲಿ ಶಿವಭಕ್ತಿಯಲ್ಲಿ
ಲೀನನಾಗಿ ಬಸವಣ್ಣನಂತೆ ಅನೇಕ ಪವಾಡಗಳನ್ನೆಸಗುವನು. ಈತನ ಭಕ್ತಿಯ ಖ್ಯಾತಿ ದಶದಿಕ್ಕುಗಳನ್ನು
ವ್ಯಾಪಿಸುವುದು. ಸೋಮನಾಥನೇ ನಾನಾ ರೂಪದಿಂದ ಬಂದು ಅದನ್ನು ಪರೀಕ್ಷೆ ಮಾಡುವನು. ಆ ದಿವ್ಯಗಳೆಲ್ಲ
ಭೈರವ ದೇವನ ಭಕ್ತಿಗೆ ಪುಟವಿಟ್ಟ ಕುಂದಣದಂತೆ ತೊಳಗಿ ಬೆಳಗುವುದು. ಕೊನೆಯಲ್ಲಿ
ಸೋಮನಾಥನು ಭೈರವರಸನನ್ನು ಕೈಲಾಸಕ್ಕೆ ಕರೆಯಲು, ಈಗ
ಬಾರನೆಂದು ಹೇಳಿ ಗಣಾಧೀಶ್ವರರ ಸನ್ನಿಧಿಯಲ್ಲಿ ತಾವು ಶಿವಸಾಯುಜ್ಯವನ್ನು ಪಡೆಯುವ ದಿನವನ್ನು
ವಿವರಿಸುವರು. ಎಲ್ಲರ ಸಮ್ಮುಖದಲ್ಲಿ ಗಣವರರಿಗೆ ಬೇಡಿದುದನ್ನು ಮನದಣಿಯವಿತ್ತು ಅವರ ಆಶೀರ್ವಾದ
ಪಡೆದು ಸೋಮನಾಥನು ಧ್ಯಾನಪರನಾಗಿ ಲಿಂಗೈಕ್ಯನಾಗುವನು.
ಕೃತಿಯ ಮೂಲವ್ಯಕ್ತಿ ಭೈರವೇಶ್ವರನ ಕಥೆ ಕವಿ ಕಲ್ಪಿತವಾದುದಲ್ಲ, ಐತಿಹಾಸಿಕವಾದುದು ಎಂಬುದನ್ನು ಸಂಶೋಧಕರು ಗುರುತಿಸಿದ್ದಾರೆ.
ಕಾವ್ಯದಲ್ಲಿ ಉಲ್ಲೇಖಿತವಾಗಿರುವ ಮೋಪೂರು ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪುಲಿವೆಂಡ್ಲು
ತಾಲ್ಲೋಕಿನಲ್ಲಿದೆ. ಅಲ್ಲಿ ಭೈರವ ಹೆಸರಿನ ದೇವಾಲಯ ಇದೆ. ಮೋಪೂರು ಚೋಳರ ಆಧಿಪತ್ಯಕ್ಕೆ
ಒಳಪಟ್ಟಿದ್ದು ಮಾಂಡಳೀಕರು ಆಳ್ವಿಕೆ ನಡೆಸುತ್ತಿದ್ದುದರ ಬಗೆಗೆ ಶಾಸನಗಳಿಂದ ತಿಳಿದುಬರುತ್ತದೆ.
ಮೋಪೂರಿನಲ್ಲಿ ಮಾಂಡಳಿಕ ಮನೆತನಕ್ಕೆ ಸಂಬಂಧಪಟ್ಟವನಾದ ಭೈರವರಾಜನು ಶಿವಭಕ್ತಿಯ ಉತ್ಕಟತೆಯಿಂದಲೋ
ಅಥವಾ ಬೇರಾವ ಕಾರಣದಿಂದಲೋ ರಾಜ್ಯವನ್ನು ತೊರೆದು ಕನ್ನಡ ನಾಡಿಗೆ ಅಂದರೆ ಮಲ್ಲಿಪಟ್ಟಣ, ಸೋಸಲೆಯ ಕಡೆಗೆ ಪಯಣಿಸಿದಂತೆ ಕಂಡುಬರುತ್ತದೆ. ಹೀಗಾಗಿ ಈ
ಕೃತಿಯಲ್ಲಿ ಬರುವ ಮೋಪೂರು ಐತಿಹಾಸಿಕ ಸ್ಥಳವಾಗಿದ್ದು; ಅಲ್ಲಿರುವ ಭೈರವ ದೇವಾಲಯದ ಬಗೆಗೆ ಶಾಸನಗಳ ಉಲ್ಲೇಖದ ಜೊತೆಗೆ ಈ
ಕಾವ್ಯದ ಆರಂಭದಲ್ಲಿಯೂ ಉಲ್ಲೇಖಿತವಾಗಿದೆ. ಈ ಕೃತಿಯ ಪ್ರಾರಂಭದ ಪದ್ಯಗಳಲ್ಲಿಯ ವಿವರಣೆಯಿಂದ
ಮೋಪೂರು ರಾಜಧಾನಿಯಾಗಿದ್ದು ಅಲ್ಲಿಯ ದೊರೆ ಸಂಗಮರಾಜ, ಆತನ ಮಗನೇ ಭೈರವನೆಂದು ತಿಳಿದುಬರುತ್ತದೆ. ಈ ಕೃತಿಯಲ್ಲಿಯ `ಬಸವಾದಿ ಪ್ರಮಥರು ಮರ್ತ್ಯಲೋಕದ ಮಣಿಹವಂ ಪೂರೈಸಿ ಕೈಲಾಸಕ್ಕೆಯ್ದಿ
ಘನಸುಖದಿಂದಿರಲು,
ಇತ್ತ ಭೂಲೋಕದಲ್ಲಿ ವೀರಶೈವಾಚಾರವೆಲ್ಲವಂ ಮಸುಳಿಸಿ
ಪೋಗಲು ಕಾಲಸಂಹರನೆಂಬ ಗಣಾಧೀಶ್ವರನನ್ನು ಶಿವನು ಕರೆದು ಭೂಲೋಕಕ್ಕೆ ಹೋಗಿ ವೀರಶೈವಾಚಾರವನುಂಟು
ಮಾಡಿ ಪವಾಡಗಳ ಗೆಲಿದು ವಾದಮಂ ಖಂಡಿಸಿ ಗೆಲಿದು ನೀನಿರುತಿರಲ್ಕೆ ನಾಂ ಬಂದು ಕೈಲಾಸಕ್ಕೆ
ಕರೆದುಕೊಂಡು ಬಪ್ಪೆನು, ಪೋಗೆನಲು' ಆ ವ್ಯಕ್ತಿಯೇ ಭೈರವದೇವನಾಗಿ ಭೂಲೋಕದಲ್ಲಿ ಅವತರಿಸುತ್ತಾನೆ
ಎಂದಿದೆ. ಈ ಹೇಳಿಕೆಯಲ್ಲಿಯ ಅಂಶಗಳನ್ನು ಸಾಂಕೇತಿಕವಾಗಿ ಐತಿಹಾಸಿಕ ಹಿನ್ನೆಲೆಯಲ್ಲಿ
ಪರಿಗಣಿಸುವುದಾದರೆ `ಬಸವಾದಿ ಪ್ರಮಥರ ನಂತರದ
ಕಾಲದವನು ಎಂಬುದು ವ್ಯಕ್ತವಾಗುತ್ತದೆ. ಭೈರವದೇವನು 12ನೇ ಶತಮಾನದ ಕೊನೆಯ ಭಾಗದಲ್ಲಿ ಜನಿಸಿದ್ದು ಹಾಲ ಬಸವೇಶ್ವರನೆಂಬ
ಗುರುವಿನಿಂದ ಲಿಂಗದೀಕ್ಷೆಯನ್ನು ಪಡೆದಿದ್ದಾನೆ' ಎಂದೆನಿಸುತ್ತದೆ.
ಭೈರವದೇವನು ನೆಲೆನಿಂತ ಸೋಸಲೆಯು ಈಗಿನ ಮಂಡ್ಯಜಿಲ್ಲೆಯ ಕೆ.ಆರ್.ಪೇಟೆ
ತಾಲ್ಲೋಕಿನಲ್ಲಿ ಕಂಡುಬರುವ ಸಾಸಲು ವೇ ಆಗಿದೆ. ಇಲ್ಲಿ ಭೈರವರಾಜನ ದೀಕ್ಷಾಗುರುವಾದ ಹಾಲ ಸೋಮೇಶನ
ದೇವಾಲಯ ಇದೆ. ಸೋಮನಾಥ ದೇವಾಲಯದಲ್ಲಿರುವ ಕೆಲವು ವಿಗ್ರಹಗಳಲ್ಲಿ ಕುದುರೆ ಮೇಲೆ ಕುಳಿತ ಒಬ್ಬ
ರಾಜನ ಮೂರ್ತಿ ಇದ್ದು, ಅದು ಭೈರವ ರಾಜನಿಗೆ
ಸಂಬಂಧಪಟ್ಟದ್ದಾಗಿರಬೇಕೆಂಬ ಅಭಿಪ್ರಾಯ ಇದೆ. ಸಾಸಲುವಿನಲ್ಲಿ ಈಗಲೂ ಭೈರವದೇವನು ಕೈಲಾಸಕ್ಕೆ ಹೋದ
ಸ್ಥಳವನ್ನು,
ಆತನ ರಾಣಿ ಮಹಾದೇವಿಗೆ ಪ್ರಸಾದ ದೊರೆಯುತ್ತಿದ್ದ
ಸ್ಥಳವನ್ನು ಅಲ್ಲಿಯ ಜನ ತೋರಿಸುತ್ತಾರೆ. ಈ ಅಂಶಗಳಿಂದಾಗಿ ಭೈರವ ದೇವನು ಮಲ್ಲಿಪಟ್ಟಣದಿಂದ
ಸಾಸಲುವಿಗೆ ಬಂದು ನೆಲೆಸಿದ್ದು ಅನೇಕ ಪವಾಡಗಳನ್ನು ಎಸಗಿರಬೇಕು ಎಂದೆನಿಸುತ್ತದೆ.
ಭೈರವದೇವನು ಐತಿಹಾಸಿಕ ವ್ಯಕ್ತಿಯಾಗಿದ್ದು ರಾಜರಲ್ಲಿ ಶರಣ, ಶರಣರಲ್ಲಿ ರಾಜನಾಗಿ ಜನತೆಯಲ್ಲಿ ಭಕ್ತಿಭಾವನೆಯನ್ನು ಬೀರಿ
ಲಿಂಗಾಂಗ ಸಾಮರಸ್ಯವನ್ನು ಪಡೆದವನಾದ್ದರಿಂದಲೇ ಏನೋ ಭೈರವೇಶ್ವರನ
ಕಥೆ ನಾಡಿನಾದ್ಯಂತ ಹಬ್ಬಿದ್ದು, ಈತನ
ಹೆಸರಿನಲ್ಲಿ ಕಾವ್ಯಗಳು ಹುಟ್ಟಿಕೊಳ್ಳಲು ಕಾರಣವಾಗಿವೆ ಎಂದೆನಿಸುತ್ತದೆ. ಇತ್ತೀಚಿನ ಸಂಶೋಧನೆಯ
ಪ್ರಕಾರ ಭೈರವರಸನನ್ನು ಕುರಿತು ಕಾಲಾನುಕ್ರಮದಲ್ಲಿ ಒಟ್ಟು ಏಳು
ಕೃತಿಗಳು ರಚನೆಯಾಗಿವೆ.
ಕ್ರ.ಸಂ ಕವಿ ಕೃತಿ
ಕಾಲ ಸ್ವರೂಪ
1 ಕಿಕ್ಕೇರಿಯ
ನಂಜುಂಡಾರಾಧ್ಯ ಭೈರವೇಶ್ವರ ಕಾವ್ಯ ಕ್ರಿ.ಶ.1550 ಮಿಶ್ರ ಷಟ್ಪದಿ
2 ಕುಮಾರ
ಚನ್ನಬಸವ ಸಾಸಲ ಭೈರವೇಂದ್ರ ಚರಿತ್ರೆ ಕ್ರಿ.ಶ.1550 ---
3 ಶಾಂತಲಿಂಗ
ದೇಶಿಕ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ
ರತ್ನಾಕರ ಕ್ರಿ.ಶ.1672 ಗದ್ಯ
4 ಉತ್ತರ
ದೇಶದ ಬಸವಲಿಂಗ ಭೈರವೇಶ್ವರ ಕಾವ್ಯದ ಕಥಾಸಾಗರ
ಮತ್ತು ಉಚಿತ ಕಥೆಗಳು ಕ್ರಿ.ಶ.1678-29 ಗದ್ಯ
5 ಸಿದ್ಧಲಿಂಗ
ಶಿವಯೋಗಿ ಭೈರವೇಶ್ವರ ಪುರಾಣ ಕ್ರಿ.ಶ.1730 ಚಂಪೂ
6 ಗುರುಚೆನ್ನಬಸವೇಶ್ವರ
ಶಿಷ್ಯಕೃತ ಭೈರವೇಶ್ವರ ಪವಾಡ --- ತಾರಾವಳಿ
7. ಜಲತ್ಕಂಠ
ಗುರುಲಿಂಗದೇಶಿಕ ಭೈರವೇಶ್ವರ
ಕಾವ್ಯ ಷಟ್ಪದಿಕಾವ್ಯ
ಈ ಏಳುಕೃತಿಗಳಲ್ಲಿ 4
ಕಾವ್ಯಗಳು,
ಒಂದು ತಾರಾವಳಿ ಹಾಗೂ ಎರಡು ಸಂಕಲಿತ ಗದ್ಯ
ಕೃತಿಗಳಾಗಿವೆ. ಈ ಗದ್ಯಕೃತಿಗಳು ಭೈರವೇಶ್ವರನ ಕಥೆಯನ್ನು ವಿಸ್ತರಿಸುವ ಕಥಾಮಣಿ ಮತ್ತು
ಕಥಾಸಾಗರಗಳಾಗಿವೆ. ಈ ಗದ್ಯಕೃತಿಗಳಲ್ಲಿ ಮೊದಲನೆಯದು ಶಾಂತಲಿಂಗ ದೇಶಿಕನ ಕೃತಿಯಾಗಿದೆ.
ಭೈರವೇಶ್ವರನ ಕಾವ್ಯದ ಕಥಾಮಣಿಸೂತ್ರರತ್ನಾಕರ ಕೃತಿಯ ಆಕರಗಳು: ಬೇರೆ ಬೇರೆ ಭಾಷೆಗಳಲ್ಲಿಯ ಪ್ರಾಚೀನ ಕಾವ್ಯ ಪುರಾಣಗಳಲ್ಲಿ
ಪ್ರಸ್ತಾಪಿಸಲ್ಪಟ್ಟಿರುವ ಐತಿಹಾಸಿಕ ಹಾಗೂ ಪುರಾಣ ಪುರುಷರಿಗೆ ಸಂಬಂಧಿಸಿದ ಮಾಹಿತಿಯನ್ನು ಒಂದೆಡೆ
ಸಂಗ್ರಹಿಸಿ ಗದ್ಯ ಮತ್ತು ಪದ್ಯ ಕಾವ್ಯಗಳಲ್ಲಿ ವಿವರಿಸುವ ಒಂದು ಪದ್ಧತಿಯು ಕನ್ನಡ ಸಾಹಿತ್ಯದಲ್ಲಿ
ಪರಂಪರೆಯಾಗಿ ಬೆಳೆದಿದೆ. ಜೈನಧರ್ಮದ ಸಾಹಿತ್ಯದಲ್ಲಿ ವಡ್ಡಾರಾಧನೆ (ಆರಾಧನಾ ಕರ್ನಾಟ ಟೀಕಾ), ಚಾವುಂಡರಾಯ ಪುರಾಣ, ನೊಂಪಿಯ ಕತೆಗಳು, ದೇವಚಂದ್ರನ
ರಾಜಾವಳಿ ಇತ್ಯಾದಿ ಈ ತೆರನಾದ ಕಾವ್ಯಗಳು ಕಂಡುಬಂದರೆ; ವೀರಶೈವ ಸಾಹಿತ್ಯದಲ್ಲಿ ಹರಿಹರನ ರಗಳೆಗಳು, ಭೀಮಕವಿಯ ಬಸವ ಪುರಾಣ, ಗುಬ್ಬಿಯ ಮಲ್ಲಣಾರ್ಯರ ವೀರಶೈವಾಮೃತ ಮಹಾಪುರಾಣ, ಲಕ್ಕಣ್ಣ ದಂಡೇಶನ ಶಿವತತ್ವಚಿಂತಾಮಣಿ, ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ, ಶೂನ್ಯಸಂಪಾದನಾ ಕೃತಿಗಳನ್ನು ಉದಾಹರಿಸಬಹುದು. ವೀರಶೈವ
ಕಾವ್ಯ-ಪುರಾಣಗಳು ಹಾಗೂ ಇನ್ನಿತರ ವೈದಿಕ ವಾಙ್ಮಯದ ಪುರಾಣಗಳನ್ನು ಆಧರಿಸಿ ಶಾಂತಲಿಂಗದೇಶಿಕನು ಈ
ಕೃತಿಯನ್ನು ಸಂಕಲಿಸಿದ್ದಾನೆ. ಕವಿಯ ಈ ಸಂಕಲಿತ ಕೃತಿಯಲ್ಲಿ ಪೂರ್ವದ ಕಾವ್ಯ-ಪುರಾಣಗಳಲ್ಲಿಯ
ಕಥೆಗಳನ್ನು ಸಂಗ್ರಹಿಸಿ ಗದ್ಯ ಪ್ರಕಾರದಲ್ಲಿ ಹೇಳ ಹೊರಟಿದ್ದಾನೆಯೇ ಹೊರತು ಕಲ್ಪಿತ ಸಂಗತಿಗಳನ್ನು
ಪ್ರಸ್ತಾಪಿಸಿಲ್ಲ.
ಈ ಕೃತಿಯು ತನ್ನ ಕಥಾಗರ್ಭದಲ್ಲಿ ಅಡಗಿಸಿಕೊಂಡಿರುವ ನೂತನ ಪುರಾತನ ಶಿವಶರಣರಿಗೆ
ಸಂಬಂಧಿಸಿದ ಸಂಗತಿಗಳಿಂದಾಗಿ ಇಂದಿಗೂ ಸಾಹಿತ್ಯ-ಸಂಸ್ಕೃತಿಯನ್ನು ಅಧ್ಯಯನ ಮಾಡುವ ಆಸಕ್ತರಿಗೆ ಆಕರಗಣಿಯಾಗಿದೆ. ಅಪ್ಪಟ ಶಿವಭಕ್ತ ಭೈರವ ದೇವನ ಚರಿತ್ರೆಯನ್ನು ಹೇಳಹೊರಟ ಕವಿಯು
ಅದರ ಜೊತೆಗೆ ಅಸಂಖ್ಯಾತ ಶಿವಭಕ್ತರ ಕಥೆಯನ್ನು ಎಣೆದಿದ್ದಾನೆ. ಕೃತಿಯಲ್ಲಿಯ ಆಂತರಿಕ ಹೇಳಿಕೆಯಿಂದ
ಕವಿಯು ಕೃತಿ ರಚಿಸಿರುವಲ್ಲಿ ಕಲೆಹಾಕಿರುವ ಆಕರ ಕೃತಿಗಳ ಬಾಹುಳ್ಯ ವ್ಯಕ್ತವಾಗುತ್ತದೆ.
ಶಾಂತಲಿಂಗ ದೇಶಿಕನು ``ಸಕಲ
ವೀರಮಾಹೇಶ್ವರರುಗಳ ನಿರೂಪದಿಂದ ಭೈರವದೇವನ ಕಾವ್ಯದಲ್ಲಿ ಸೂಚನೆಯಾಗಿರ್ದ ಕಥೆಗಳನುವಿಶಾಲವಾಗಿ
ಬರೆದು ಸಂಗ್ರಹಿಸೆಂದು ನಿರೂಪಿಸೆ ಅವರ ಮಹಾನುಭಾವ ನಿರೂಪವಿಡಿದು ಮೂಲದರಿಷ್ಟವಾದ ಕಥೆಗಳಿಗೆ
ದೃಷ್ಟವಾದ ಉಪಕಥೆಗಳನು ಸಂಗ್ರಹಿಸುವದಕ್ಕೆ ಸಕಲ ವೇದಾಗಮ ಪುರಾಣ ಇತಿಹಾಸಂಗಳಲ್ಲಿ. . .
ಲಕ್ಷಣಶುದ್ಧವಾಗಿ ಪೇಳಲು ಪಟ್ಟ ವೀರಮಾಹೇಶ್ವರರ ಸಿದ್ಧಾಂತ, ವೀರಮಾಹೇಶ್ವರ ತಂತ್ರ, ವೀರಮಾಹೇಶ್ವರರಾಚಾರಸಂಗ್ರಹ, ಸೋಮನಾಥನ ಭಾಷ್ಯೆ, ಪ್ರಾಕೃತ ಇಂತೀ
ಭಾಷೆಗಳಿಂದ ಸಂಗ್ರಹಿಸಿದ ಪ್ರಕರಣಗಳಲ್ಲಿ ಪೇಳುತ್ತಿರ್ದ ಕಥೆಗಳನ್ನು, ಭಾರತ, ಮಹಾಭಾರತ, ಆರಾಧ್ಯ ಚಾರಿತ್ರ, ನನ್ನಯ್ಯನ ಕಾವ್ಯ, ಬಸವಚಾರಿತ್ರ, ಸಿಂಗಿರಾಜನ
ಕೃತಿ ಮೊದಲಾದ ಸಮಸ್ತ ಸಾಂಗತ್ಯ ಚಾರಿತ್ರದ ಕಥೆಗಳಿಗೆ ಮಾತೃ ಸ್ಥಾನವಾಗಿಪ್ಪುದು. ಬಸವಾದಿ
ಪ್ರಮಥರು ನಿರೂಪಿಸಿದ ಶೂನ್ಯಸಂಪಾದನೆ ಮೊದಲಾದ ವಚನಾಮೃತಸಾಗರದಲ್ಲಿ ಪೇಳುತ್ತಿರ್ದ ಕಂದ, ವೃತ್ತ, ಗ್ರಂಥ, ಸ್ಮೃತಿ-ಶೃತಿ, ಪದ-ಪದ್ಯ, ವಚನ, ರಗಳೆ, ಷಟ್ಪದ, ಪಂಚರತ್ನಸ್ವರೂಪದ ತಾರಾವಳಿಗಳು ಮೊದಲಾದವರಲ್ಲಿ
ಹೇಳಲ್ಪಟ್ಟ ಕಥೆಗಳಿಂ ನೋಡಿ ಪುರಾತನ ವಚನದ ಮೇಲೆ ಸಂಧಿ ವಿಡಿದು ಕಾವ್ಯದ ಕಥೆ ಸಂಗ್ರಹಕ್ಕೆ
ಬೇಕಾದುವನ್ನು ತೆಗೆದುಕೊಂಡು ಸಂಗ್ರಹಿಸಿದೆನು." ಕವಿಯ ಈ ಹೇಳಿಕೆಯ ಹಿನ್ನೆಲೆಯಲ್ಲಿ ಈ
ಸಂಕಲನ ಕೃತಿಯಲ್ಲಿ ಬಂದಿರುವ ಕಥೆಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಬಹುದಾಗಿದೆ.
1.
ಕನ್ನಡ ನಾಡಿನಲ್ಲಿ ಬಾಳಿಬೆಳಗಿದ ಶಿವಶರಣರು ಹಾಗೂ
ಶಿವಕವಿಗಳಿಗೆ ಸಂಬಂಧಿಸಿದ ಕಥೆಗಳು.
2.
ತಮಿಳುನಾಡು, ಗೂರ್ಜರ ಮೊದಲಾದ ನಾಡಿನ ಪುರಾತನ ಶಿವಭಕ್ತರ ಕಥೆಗಳು
3.
ಶಿವನ ಪಂಚವಿಂಶತಿ ಲೀಲೆಗಳು
4.
ರಾಮಾಯಣ, ಮಹಾಭಾರತ, ಹದಿನೆಂಟು
ಪುರಾಣ,
ಪಂಚತಂತ್ರ, ಬತ್ತೀಸಪುತ್ಥಳಿ, ಇಪ್ಪತ್ತೆಂಟು ಆಗಮ ಮುಂತಾದ ಭಾರತೀಯ ವಾಙ್ಮಯದಿಂದ ಎತ್ತಿಕೊಂಡ
ಕಥೆಗಳು ಈ ಕಥಾಸಾಗರವನ್ನು ನಿರೂಪಿಸುವಲ್ಲಿ ಕವಿಯ ಬಹು ಶ್ರುತತ್ವ, ಶ್ರಮ, ಪಾಂಡಿತ್ಯ, ವ್ಯುತ್ಪತ್ತಿ ಹಾಗೂ ಲೋಕಾನುಭವ ವ್ಯಕ್ತಗೊಂಡಿದೆ.
ಕೃತಿಯ
ಕಥಾವೈಶಿಷ್ಟ್ಯ: ಈ ಕೃತಿಯನ್ನು
ಆರ್.ಸಿ.ಹಿರೇಮಠ ಮತ್ತು ಎಂ.ಎಸ್.ಸುಂಕಾಪುರ ಅವರು ಹನ್ನೆರಡು ಹಸ್ತಪ್ರತಿಗಳನ್ನುಪಯೋಗಿಸಿಕೊಂಡು
ಎರಡು ಸಂಪುಟಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಮೂಲಕ 1964ರಲ್ಲಿ ಪ್ರಕಟಿಸಿದ್ದಾರೆ. ಈ ಕೃತಿಯ ಪ್ರಾರಂಭದಲ್ಲಿ ಕವಿಯು ಭೈರವ
ರಾಜನು ಮಾಡಿದನೆನ್ನಲಾದ ಶಿವಪಾರಮ್ಯವನ್ನು ಸಾರುವ ಹನ್ನೊಂದು ಪವಾಡಗಳನ್ನು ನಿರೂಪಿಸಿದ್ದಾನೆ.
ಒಟ್ಟು 5 ಸಂಧಿಗಳಲ್ಲಿ ಶಿವಶರಣರು ಹಾಗೂ ಶಿವಕವಿಗಳು ಹಾಗೂ
ಇತರೆಯವರಿಗೆ ಸಂಬಂಧಿಸಿದ 518
ಕಥೆಗಳನ್ನು ಗದ್ಯರೂಪದಲ್ಲಿ ಸಂಗ್ರಹಿಸಿ ಕೊಟ್ಟಿದ್ದಾನೆ. ಪ್ರತಿಯೊಂದು ಪ್ರಸಂಗವನ್ನು
ನಿರೂಪಿಸುವಾಗ ಮೊದಲಿಗೆ ಒಂದು ಅಂಶ ಷಟ್ಪದಿಯಲ್ಲಿ ಪ್ರಸಂಗದ ಸಾರವನ್ನು ನಿರೂಪಿಸಿ ನಂತರ
ಗದ್ಯದಲ್ಲಿ ವಿಸ್ತಾರವಾಗಿ ನಿರೂಪಿಸಿದ್ದಾನೆ. 4ನೇ
ಸಂಧಿಯಲ್ಲಿ ಭೈರವಾಂಕನಿಗೆ ಸಂಬಂಧಿಸಿದಂತೆ 22
ಕತೆಗಳನ್ನು ಅದಕ್ಕೆ ಪೂರಕವಾದ ನೂತನ-ಪುರಾತನ ಶರಣರು ಹಾಗೂ ಶಿವಕವಿಗಳಿಗೆ ಸಂಬಂಧಿಸಿದ ನೂರಾರು
ಉಪಕತೆಗಳನ್ನು ಹೊಂದಿಸಿ ಏಕರೂಪತೆಗೆ ಭಂಗ ಬರದಂತೆ ನಿರೂಪಿಸಿದ್ದಾನೆ.
ಸಂಸ್ಕೃತಿಯ
ಇತಿಹಾಸಕ್ಕೆ ಪ್ರಾಚ್ಯ ಅವಶೇಷಗಳು,ಸಾಹಿತ್ಯ
ಕೃತಿಗಳಲ್ಲೂ ದಾಖಲೆ ಲಭ್ಯವಾಗುತ್ತವೆ. ಕವಿ
ಕೃತಿಗಳು ಸಮಕಾಲಿನ ಬದುಕಿನ ಸಾಂಸ್ಕೃತಿಕ ದಾಖಲೆಗಳೆಂಬುದು ಈ ಕಾರಣಕ್ಕಾಗಿಯೇ. ಯಾವುದೇ ಕವಿ ಮತ್ತು ಆತ ರಚಿಸುವ ಕೃತಿಯು ತನ್ನ ಹಿಂದಣ ಮತ್ತು ಸಮಕಾಲೀನ ಜೀವನದ ಪ್ರಭಾವಕ್ಕೆ ಒಳಗಾಗಿರುತ್ತವೆ. ಹಿಂದಣ ಮತ್ತು
ಅಂದಂದಿನ ಜೀವನದ ವಿವಿಧ ಮುಖಗಳಿಗೆ ಪುರಾವೆಗಳು ಆ
ಕೃತಿಗಳಲ್ಲಿ ಲಭ್ಯವಾಗುತ್ತವೆ. ಹೀಗಾಗಿ
ಕ್ರಮಾನುಗತವಾಗಿ ಹತ್ತು ಹಲವು ಅತಿ ಮುಖ್ಯ ಕವಿಗಳ
ಕೃತಿಗಳನ್ನು ಸಾಂಸ್ಕೃತಿಕ
ದೃಷ್ಟಿಕೋನವನ್ನಿಟ್ಟುಕೊಂಡು ಅಭ್ಯಾಸ ಮಾಡಿದರೆ
ಸಂಸ್ಕೃತಿಯ ಏಳು-ಬೀಳಿನ ಇತಿಹಾಸವನ್ನು
ಕೂಡಾ ರಚಿಸಬಹುದಾಗಿದೆ. ಸಾಹಿತ್ಯಕೃತಿಗಳು, ಸಾಂಸ್ಕೃತಿಕ
ದಾಖಲೆಗಳನ್ನು ಒದಗಿಸುತ್ತವೆ.
ಹೀಗಾಗಿ ಪ್ರತಿಯೊಂದು ಕೃತಿಯನ್ನು
ಸಾಂಸ್ಕೃತಿಕ ದೃಷ್ಟಿಕೋನದಿಂದ ಅಭ್ಯಾಸ ಮಾಡಬೇಕಾಗುತ್ತದೆ.
ಹೀಗೆ ಒಂದೊಂದು ಕೃತಿಯ ಸಾಂಸ್ಕೃತಿಕ ಅಂಶಗಳ ಕುರಿತಾದ ವ್ಯಕ್ತಿಗತವಾದ ಅಧ್ಯಯನಗಳು ಒಂದು ಸಮಷ್ಟಿ ಅಭಿಪ್ರಾಯತಳೆಯುವುದಕ್ಕೆ ಪ್ರೇರಕವಾಗುತ್ತದೆ. ಮಾನವನ ಸಾಹಸ
ಗಾಥೆಯ ಸೃಷ್ಟಿ ಚಿತ್ರಣದೊಂದಿಗೆ ಇತಿಹಾಸವನ್ನು ಸಮಗ್ರ ಸ್ವರೂಪದಲ್ಲಿ ರಚಿಸಲು
ಸಹಾಯಕವಾಗುತ್ತದೆ. ಒಂದು ಕವಿ ಕೃತಿಯ
ಅಧ್ಯಯನವು ಸಾಂಸ್ಕೃತಿಕ ಅಧ್ಯಯನವಿಲ್ಲದೆ
ಪರಿಪೂರ್ಣವಾಗಲಾರದೆಂಬುದು ಈ ಕಾರಣಕ್ಕಾಗಿಯೇ
ಒಂದು ಕೃತಿಯ ಸಂಸ್ಕೃತಿಯ ಅಧ್ಯಯನ ಮಾಡುವುದೆಂದಾಗ ಹಲವು ಪ್ರಶ್ನೆಗಳು ಅಧ್ಯಯನಕಾರನೆದುರು
ಪ್ರತ್ಯಕ್ಷವಾಗುತ್ತದೆ. ಸಂಸ್ಕೃತಿ ಎಂದರೇನು
ಏನನ್ನು ಅಧ್ಯಯನ ಮಾಡುವುದು? ಎಷ್ಟನ್ನು ಅಧ್ಯಯನ ಮಾಡುವುದು? ಸಂಸ್ಕೃತಿಯೆನ್ನುವ ಪದದ ಪದರೊಳಗೆ ಅಡಕವಾಗಿರುವ ಅಂಶಗಳೇನು? ಸಂಸ್ಕೃತಿಯ ವ್ಯಾಪ್ತಿಯೇನು? ಈ
ಪ್ರಶ್ನೆಗಳಿಗೆ ಉತ್ತರ ಕಂಡಕೊಂಡಲ್ಲಿ ಸಂಸ್ಕೃತಿಯ
ಅಧ್ಯಯನ ಮಾಡಲು ಸಾಧ್ಯ. ಸಂಸ್ಕೃತಿಯೆಂದರೇನು? ಅದರ ವ್ಯಾಪ್ತಿಯೇನು? ಯಾವ
ಯಾವ ಸಂಗತಿಗಳನ್ನು ಸಂಸ್ಕೃತಿಯೆಂಬ ಶೀರ್ಷಿಕೆಯ
ಅಡಿಯಲ್ಲಿ ಸಂಗ್ರಹಿಸಿ ವಿಶ್ಲೇಷಣೆ- ಚರ್ಚೆ ನಡೆಸಬೇಕೆಂಬ ಸ್ಪಷ್ಟ ತಿಳುವಳಿಕೆ
ಇಲ್ಲದೆ ಹೊರಡುವ ಅಧ್ಯಯನ ದಿಕ್ಸೂಚಿ ಇಲ್ಲದ ನಾವೆಯಂತಾಗುವುದು.
`ಭೈರವೇಶ್ವರ
ಕಾವ್ಯದ ಕಥಾಮಣಿ ಸೂತ್ರ ರತ್ನಾಕರ'ಈ ಕೃತಿಯು ಒಂದು
ಸಾಂಸ್ಕೃತಿಕ ದಾಖಲೆಯಾಗಿದೆ. ಹೇರಳವಾದ
ಸಾಮಗ್ರಿ ಈ ಕೃತಿಯಲ್ಲಿ ಲಭ್ಯವಿದೆ. ಬಹಿರ್ ಬದುಕಿನ ವಸ್ತು ಸಾಮಗ್ರಿಯಲ್ಲಿದೆ. ಮನುಷ್ಯನ
ನಡೆ-ನುಡಿ,
ಮಾತುಕತೆ, ಆಚರಣೆ ವಿಧಿವಿಧಾನ, ಧರ್ಮ-ನೀತಿ, ತತ್ವ,ಕಲೆ, ಇತಿಹಾಸ,ಪುರಾಣ,ಜನ-ಜೀವನ
ಮೌಲ್ಯಗಳ ದರ್ಪಣವಾಗಿದೆ. ಅಂದರೆ ಇಡೀ ಕಾವ್ಯವು ಸಂಸ್ಕೃತಿಗೆ ಹಿಡಿದೊಂದು ಕನ್ನಡಿಯೆಂದರೂ
ಸರಿಯೇ.
ಈ ಕಾವ್ಯವನ್ನು ಚಿಕಿತ್ಸಕ ಬುದ್ಧಿಯಿಂದ
ಅಭ್ಯಾಸ ಮಾಡಿದಾಗ ಅನೇಕ ಸಾಂಸ್ಕೃತಿಕ ಸಂಗತಿಗಳು ತಿಳಿದು ಬರುತ್ತವೆ. ಅದರಲ್ಲೂ
ಅಪ್ಪಟ ಜಾನಪದ ಸಂಸ್ಕೃತಿಯ ದಿವ್ಯ ದರ್ಶನವೇ ಆಗುತ್ತದೆ. ನಮ್ಮ ಇಂದಿನ ಬದುಕಿನ
ಮೂಲ ಬೇರು- ಜನಪದರ ಜೀವನವಾಗಿದೆ.
ಆದ್ದರಿಂದ ಬದುಕಿನ ಹಿನ್ನೆಲೆಯರಿತಷ್ಟು
ಮುನ್ನಲೆಯ ಪರಿಕಲ್ಪನೆ ಮೂಡುತ್ತದೆ. ಹಿಂದಿನ
ಬದುಕು ಇಂದಿನ ಬದುಕಿನ
ತಳಹದಿಯಾಗಿದೆ. ಹಿಂದಿನ-ಇಂದಿನ
ಬದುಕು ಮುಂದಿನ ಬದುಕಿನ ರೂವಾರಿಯಾಗುತ್ತದೆ ಅಥವಾ ಬರುವ ಬದುಕಿನ
ಮಾರ್ಗದರ್ಶಕ ಶಕ್ತಿಯಾಗುತ್ತದೆ.
ಆದ್ದರಿಂದ ಭೈರವೇಶ್ವರ ಕಾವ್ಯ ಕಥಾಮಣಿ ಸೂತ್ರ ರತ್ನಾಕರದಲ್ಲಿ ಲಭ್ಯವಾಗಿರುವ ಸಾಂಸ್ಕೃತಿಕ ಸಂಗತಿಗಳನ್ನು
ಈ ಕೆಳಗಿನಂತೆ ಪಟ್ಟಿ ಮಾಡಬಹುದಾಗಿದೆ.
1)
ಪಾತ್ರೆಗಳು,
2)
ಕೆಲಸದ ಸಾಮಗ್ರಿಗಳು
3)
ಆಯುಧಗಳು,
4)
ಹೂಗಳು
5)
ವೃಕ್ಷ ಸಂಕುಲ
6)
ಹಣ್ಣುಗಳು
7)
ಮೂಲಿಕೆಗಳು
8)
ಪ್ರಾಣಿಗಳು
9)
ಪಕ್ಷಿಗಳು
10)
ವಸ್ತ್ರ-ಉಡುಗೆ
11)
ಆಭರಣಗಳು
12)
ಅಲಂಕಾರಿಕ ವಸ್ತುಗಳು
13)
ಅಡುಗೆಗಳು
14)
ವಾದ್ಯಗಳು- ಸಂಗೀತ ವಿಚಾರ
15)
ದಿನಬಳಕೆಯ ವಸ್ತುಗಳು
16)
ಸಿದ್ಧಿಗಳು
17)
ಧಾರ‍್ಮಿಕ ಸಾಧನಗಳು
18)
ಹಣಕಾಸು
19)
ಅಳತೆಗಳು
20)
ಕೊಡು-ಕೊಳುವಿಕೆ
21)
ದಾನದ ವಸ್ತುಗಳು
22)
ಕಾಯಕಗಳು
23)
ಮಾನವೀಯ ಸಂಬಂಧಗಳು
24)
ಆಚರಣೆಗಳು.
ಈ ವಿವರಗಳ ಬಗೆಗೆ ಈ ಸಂಕಲಿತ ಕೃತಿಯಲ್ಲಿ ಪ್ರಸ್ತಾಪಿವಾಗಿರುವ
ಅಂಶಗಳನ್ನು ಈ ಕೆಳಕಂಡಂತೆ ವಿವೇಚನೆಗೊಳಪಡಿಸಲಾಗಿದೆ. ಮೊದಲನೆಯದಾಗಿ ಅನೇಕ ಪಾತ್ರೆಗಳ ಹೆಸರು ಕೃತಿಯಲ್ಲಿ
ಉಲ್ಲೇಖವಾಗಿದೆ.
1)
`ರಕ್ತ ನೆಲಕ್ಕೆ
ಬೀಳದಂತೆ ಎಡದ ಕೈಯ್ಯ ಕಪುರವನೊಡ್ಡಿ” (ಭೈರವೇಶ್ವರ ಕಾವ್ಯದಕಥಾಮಣಿ
ಸೂತ್ರರತ್ನಾಕರ-ಭಾಗ-೧, ಪು.೧೨೨)
2)``ಮತ್ತೆ ತತ್ತರಿಸಿ ಗಳಿಗೆ ಬಟ್ಟಲ ಕಳಸಿಗೆಯ ಮೇಲೆ ಬಿದ್ದೊಡೆಹು'' ( ಅದೇ,ಕಥೇ೩೭೦ ಭಾಗ-೨,ಪು.೧೯೨)
3
``ಚಂಡಿಕಾ ಶಕ್ತಿಯು ಇವನ ಧರ‍್ಯಮಂ
ನೋಡಬೇಕೆಂದು ದೀರ್ಘ ಮೂಡೆಯನಿಕ್ಕಿಕೊಂಡು ಕೆಂಗೞಿಗಣ್ಣು...... ಪೆರ್ಗರ್ತಿ.... ರುಂಡಮಾಲೆ.... ಬಾಳ
ಬಟ್ಟಲು .... ನಡೆದು ಬರುವಲ್ಲಿ....''(ಅದೇ, ಕಥೆ೨೩೫, ಭಾಗ-೧, ಪು.೭)
4) ಘನಸಾರ
ಕಾಶ್ಮೀರ
ವಿನುತ ಭಾವನ್ನ ನೂ
ತನ ಸುಜವಾದಿ ಕಸ್ತೂರಿ
ಪನಿ ನೀರ ಪಾತ್ರೆ ಜೀ
ವನ ಯಂತ್ರ ಪೂನ್ನಂಡೆ
ಕನಕದಿ ರಚಿತ ದೇವಾಂಗ” (ಅದೇ,ಪದ್ಯ 21 ಪುಟ 269
ಸಂಧಿ 2,
ಸಂಪುಟ 1)
ಕಾಲೇ ಕಂಭ ದೇಹವೇ ದೇಗುಲ.... ಕರಣಂಗಳೇ ಗಣ
ತಿಂಥಿಣಿಯಾಗಿ ....... ತ್ರಿಗುಣದಡ್ಡಣಿಗೆ ಪರಿಪೂರ್ಣವೇ
ಪರಿವಾಣ”
(ಅದೇ,ಕಥೆ,೮೯,ಭಾಗ-೧ ಸಂಧಿ-೧, ಪು.೧೮೮)
“ಪಡುಗಮಂ ಪಿಡಿದು
ವಾಲೈಸುತ” (ಕಥೆ 133, ಪು.253, ಸಂಧಿ
1,
ಪುಟ 1)
ಈ ಉಧೃತ ಭಾಗಗಳಲ್ಲಿ ಜನಜೀವನದ ನಿತ್ಯದ ಬದುಕಿನಲ್ಲಿ ಬಳಕೆಯಾಗುತ್ತಿದ್ದ ಕಪ್ಪುರ,
ಬಾಳಬಟ್ಟಲು, ಗಳಿಗೆ ಬಟ್ಟಲು, ಕಸ್ತೂರಿ
ಪಾತ್ರೆ,
ಪನ್ನೀರ ಪಾತ್ರೆ, ಪೊನ್ನಂಡೆ, (ಹೊನ್ನಿನ ಹಂಡೆ) ಉಂಬು ಬಟ್ಟಲು, ಅಡ್ಡಣಿಗೆ ಎಂಬ
ಪಾತ್ರೆಗಳ ಬಳಕೆಯ ಉಲ್ಲೇಖಗಳು ಸಿಗುತ್ತವೆ.
ಕಸ್ತೂರಿ ಪಾತ್ರೆ, ಪನ್ನೀರ ಪಾತ್ರೆ, ಪೊನ್ನಂಡೆ, ಇವು ವೈಭವಯುತ ಬದುಕನ್ನು ಪ್ರತಿನಿಧಿಸುತ್ತವೆ. ಅಡ್ಡಣಿಗೆ ವಿರಳವಾಗಿ ಬಳಕೆಯಾಗುತ್ತಿದ್ದು ಬಹುಮಟ್ಟಿಗೆ ತೀರಾ
ಸಂಪ್ರದಾಯಸ್ಥರ ಮನೆಗಳಲ್ಲಿ ಮೂಲೆ ಹಿಡಿದು ಕುಳಿತಿವೆ. ನಗರಜೀವನದಲ್ಲಿ ಅಡ್ಡಣಿಗೆಯಂತಹ
ವಸ್ತುಗಳು ಕಾಣದಾಗಿವೆ.
``ಪಡುಗಮಂ ಪಿಡಿದು ವಾಲೈಸುವುದು'' ಧಾರ್ಮಿಕ ಅಧಿಕಾರಸ್ಥರು, ಆಳರಸರು, ಉನ್ನತಾಧಿಕಾರದಲ್ಲಿರುವರಿಗೆ
ಸೇವಕರು ಮಾಡುವ ಸೇವೆಯಾಗಿದೆ. ಪೀಕುದಾನಿ (ಉಗುಳುಪಾತ್ರೆ)ಯನ್ನು ಬಳಸುತ್ತಿದ್ದರು. ಅದೇ ರೀತಿ
ಶ್ರೀಮಂತರಿಗೆ ಮಠಮಾನ್ಯರ ಸ್ವಾಮಿವರ್ಗದವರಿಗೆ, ಆಳರಸರು
ಪಡುಗ (ಉಗುಳುಪಾತ್ರೆ) ಸೇವೆಗಾಗಿ ಇಟ್ಟುಕೊಂಡಿರುತ್ತಿದ್ದರೆಂದು ಈ ಉಲ್ಲೇಖದ ಆಧಾರದಲ್ಲಿ
ಊಹಿಸಬಹುದಾಗಿದೆ. ಅದೊಂದು ಕಾಯಕವೆಂದು ಭಾವಿಸುವ ವರ್ಗವಿತ್ತೆಂದು ಊಹಿಸಬಹುದಾಗಿದೆ.
ಅನೇಕ ಉಪಕರಣ ಕೆಲಸದ ಸಾಮಗ್ರಿ-ಸಾಧನ ಸಲಕರಣೆಗಳು
ಪ್ರಸಂಗಾವಧಾನದಿಂದ ಈ ಕಥಾಮಣಿಸೂತ್ರರತ್ನಾಕರದಲ್ಲಿ ಉಲ್ಲೇಖಗೊಂಡಿವೆ.
1) ``ಶಂಕರದಾಸಯ್ಯನಂತೆ ಸೂಜಿಕಾಯಕವಂ ಮಾಡಿ'' (ತವನಿಧಿ ಪಡೆದ ಪವಾಡ ಸಂಧಿ1 ಭಾಗ-1, ಪು.10)
2)
``ಆ ಪುರವೇ ಹರಗೋಲಾಗಿ
ಆಕಾಶವೇ ಭವ ಶರಧಿಯಾಗಿ ಗುರ್ಜರದೇವನೇ
ಅಂಬಿಗನಾಗಿ'' (ಸಂಧಿ 1
ಗುರ್ಜರನ ಭಿನ್ನಣ ಕಥೆ ಪು.49- ಸಂಧಿ
1 ಭಾಗ - 1)
3) ``ಈಗ
ನಿನ್ನ ಅರ್ಧದೇಹವ ಕೊಡು ಎಂದು ಕರಗಸವ ಹಾಕಲು ಅಂಜದೆ ಇರುವುದು ಕಂಡು
ವಿಷ್ಣುದುಂದುಮಾಂಕಗೆ
ಮೆಚ್ಚಿ ವೈಕುಂಠಕರೆದೊಯ್ದನು''(ಅದೇ,ದುಂದುಮಾಂಕನ ಕಥೆ,ಸಂ.೧.ಸಂ.೧, ಪು.೯೬)
4)
ದೇವ ಧಾನ್ಯವ ಬಿತ್ತಿ ಹರಗಬೇಕೆಂದು ನೇಗಿಲು ಹೊಡೆದಾಗ(ಅದೇ, ಕಥೆ,೨೬೯, ಭಾಗ-೨, ಸಂ.೩,ಪು.೪೯)
5)
ಸುಂಟಿಗೆಯ
ಕೋಲಿನಲ್ಲಿ ಸರಗೊಳಿಸಿ ಉರಿಯ ಕಾಸಿ ಮುತ್ತುಗದ ದೊನ್ನೆಯಲ್ಲಿರಿಸಿ (ಅದೇ, ಭಾಗ-೧, ಸಂ.೩೧, ಸೈಂದರ ಮಹಾರಾಯರ ಸನ್ಮುಕ್ತಿತತ್ಪರರು,ಪು.೧೨೭)
6)`ಒನಕೆ ಮಾರನ ಹೊರಗಿಟ್ಟು ಹೋಗಿ' ((ಅದೇ, ಕಥೆ,೨೮೯, ಭಾಗ-೨, ಸಂ.೩,ಪು.೭೮)
7)
`` ಸತಿಯಂ ಬಂದು ನಿಚ್ಚಣಿಕೆಯನೇಱಿ ತ್ರಾಸಿನನೊಳ್ಕುಳ್ಳಿರಿಸುತ್ತ
ಭಕ್ತನೆಂದಂ''
(ಅದೇ, ಕಥೆ,೩೫೨, ಭಾಗ-೨, ಸಂ.೩,ಪು.೩೨೯)
8)
`ಗುದಿಗೆಯಿಂದ ಬಡಿದು ಬೀಸಗ್ಗವ ಬೀಸಿ
ಹಿಂಗಾಲು ಮುಂಗಾಲಿಗೆ ಹಾಕಿ(ಅದೇ, ಕಥೆ,೪೩೩, ಭಾಗ-೨, ಸಂ.೪,ಪು.೪೯)'
9)
``ಬಗಲೊಳಗೆ ಲಿಂಗಾರ್ಚನೆಯ ಉಪಕರಣಮಂ ಹಸುಬೆಯೊಳಗಿರ್ಪು ಲಿಂಗಗಳಂ
ಕಂಡು''
(ಅದೇ, ಕಥೆ,೪೬೬, ಭಾಗ-೨, ಸಂ.೪,ಪು.೩೪೩)
ಇಲ್ಲಿ ಸೂಜಿ, ಹರಗೋಲು, ಕರಗಸು ನೇಗಿಲು, ಸುಂಟಿಗಿಯ
ಕೋಲು,
ಮುತ್ತುಗದ ದೊನ್ನೆ, ಒನಕೆ ಮೊರ ನಿಚ್ಚಣಿಕೆ, ತ್ರಾಸು(ತಕ್ಕಡಿ) ಗುದಿಗೆ, ಬೀಸುಹಗ್ಗ ಹೀಗೆ
ಜಾನಪದೀಯ ಸಾಮಗ್ರಿಗಳ ಬಳಕೆಯ ಕುರಿತಾದ
ಉಲ್ಲೇಖಗಳು ಕೃತಿಯ ಕಥೆಗಳಲ್ಲಿವೆ. ಹೀಗಾಗಿ
ಇಲ್ಲಿನ ಕಥೆಗಳು ಪೌರಾಣಿಕತೆಯ
ಗಂಭೀರತೆಯನ್ನು ಜನಪದ ಬದುಕಿನ ಸರಳತೆಯನ್ನು ಒಳಗೊಂಡು ಬೇರೊಂದು ಜಗತ್ತನ್ನೇ ಮರು
ಸೃಜಿಸುತ್ತವೆ.
ಶೈವ,
ಶಾಕ್ತ ಪಂಥಗಳ ಭಕ್ತರ ಕಥೆಗಳಿರುವುದರಿಂದ ಇಲ್ಲಿ ಯುದ್ಧ, ವೀರಗಣಾಚಾರ, ಬೇಟೆ, ಪೌರಾಣಿಕ
ಪಾತ್ರ,
ಪರಿಚಲನೆಗಳಿರುವುದರಿಂದ ಈ ವೈವಿಧ್ಯಮಯ ಪ್ರಸಂಗದಲ್ಲಿ ಬಗೆ ಬಗೆಯ ಆಯುಧಗಳು ಉಲ್ಲೇಖಗೊಂಡಿವೆ. ನಡುಗನ್ನಡ ಸಾಹಿತ್ಯ ಬಲುಮಟ್ಟಿಗೆ ಭಕ್ತಿಸಾಹಿತ್ಯದ
ಯುಗವಾಗಿದೆ. ಆದರೂ ಈ ಕೃತಿಯ ಕಥೆಗಳು ಪ್ರಾಚೀನ ನೂತನ ಶರಣರ, ಕಥೆಗಳನ್ನು ವಿವಿಧ ಪುರಾಣಗಳ ಕಥೆಗಳನ್ನು ಒಳಗೊಂಡಿರುವುದರಿಂದ
ಹಳೆಯ ಶೈವ ಭಕ್ತರಲ್ಲಿ ಬೇಡರ ಕಣ್ಣಪ್ಪ, ತೆಲುಗು ಜೊಮ್ಮಯ್ಯರಂಥ ಬೇಡರ ಕಥೆಗಳು, ವೀರಭದ್ರ ಕಿರಾತ ಶಂಕರನ ಕಥೆಗಳು, ಅರಸರ ಬೇಟೆಯ ಪ್ರಸಂಗಗಳನ್ನು ಮರು ಸೃಜನೆಯ ಮೂಲಕ
ನೀಡುತ್ತದೆ. ಅಲ್ಲದೆ ಶೈವನಿಷ್ಠರಾದ ವೀರಗಣಾಚಾರ
ವೃತ್ತಿಯ ಶರಣರ ಚರಿತೆಗಳ ಉಗ್ರನಿರೂಪಣೆ
ಮಾಡುತ್ತದೆ. ಹಾಗೆ ಮಾಡುವಾಗ ತಾಮಸಿಕ ಭಕ್ತಿಯೊಂದಿಗೆ ದೈವಿ
ಶಕ್ತಿಯೊಂದಿಗಿನ
ಪಾತ್ರಗಳನ್ನು ಸೃಜಿಸುವಾಗ ಈ ಪ್ರಸಂಗಗಳಲ್ಲಿ ಸಹಜವಾಗಿಯೇ ವೈವಿಧ್ಯಮಯ ಆಯುಧಗಳು
ಹೆಸರಿಸಲ್ಪಟ್ಟಿವೆ.
ಶಿವನು ಭೈರವನಿಗೆ ಕನಸಿನಲ್ಲಿ
ಬಂದು ಹೇಳುತ್ತಾನೆ.
1.
``ನಿನ್ನ ಕರದ ಸುರಗಿ ಚರಣದ
ಬಿರಿದು ನಿನ್ನ ತರುಣಿ ಸಹವಾಗಿ
ಮಲ್ಲಿಪಟ್ಟಣಕ್ಕೆ ಪೋಗಿ(ಭಾಗ-೧, ಸಂಧಿ-೧, ಪೀಠಿಕಾ ಸೂತ್ರ ಪು.೫)
2.
ಭೈರವಾಂಕನ ಚರಣದ
ಬಿರಿದಂಕಂಡು ಕದನಂಕಶೂರನೆಂಬ ಪಟುಭಟ
ತಡೆಯಲು ಕಾದಿಗೆದ್ದವನ ಸಂಹರಿಸಿ(ಅಲ್ಲೇ ಸಂಧಿ ೧)
ಸುರುಗಿ ಎಂಬ ಆಯುಧ (ಖಡ್ಗ) ಕೈಯಲ್ಲಿ ಹಿಡಿದುಕೊಂಡಿರುವುದು ಶೂರತ್ವದ, ಅಜೇಯದ ಸಂಕೇತ. ಅದರ ಜೊತೆಗೆ ಚರಣದಲ್ಲಿ ಬಿರಿದು ಮತ್ತು ಅದಕ್ಕೆ ಜೋತಾಡುವ ಬೊಂಬೆಗಳು, ಸೋತು ಶರಣಾಗತರಾದವರ ಕುರುಹಾಗಿ ಇಲ್ಲವೆ ಇದಿರಾದ ಶೂರರನ್ನು
ಸೋಲಿಸಿ ಕಾಲಿನಲ್ಲಿ ಗೊಂಬೆಗಳಾಗಿ ಧರಿಸಿ ಬಿಡುತ್ತೇನೆ ಎಂಬ ಸಂದೇಶ ಸೂಚಕವಾಗಿ
ಬಳಕೆಯಾಗಿದೆ. ಚರಣದ ಬಿರಿದು ಶೂರರೆಂಬುವವರೆಗೆ
ಸವಾಲಿನ ಸಂಕೇತ. ಶೂರರಾದವರು
ಬೇಕಾದರೆ ಕದನಕ್ಕಿಳಿಯಿರಿ-ಗೆಲ್ಲಿರಿ ಎಂಬ ಸಂದೇಶ
ರವಾನಿಸುವ ಮಾಧ್ಯಮ. ಅಂತಹ ಬಿರಿದು
ಧರಿಸುವುದರಿಂದಲೇ ಮಲ್ಲಿ ಪಟ್ಟಣದ ರಾಮರಾಯನ ಕದನಂಕ ಶೂರನೆನಿಸಿದ ಪಟುಭಟನೊಬ್ಬ ಭೈರವರಾಜನನ್ನು
ತಡೆದು ಯುದ್ಧಕ್ಕಿಳಿಯುತ್ತಾನೆ.
ಸುರಗಿ: (ಅದೇ, ಭಾಗ-೧, ಪೀಠಿಕಾ ಸೂತ್ರ,ಪುಟ.೫)
ತ್ರಿಶೂಲ (ಅದೇ, ಭಾಗ-೧ ಸಂಧಿ ೧.ಪು.೩೩)
ವಜ್ರಶಕ್ತಿದಂಡ, ಖಡ್ಗ, ಪಾಶಾ, ಗದೆ, ಶೂಲ(ಅದೇ, ಭಾಗ.ಪು.೬೧)
ಪರಶುಗೊಡಲಿ (ಅದೇ ಭಾಗ-೧, ಪು.೮೪)
ಮುಂತಾದ ಆಯುಧಗಳಲ್ಲದೆ `ಮಾಪತಿ
ಬೇಡೆ ಕವಚವನ್ನಿತ್ತ ಹತ ಭಾಗ್ಯಕರ್ಣನು ಎಂಬ
ಕಥೆಯಲ್ಲಿ ಬಗೆ ಬಗೆಯ ಅಂಬು (ಬಾಣ)ಗಳ ಪಟ್ಟಿ ಮತ್ತು ವೈವಿಧ್ಯಮಯ ಆಯುಧಗಳ ಪಟ್ಟಿಯನ್ನೇ ಕಥೆಗಾರ ಶಾಂತಲಿಂಗದೇಶಿಕ ಕೊಡುತ್ತಾನೆ. ಅದರ ಪ್ರಕಾರ -
ಮುಳ್ಳಂಬು,
ಮಿಟ್ಟಿಯಂಬು, ಸರಳಂಬು, ಮನೆಯಂಬು, ಬೋಳಂಬು, ನಾಳಿಯಂಬುಗಳನ್ನು
ಹೆಸರಿಸಿದ್ದಾನೆ. ಬಿಲ್ಲಿಗೆ ಹೂಡಿ ಎಸೆಯುವ ಈ ಬಾಣಗಳೊಂದಿಗೆ ಅವುಗಳ ಆಕೃತಿ-
ಮಾದರಿಗಳನ್ನು ಹುಡುಕುವಂತಾಗುತ್ತದೆ.
ಈ ಆಯುಧಗಳೊಂದಿಗೆ ಯುದ್ಧರಂಗದಲ್ಲಿ ವೈವಿಧ್ಯಮಯ ಆಯುಧಗಳನ್ನು ಕೂಡ ಹೆಸರಿಸುತ್ತಾನೆ ಶಾಂತಲಿಂಗದೇಶಿಕ.
ಪರಶು(ಕೊಡಲಿ),
ಮುಸುಂಡಿ (?) ಸಲ್ಲೇಹ(ಶಲ್ಯ-ಭರ್ಚಿ)
ಪರಿಘ,
ತೋಮರ,ಚಕ್ರ, ಅಸಿ, ಮುದ್ಗರ, ತ್ರಿಶೂಲ, ಕಠಾರಿ, ಖೇಟಕ, ಪಿಂಡಿವಾಳ
- ಹೀಗೆ ವ್ಯಕ್ತ ಅವ್ಯಕ್ತ ಆಯುಧಗಳ ಶೋಧಕ್ಕೆ
ಪ್ರಯತ್ನಿಸಬಹುದಾಗಿದೆ. ಅಶ್ಚರ್ಯಕರ ಸಂಗತಿಯೆಂದರೆ, ದೇಶಿಕನಾದ, ಶಾಂತಲಿಂಗರಿಗೆ ಈ ರೀತಿಯ ಆಯುಧಗಳ ವಿಶೇಷ ತಿಳುವಳಿಕೆ ಅದು ಹೇಗೆ ಸಾಧ್ಯವಾಯಿತು ಎಂಬುದು?” ( ಅದೇ, ಕಥೆ, ಭಾಗ-೧,
ಸಂಧಿ೧, ಪೀಠಿಕಾ ಸೂತ್ರ ಪು.೮೫) ಕಣ್ಣಪ್ಪ ಮೃಗವನ್ನು ಎಸೆದು ಅದರ ಮಾಂಸವನ್ನು `ಸುಂಟರಿಗೆಯ ಕೋಲಿಗೆ ಸರಗೊಳಿಸಿ' ಬೆಂಕಿಯಲ್ಲಿ
ಸುಟ್ಟನಂತೆ. ಬೇಡರು ಪ್ರಾಣಿಗಳನ್ನು ಹೊಡೆಯಲು ಹಾಗೂ ಅವುಗಳನ್ನು ಬೆಂಕಿಯಲ್ಲಿ
ಬೇಯಿಸಲು ಬಳಸುವ ದಂಡವೇ ಸುಂಟಿಗೆಯ ಕೋಲು ಇರಬಹುದು.”(ಭಾಗ-೧,ಸಂಧಿ-೧, ಸೌಂದರ ಮಹಾರಾಯರು ಸನ್ಮುಕ್ತಿತತ್ವರರು
ಪು ಸಂ.೧೨೬)
ಭಾಗ 2ರ ಕಲಿಚಿಟ್ಟಾಂಡರ ಕಥೆಯಲ್ಲಿ ಕಠಾರಿ, ಖಡ್ಗಗಳ ಉಲ್ಲೇಖ ಬಂದಿದೆ. ಚರಣದ ಬಿರಿದು ಕೂಡ ಇವರು
ಧರಿಸಿದ್ದರಂತೆ(ಅದೇ,ಪು.ಸಂ.೩೩೨)
``ಬಡಿಕೋಲು ಬಿಲ್ಬಾಣ
ಗಿಡುಗ ಬಂಡಿಯ ಹುಲಿ
ತಡಿಕೆ ಪೆರ್ಬಲೆಗಳ ಗೂಡಿ''- (ಅದೇ, ಸಂಧಿ.೩, ಪದ್ಯ
೧೬)
ಭೈರವರಾಜ ಮತ್ತು ಮಲ್ಲಿಪಟ್ಟಣದ ರಾಮರಾಯರ ವೈಹಾಳಿ ಪ್ರಸಂಗದಲ್ಲಿ ಬರುವ ಪದ್ಯಭಾಗವಿದು. `ಬಡಿಕೋಲು' `ಬಿಲ್ಬಾಣ' ಗಳ ಪೆರ್ಬಲೆ ಗಳು
ಮೃಗ ಬೇಟೆಯ ಆಯುಧಗಳು. ಬೇಟೆಗಾರಿಕೆಯಲ್ಲಿ
ಗಿಡುಗ ಮತ್ತು ಬಂಡಿಯ ಹುಲಿ (ಬೇಟೆಗಾಗಿ ಸಾಕಿದ ಹುಲಿ)ಗಳೂ ಬಳಕೆಯಾಗುತ್ತಿದ್ದವೆಂಬುದು
ತಿಳಿದುಬರುತ್ತದೆ. ಇದಲ್ಲದೆ ಕತ್ತಿ,ಶೂಲ, ಗುದಿಕೆ, ಬೀಸುಹಗ್ಗ
ಸೆಳೆಗೋಲು, ಖಡ್ಗ, ಫಳಕ, ಕೂರಲಗು, ಗಂಡುಗತ್ತರಿ
ಎಂಬ ಆಯುಧಗಳನ್ನು ಬಳಸುತ್ತಿದ್ದರೆಂಬ
ಸೂಚನೆ ಈ ಕೃತಿಯಲ್ಲಿ ದೊರೆಯುತ್ತದೆ.
ಸಂಸ್ಕೃತಿಯ ಭಾಗವಾಗಿ ನಾಗರಿಕತೆಯೋ ನಾಗರಿಕತೆಯ ಭಾಗವಾಗಿ ಸಂಸ್ಕೃತಿಯೋ
ಬಿಡಿಸಿಹೇಳಲಾಗದು. ಆದರೆ ವಸ್ತುಗಳು, ಉಡುಗೆಗಳು, ತೊಡುಗೆಗಳು, ಆಭರಣಗಳು, ಅಲಂಕಾರಿಕ ವಸ್ತ್ರ, ಭೂಷಣಗಳೆಲ್ಲವೂ
ನಾಗರಿಕ ಸಮಾಜದ ಲಕ್ಷಣಗಳು. ಬಟ್ಟೆ ಮಾನ ಮುಚ್ಚುವುದು ಮಾತ್ರವಲ್ಲದೆ ಸ್ಥಾನ ಮಾನ
ಪ್ರತಿಷ್ಠೆಯ ಸಂಕೇತವಾಗಿಯೂ ಸೌಂದರ್ಯ-ಸೌಷ್ಠವದ
ಸಾಧನವಾಗಿಯೂ ಬಳಕೆಯಾಗುತ್ತದೆ. ಈ ವಿಚಾರದಲ್ಲಿ
ಭಾರತೀಯರು ತುಂಬಾ ರಸಿಕರು. ವಸ್ತ್ರ, ಆಭರಣ, ಅಲಂಕಾರ
ಪ್ರಿಯತೆಯು ನಮ್ಮ ಸಂಸ್ಕೃತಿಯ ಒಂದು
ಲಕ್ಷಣವಾಗಿದೆ ಎಂದರೂ ಅಡ್ಡಿಯಿಲ್ಲ.
ಪ್ರಾಚೀನ ಕಾಲದ ಉಡುಗೆ ತೊಡುಗೆ
ವಸ್ತ್ರ,
ಆಭರಣಗಳ ಕುರಿತೇ
ಒಂದು ಅಧ್ಯಯನಕ್ಕಾಗುವಷ್ಟು ಸರಕು ನಮ್ಮ ಸಾಹಿತ್ಯ ಮತ್ತು ಶಿಲ್ಪಕೃತಿಗಳಲ್ಲಿ
ದೊರೆಯುತ್ತದೆ. ಪ್ರಸ್ತುತ ಈ ಭೈರವೇಶ್ವರ ಕಥಾಮಣಿಸೂತ್ರರತ್ನಾಕರ ಕೋಶವೂ ಅದಕ್ಕೆ ಪೂರಕವಾಗಿ ವಿಸ್ತೃತ ಸಾಮಗ್ರಿಯನ್ನು ಒದಗಿಸುತ್ತದೆ.
ಮೊದಲು ಇಲ್ಲಿ ಪ್ರಸ್ತಾಪಿತವಾಗಿರುವ ವಸ್ತ್ರಗಳ ಕುರಿತು
ನೋಡಬಹುದಾಗಿದೆ. ಸೀರೆಯನ್ನು
ಗಂಡು ಮತ್ತು ಹೆಣ್ಣು ಮಕ್ಕಳು ಉಡುತ್ತಿದ್ದರು ಪ್ರಾಚೀನ ಕಾಲದಲ್ಲಿ. ಆದರೆ ಸೀರೆ ಎಂದರೆ
ಹೆಣ್ಣು ಮಕ್ಕಳು ಮಾತ್ರ ಉಡಬಹುದಾದ ದೊಡ್ಡ ಉಡುಪಾಗಿದೆ. ಭಾಗ-2ರ ಕಥೆ 347ರಲ್ಲಿ
ಬಸವಣ್ಣನು ತನ್ನ ಮಡದಿಯುಟ್ಟ ಸೀರೆಯನ್ನು ವಿಟ ಜಂಗಮನಿಗೆ ನಿರ್ವಾಜ್ಯ ಪ್ರೀತಿಯಿಂದ
ಅರ್ಪಿಸಿದ ಪ್ರಸಂಗವಾಗಿದೆ. ಆ ಸೀರೆ ಎಷ್ಟೊಂದು ಅಪೂರ್ವವಾಗಿತ್ತೆಂದರೆ
ಸಾಂಪ್ರದಾಯಿಕವಾದ ನಾನಾ ಬಗೆಯ ಸೀರೆಗಳನ್ನು ಅದೂ
ಹಿಂದಿಕ್ಕಿದ ಸುಂದರ ಸೀರೆಯಂತೆ ವಿವಿಧ ಸೀರೆಗಳ ಪಟ್ಟಿಯನ್ನೇ ಕೊಟ್ಟಿದ್ದಾನೆ
ಶಾಂತಲಿಂಗದೇಶಿಕ.-
ಶ್ರೀಗೌರಿ ಕಾಂಭೋಜಿ
ಇಂದ್ರರಾಗ ಸಣ್ಣವಡಂಜಿ
ಉದಯರಾಗ ಫಳ್ಳಿಯು
ಸಂಜೆರಾಗ
ಪಡ್ಡವಳಿ
ಸರದೆ ನೇತ್ರಾವಳಿ
ರಾಜಶೇಖರ
ಚಿತ್ರಾವಳಿ
ತವರಾಜ
ಚಿತ್ರಾವಳಿ
ಮಾಂದಳಿರು
ಪಿಂಜಾವಳಿ
ಮರಕತ ತುರುಗಾವಳಿ
ಭಾವಜತಿಲಕ
ನಾಗವಳಿ
ಭೂತಿಲಕ ಗಜಾವಳಿ
ರುದ್ರತಿಲಕ ವೃಷಭಾವಳಿ
ಚಂದ್ರತಪ ಗಣಾವಳಿ
ಮೇಘರಂಜಿ ಹಂಸಾವಳಿ
ಜಯರಂಜಿ ಮನುಜಾವಳಿ
ಧನುರಾವಳಿ
ಈ ಮೊದಲಾದ ಬಣ್ಣಿಗೆಯ ಸೀರೆಗಳಿದ್ದವಂತೆ
! ಅವುಗಳಿಗೂ ಮಿಗಿಲಾದ ವಸ್ತ್ರ ಬಸವಣ್ಣನ ಪುಣ್ಯ ಸ್ತ್ರೀಯಾದ ಗಂಗಾಂಬಿಕೆಯು ಉಟ್ಟಿದ್ದಳಂತೆ. ಅದನ್ನು ವಿಟ ಜಂಗಮ
ನಾಗಯ್ಯ ತನ್ನ ವೇಶ್ಯಾಸ್ತ್ರೀಗಾಗಿ ಬೇಡಿದಾಗ
ಬಸವಣ್ಣ ಹಿಂದು ಮುಂದೆಣಿಸದೆ ಬಿಚ್ಚಿಸಿ
ನೀಡಿದನಂತೆ .
ನೇಕಾರನಾದ ನೈಸರನ ಮನೆಗೆ ಜಗದೀಶ್ವರ ಜಂಗಮಾವತಾರದಿಂದ
ಬರುತ್ತಾನೆ. ಆತನು ಅತ್ಯಂತ ಶ್ರದ್ಧೆ-ಭಕ್ತಿಗಳಿಂದ ನೇಯ್ದ
ಅಪೂರ್ವ ವಸ್ತುವನ್ನು ಕೇಳಿ ಪಡೆದುಕೊಳ್ಳುತ್ತಾನೆ.
ಪಡೆದುಕೊಂಡು-
``ಜಡೆಗೆ ಬಟ್ಟೆ ಪಾವಡವಪ್ಪುದು ನಡುವಿಗೆ ಧೋತ್ರವಪ್ಪುದು
ಎಂದು ನುಡಿಯಲು''
ನ್ಯೆಸಭಕ್ತನು ಅದನ್ನು ``ಸೀಳಿ ಇಕ್ಕಾಡಿ ಮಾಡಿ ಚರಲಿಂಗದ ಜಡೆಗೆ ನಡಿವೆಗೆಯೂ ಸುತ್ತಿ
ನಮಿಸಲಾಗ''(ಅದೇ, ಕಥೆ,೩೫೦, ಭಾಗ-೨, ಸಂ.೪,ಪು.೧೫೮) ಶಿವ ತೃಪ್ತಿಯಾಗಿ ಮೆಚ್ಚಿ ಗಣ ಪದವಿ ನೀಡಿದನಂತೆ.
ಇಲ್ಲಿ ಬಟ್ಟೆ ಪಾವಡವನ್ನು ಜಡೆಗೆ ಕಟ್ಟುತ್ತಿದ್ದರು, ಧೋತ್ರವನ್ನು ನಡುವಿಗೆ ಉಟ್ಟಕೊಳ್ಳುವ ವಸ್ತ್ರವೆಂಬುದು ವ್ಯಕ್ತವಾಗಿದೆ.
``ಉಮಾರಮಣನ ಕೌಂಪಿಗೆ ತರುಣತನ್ನ
ರಮಣಿಯನ್ನಿತ್ತ''
ಕಥೆ-
ಅಮರನೀತಿ ಎಂಬ ಪುರಾತನ ಶರಣನ
ಚರಿತೆಯಾಗಿದೆ. ಈ ಕಥೆಯಲ್ಲಿ ಕವುಪು, ಕಯಿಪು, ಕೌಪು ಈ
ಮೂರು ವ್ಯತ್ಯಾಸ ರೂಪದಲ್ಲಿ ಕೌಪೀನದ
ದಿವ್ಯದರ್ಶನವಾಗಿದೆ. (ಅದೇ, ಕಥೆ,೨೫೨, ಭಾಗ-೨, ಸಂ.೪,ಪು.೧೬೨)
``ಪೆರುಮಳಲಿಯ ಕುರುಬರಂತಾದರಿಂ'' ಎಂಬ
ಕಥೆಯಲ್ಲಿ ನಂಬಿಯಣ್ಣನ ಮಹಿಮೆಯಂ ನೋಡಲು ಬರುವ
ಪೆರುಮಾಳಲಿಯ ಕುರುಂಬರ ವೇಷ ಭೂಷಣ
ವರ್ಣಿಸಲ್ಪಟ್ಟಿದೆ.
``ದಟ್ಟಿ ಚಲ್ಲಣವನ್ನುಟ್ಟು ಕಠಾರಿಯಂ ನಡುವಿನೊಳು ಕಟ್ಟಿ, ವಿಭೂತಿ ರುದ್ರಾಕ್ಷಿಗಳಂ ಧರಿಸಿ ನಂದಿಧ್ವಜವ ಕೈಯಲ್ಲಿ
ಹಿಡಿದುಘೇಯೆಂಬರವದಿಂದ ತಿರುವಾಲೂರಿಗೆ''(ಅದೇ,
ಕಥೆ,೧೩೮, ಭಾಗ-೧, ಸಂ.೧,ಪು.೨೫೭)
ಇಲ್ಲಿ ದಟ್ಟಿ ಚಲ್ಲಣದ ಉಲ್ಲೇಖವಿದೆ ಎಂಬುದನ್ನು
ಗಮನಿಸಬಹುದು. ಇದಲ್ಲದೆ ಹಳದಿ ಕಪುಡ(ಅದೇ, ಪಚ್ಚಗುಪುಸ ೨೫೧ ಭಾಗ-೧, ಸಂ.೧,ಪು.೨೩೮) ಈ ಬಟ್ಟೆಗಳ ಉಲ್ಲೇಖವಿದೆ. ಇದರಲ್ಲಿ ಪಚ್ಚ ಗುಪುಸ ಮಗುವಿನ
ತೊಡುಗೆಯಾಗಿದೆ.
ಹೀಗೆ ಅನೇಕ ಸಂದರ್ಭಗಳಲ್ಲಿ
ಆಗಿನ ಕಾಲದ ಜನರ ಉಡುಗೆ,ತೊಡುಗೆಗಳು ಉಲ್ಲೇಖ ಗೊಂಡಿವೆ.
ಇನ್ನು ಈ ಕೃತಿಯು ಅಂದು
ಜನರು ಅಲಂಕಾರ ಪ್ರಿಯರಾಗಿರುವುದಕ್ಕೆ ಸಾಕ್ಷಿಯಾಗುವ ಅನೇಕ ಆಭರಣ-ಒಡವೆಗಳ ಕುರಿತು ಪ್ರಸ್ತಾಪಿಸಿದೆ.
ಈ ಕೆಳಗಿನ ಆಭರಣಗಳನ್ನು
ಮಗುವಿಗೆ ತೊಡಿಸುತ್ತಿದ್ದರೆಂಬುದುತಿಳಿದು
ಬರುತ್ತದೆ.
ಬಿಜ್ಜ ಮಹಾದೇವಿಯು ಪರಶಿವನನ್ನೇ ಶಿಶುವಾಗಿ ಆಡಿಸಿದ ಮಹಾಮಾತೆ.
ಈ ``ಅಮ್ಮವ್ವೆಯು ಶಿಶು ರೂಪಾದ ಶಿವನಿಗೆ ಅರಳೆಲೆ ಮಾಗಾಯಿ,ಕಿರುಗೆಜ್ಜೆ, ಉಡಿದಾರ,ಹಾಲುಗಡಗ, ಮುಂಗೈಲಾಕು,ಉಂಗುರ, ಅಂದುಗೆ, ಪುಲಿಯುಗುರು, ಕಿರುಜಡೆ, ಪಚ್ಚಗುಪ್ಪಸ ಮೊದಲಾದ ಬಾಲದೊಡಿಗೆಯಂ ತೊಡಿಸಿ'' ಆಡಿಸುತ್ತಿದ್ದಳಂತೆ. (ಅದೇ, ಕಥೆ,೧೩೦, ಭಾಗ-೧, ಸಂ.೧,ಪು.೨೫೧)
ಕಥಾ ಸಂಖ್ಯೆ 315 (ಸಂಧಿ-3,ಭಾಗ-2) ರಲ್ಲಿ
ಹರಸಿಂಧು ಬಲ್ಲಾಳನ ನಿಷ್ಠೆಯನ್ನು ನೋಡಲು ಶಿವನು ವಿಟ ಜಂಗಮನಾಗಿ ಬರುತ್ತಾರೆ. ಆತನ ವೇಷ ಭೂಷಣ
ಹೀಗಿವೆ.
``ತುರುಬು ಚಿಮ್ಮುರಿ, ಕಸ್ತೂರಿಯ ಬೊಟ್ಟು, ಕುಟುಕು ತಂತಿ ಮಣಿ, ಗಂಟಚೌಕಳಿ, ಉತ್ತರಿಗೆ
ಬಿಲ್ಲೆಸರ,
ಮುತ್ತಿನ ತ್ರಿಸರ, ಪದಕ, ಭುಜಕೀರ್ತಿ, ತೋಳಬಾಪುರಿ, ಮುಂಗೈ ಕಂಕಣ, ಹಮ್ಮೀರ ತಾತಿ,
ಈಯ್ಯುಗರ, ನಡುವಿನಲೇವಳ, ಕಾಲಸರ, ಮಿಂಚು ಮೊದಲಾದ ಆಭರಣವನ್ನಿಟ್ಟು ಕೈಯಲ್ಲಿ ಎಲಿಯೊತ್ತು
ಕನ್ನಡಿಯಂ ಪಿಡಿದು ಸಿಂಧುಬಲ್ಲಾಳ ರಾಯನ ಮನೆಗೆ ಬರುವಾಗ''(ಅದೇ, ಭಾಗ-೧, ಸಂ.೧,ಪು.೧೧೧)
ಗಂಡಸರು ತುರುಬು ಕಟ್ಟುತ್ತಿದ್ದರೆಂಬುದಾಗಿಯೂ, ಚೆಮ್ಮುರಿ (ಚವುರಿ) ಇಡುತ್ತಿದ್ದರೆಂಬುದಾಗಿಯೂ ತಿಳಿದು
ಬರುತ್ತದ್ದಲ್ಲದೆ ಸುವಾಸನೆಗಾಗಿ ಕಸ್ತೂರಿ ಬೊಟ್ಟು ಇಟ್ಟುಕೊಳ್ಳುವುದು, ಇನ್ನೊಂದು ಸುವಾಸನಾ ದ್ರವ್ಯ ಕಟುಕು ತಾತಿಮಣಿ, ಗಂಟಿ ಚೌಕಳಿ ಮುಂತಾಗಿ ಅನೇಕ ಆಭರಣಗಳನ್ನು ಧರಿಸುತ್ತಿದ್ದರೆಂಬುದನ್ನು ನಾವು ತಿಳಿದುಕೊಳ್ಳಬಹುದಾಗಿದೆ.
ಒಟ್ಟಿನಲ್ಲಿ ಮಧ್ಯಕಾಲೀನ
ಯುಗದಲ್ಲಿಯೇ ಜನರು ವೈವಿಧ್ಯಮಯವಾದ ಆಭರಣ
ಪ್ರಿಯರಾಗಿದ್ದರೆಂಬುದು ನಾವು ಈ ಕೃತಿಯಲ್ಲಿ ಕಂಡುಕೊಳ್ಳಬಹುದಾಗಿದೆ.
ಇನ್ನು ವೈವಿಧ್ಯಮಯ
ಅಲಂಕಾರಕ್ಕಾಗಿಯೂ ಈ ಕೆಳಗಿನ
ವಸ್ತುಗಳನ್ನು ಬಳಸುತ್ತಿದ್ದರೆಂಬುದನ್ನು ನಾವು
ತಿಳಿದುಕೊಳ್ಳಬಹುದಾಗಿದೆ.
ಶಿವನ ಒಡ್ಡೋಲಗದ ಅಲಂಕಾರವನ್ನು ವರ್ಣಿಸುತ್ತಾನೆ ಕಥೆಗಾರ ಶಾಂತಲಿಂಗ ದೇಶಿಕ, ಅದು ಹೀಗಿದೆ-
``ಕಸ್ತೂರಿಯ ಸಾರಣೆಗಳಿಂ ಮುತ್ತಿನ
ರಂಗವಾಲೆಗಳಿಂ, ತಳಿರು ತೋರಣ, ಮಕರ ತೋರಣಗುಡಿತೋರಣ, ಮುಖ ತೋರಣಾದಿ ರಚನೆಗಳಿಂ, ವೃಷಭಧ್ವಜ ಪತಾಕೆಗಳಿಂ, ಕುಸುಮ ವೃಷ್ಟಿಗಳಿಂ ತಳಿಗೆ ತೋರಣ.... (ಅದೇ, ಭಾಗ-೧, ಸಂ.೧,ಪು.೧೬)
ಇಲ್ಲಿ ಹೇಳುವಾಗ ಮನೆ, ಬೀದಿ, ಊರು
ಭವನಗಳನ್ನು ವಿಶೇಷ ಸಂದರ್ಭಗಳಲ್ಲಿ ಅಲಂಕರಿಸುತ್ತಿದ್ದರಂತೆ ಅನಿಸುತ್ತದೆ. ತಾನು
ಕಂಡಿರುವುದರಿಂದಲೇ ತಾನು ಕಾಣದಿರುವದನ್ನು
ಕಂಡಂತೆ ಕಲ್ಪಿಸಲು, ಬಣ್ಣಿಸಲು ಸಾಧ್ಯವಾಗುತ್ತದೆ.
ಸಗಣಿಯಸಾರಣೆ ಪಾರಂಪರಿಕ ಸಂಗತಿ. ಆದರೆ ಕಸ್ತೂರಿಯ ಸಾರಣೆ ಅತಿಶಯ. ರಂಗವಾಲೆ ಸಹಜ, ಮುತ್ತಿನ ರಂಗವಾಲೆ ಅತಿಶಯ. ತಳಿರು ತೋರಣ ಇತ್ಯಾದಿ ತೋರಣ
-ಧ್ವಜಗಳನ್ನು ಇವತ್ತಿಗೂ ಕಟ್ಟುತ್ತಿದ್ದೇವೆ.
ಇದೆಲ್ಲ ಶೃಂಗಾರದ ಕಲ್ಪನೆ ನಮ್ಮ ಪೂರ್ವಜರು ನಮಗೆ
ನೀಡಿದ ಸಾಂಸ್ಕೃತಿಕ ಬಳುವಳಿಯೇ ಆಗಿದೆ
ಎಂಬುದಕ್ಕೆ ಈ ಕೃತಿಯು ಒದಗಿಸುವಂತಹ ಆಕರ
ಸಂಪತ್ತೇ ನಿದರ್ಶನ.
ಹೊಟ್ಟೆಗೆ ಹಿಟ್ಟಿಲ್ಲದಾಗ
ಜುಟ್ಟಕ್ಕೆ ಮಲ್ಲಿಗೆ ಹೂವೆ? ಎಂಬ ಪ್ರಶ್ನಾರೂಪದ ಗಾದೆ ಬದುಕಿನ ಮೂಲಭೂತ
ಆವಶ್ಯಕತೆಗಳಲ್ಲೊಂದಾದ ಅನ್ನದ ಪ್ರಥಮಾದ್ಯತೆಯನ್ನು ಎತ್ತಿ ಹೇಳುತ್ತದೆ. ಪ್ರಕೃತಿ ದತ್ತ ಆಹಾರ
ಸಂಸ್ಕರಣಗೊಂಡು ಸಂಸ್ಕಾರ ಪಡೆದು ವೈವಿಧ್ಯಮಯ ರೂಪತಾಳುತ್ತದೆ. ಸಂಸ್ಕೃತಿಯ ಸಂಗತಿಯಾಗುತ್ತದೆ.
ಅಡುಗೆಯಲ್ಲಿನ ಬಗೆಗಳು, ಪ್ರಾದೇಶಿಕ ಭಿನ್ನತೆಗಳು ಎಲ್ಲವೂ ಆಯಾ ಪ್ರದೇಶದ
ಸಾಂಸ್ಕೃತಿಕ ಬದುಕಿನ ಪ್ರತೀಕ. ಆಹಾರ, ವಿಹಾರ ನಾಗರಿಕ ಬದುಕಿನ ಮತ್ತೊಂದು
ಲಕ್ಷಣವೇ. ಆಹಾರ -ಪಾನೀಯಲು ಸಹಿತ ಮಾನವ
ರಸಿಕತೆ,
ಅಭಿರುಚಿಯ ಹುಡುಕಾಟದ ಫಲಗಳು. ಉಟೋಪಚಾರ ಪ್ರೀತಿ ಪಾತ್ರರಿಗೆ ತೋರುವ ಗೌರವ-ಆದರಗಳ
ಮತ್ತೊಂದು ಬಗೆ ಅಥವಾ ಉಟೋಪಚಾರ ಪ್ರೀತಿ
ಪಾತ್ರರಿಗೆ ಗೌರವ-ಆದರ ತೋರುವ ಅದನ್ನು ಖಚಿತಪಡಿಸುವ ಸಾಧನವಾಗಿದೆ. ಇಷ್ಟೊಂದು ಮಹತ್ವ ಪಡೆದಿರುವ, ಮಹಿಮೆ ಹೊಂದಿರುವ
ಅನ್ನದ ವಿವಿಧ ರೂಪುಗಳು(ಅಡುಗೆಗಳು)
ಸಂಸ್ಕೃತಿಯ ಸಂಸ್ಕಾರದ ಮತ್ತೊಂದು ಅಂಶ.
ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರದಲ್ಲಿ ವೈವಿಧ್ಯಮಯ ಅಡುಗೆಗಳ
ಪ್ರಸ್ತಾಪವಿದೆ. ಕನಕದಾಸರು ರಚಿಸಿದ ನಳಚರಿತ್ರೆಯಲ್ಲಿಯೂ ಕುಮಾರ ವ್ಯಾಸಭಾರತದ ಉದ್ಯೋಗ ಪರ್ವದಲ್ಲಿ ಭೀಮನ ಅಡುಗೆಗಳು ವರ್ಣಿಸಲ್ಪಟ್ಟಿವೆ. ಅವುಗಳಲ್ಲಿ
ಬಂದಿರುವಷ್ಟು ಅಡುಗೆ, ಪಾಕ -ಪಾನೀಯಗಳ ವಿಸ್ತೃತ ವರ್ಣನೆ ಇಲ್ಲಿ ಬಂದಿಲ್ಲವಾದರೂ ಪಾಯಸ, ಹಾಲು,ಇಡ್ಡಲಿಗೆ, ದೋಸೆ
ಹಪ್ಪಳ,
ಸಂಡಿಗೆ
ಉಪ್ಪಿನ ಕಾಯಿ,ಮೆಣಸಿನಆಮ್ರ, ಪರಮಾನ್ನ, ಕಜ್ಜಾಯ ಫಲಹಾರ,ಅಂಬಳಕ, ಹಂಜಕ್ಕಿ,ಅಳೆಯಂಬಳಕ, ಕೀರೇ
ಸೊಪ್ಪ, ಬಿರುಗೂಳ್ ಈ ಎಲ್ಲಾ
ಅಡುಗೆಗಳು ಅಲ್ಲಲ್ಲಿ ಹೇಳಲ್ಪಟ್ಟಿವೆ.
ಹಾಲು,ಕಬ್ಬಿನ ಹಾಲು ಹಣ್ಣುಗಳ ಸೇವನೆಯ ಕುರಿತು ಉಲ್ಲೇಖಗಳು
ನಮಗೆ ನೋಡಸಿಗುತ್ತವೆ. ಈ ಬಹುತೇಕ ಸಾಂಪ್ರದಾಯಿಕ ಅಡುಗೆಗಳು ಇಂದೂ ತಮ್ಮ ಅಸ್ತಿತ್ವವನ್ನು
ಉಳಿಸಿಕೊಂಡು ಬಂದಿವೆ. ಹೀಗೆ ಹುಡುಕುತ್ತಾ ಹೋದರೆ
ಪ್ರತಿಯೊಂದು ಅಡುಗೆಯೂ ಒಂದೊಂದು ಇತಿಹಾಸ
ಸೃಷ್ಟಿಯಾಗುತ್ತದೆ.
ಪಿಟ್ಟವ್ವನಿಗಾಗಿ ವಡ್ಡನ ರೂಪ ಧರಿಸುವ ಶಿವನು ಹೇಳುತ್ತಾನೆ- ``ಚೋಳ ರಾಯನ ಬಿಟ್ಟಿಗೆ ನಾ ಹೋದೇನು ನನಗೆ ಮುರಿದ
ದೋಸೆಯನೀಡೆಂದು''(ಅದೇ, ಕಥೆ,೧೩೧, ಭಾಗ-೧, ಸಂ.೧,ಪು.೨೫೧) ದೋಸೆಯನ್ನು ತಯ್ಯಾರಿಸುವ ಕಾಯಕ ಮಾಡುತ್ತಿದ್ದ ಶರಣೆ
ಪಿಟ್ಟವ್ವೆ. ಕೆಲಕೆಲವರು ಕೆಲವು ಅಡುಗೆಗಳನ್ನು ಮಾಡುವುದರಲ್ಲಿ ಪ್ರಾವಿಣ್ಯತೆ ಪಡೆದು ಅದನ್ನೆ ಬದುಕಿನ
ಕಾಯಕವನ್ನಾಗಿ ಸ್ವೀಕರಿಸುತ್ತಿದ್ದರು ಎಂಬ ಅನಿಸಿಕೆ ಇಲ್ಲಿಯ ಉಲ್ಲೇಖಗಳಿಂದ ಊಹಿಸಿಕೊಳ್ಳಬಹುದಾಗಿದೆ.
ಚೋಳದ ದೇಶದ ಕರಿಕಾಲ ಚೋಳನು
ಲಿಂಗಕ್ಕೆ ``ಹಲಗೆಯಮೇಲೆ ಆಯ್ದ ಮೊನೆಮುೞಯದ ರಾಜಾನ್ನದಕ್ಕಿ ಸಣ್ಣಕ್ಕಿ...... ಬೋನವಂ ಮಾಡಿ ಶಾಕಪಾಕಾದಿಗಳನಂತಹಪ್ಪಳ ಸಂಡಿಗೆ ಉಪ್ಪಿನ ಕಾಯಿ....
ಮುನ್ನೂರಡ್ಡಣಿಗೆಯ ಮೇಲಿಟ್ಟು...... ಲಿಂಗಕ್ಕೀಪರಿಯಲ್ಲಿ ದಿನಕ್ಕೆ ಮೂರು ವೇಳೆ ನೈವೇದ್ಯವನರ್ಪಿಸಿ ಲಿಂಗ ಪೂಜೆಯ
ಮಾಡುವಾಗಲಿತ್ತ''
(ಅದೇ, ಕರಿಕಾಲ ಚೋಳನೆಂಬುದಕ್ಕೆ
ಕಥೆ, ಭಾಗ-೨, ಸಂ.೪,ಪು.೨೬೦)
ಈ ಉಲ್ಲೇಖವು ಭೈರವಾಂಕನು ಲಿಂಗಕ್ಕೆ
ನೈವೇದ್ಯ ಅರ್ಪಿಸಿದ ಸಂದರ್ಭಕ್ಕೆ ಉಪಕಥೆಯಾಗಿರುವ ಕರಿಕಾಲ ಚೋಳನ ನೈವೇದ್ಯ ಸಮರ್ಪಣೆಯನ್ನು
ಹೇಳುತ್ತದೆ. ಇಲ್ಲಿ ಹಪ್ಪಳ ಸಂಡಿಗೆ ಮತ್ತು ಉಪ್ಪಿನ ಕಾಯಿಯ ರುಚಿ ಇರುವುದನ್ನು ಕಾಣಬಹುದು. ಇನ್ನೂ ಅಚ್ಚರಿಯೆಂದರೆ ಹಲಗೆ (ಬರೆವ
ಹಲಗೆ-ಪಾಟಿ ಇರಬಹುದೆ?)ಯ ಮೇಲೆ ಆರಿಸಿದ ರಾಜಾನ್ನದ
ಸಣ್ಣಕ್ಕಿ ಅದೂ ಮೊನೆಮುರಿಯದ ನುಚ್ಚಾಗದ ಸಣ್ಣಕ್ಕಿಯಿಂದ ಅನ್ನ ಮಾಡುತ್ತಿದ್ದುದು ಶ್ರದ್ಧೆಯ
ಪರಾಕಾಷ್ಠೆಯಾಗಿದೆ. ತಿನ್ನಲು ಅನ್ನವಾದರೆ ಸಾಲದು
ಅದು ಸುಂದರವೂ,
ಶುದ್ಧವೂ
ರುಚಿಯೂ ಆಗಿರಬೇಕೆಂಬ ಪ್ರಜ್ಞೆಯು ನಮ್ಮ ಪ್ರಾಚೀನರಿಗಿತ್ತೆಂಬುದರ ತಿಳುವಳಿಕೆ ಈ ಉಧೃತಭಾಗದಿಂದ ನಮಗಾಗುತ್ತದೆ.
ಇದೇ ಕಥೆ ಈ ಮೊದಲು ಭಾಗ 1 ರಲ್ಲಿಯೂ ಬಂದಿದೆ.
``ಆಗ ಚೋಳನು ಮಣುವಿನ ಮೂಗಂಡಗ ಮೆಣಸಿನ
ಅಂಬ್ರವನು ಮುನ್ನೂರರವತ್ತು ಖಂಡಗ ಮೊನೆಮುರಿಯದ ಸಣ್ಣಕ್ಕಿಯಿಂದ ನೈವೇದ್ಯವನರ್ಪಿಸಿ '' (ಅದೇ, ಕಥೆ,೭೯, ಭಾಗ-೧, ಸಂ.೧,ಪು.೧೪೬)ಶಿವನಿಗೆ
ಉಣುವಂತೆ ಆಗ್ರಹಿಸುತ್ತಾನೆ.
ಮೆಣಸಿನ ಅಂಬ್ರ ಎಂಬ ಅಡುಗೆಯ ವಿಶಿಷ್ಟ ಬಗೆಯ ಜೊತೆ, ಆಗಲೇ
ಗಮನಿಸಿದ ಮೊನೆಮುರಿಯದಕ್ಕಿಯ ಪ್ರಸ್ತಾಪವೂ
ಬಂದಿದೆ.
................
...........ಶಾಖಗಳ
ಪರಿಮಿತ ಭಕ್ಷ್ಯಗಳ
ಚಿರಪಾಲು ಕೆನೆ ಮೊಸ
ರ್ಪರಮಾನ್ನ ರಸ ರಸಾಯನವ
(ಸಂಧಿ-1,
ಕಥೆ ಪದ್ಯ ಸಂ.125, ಭಾಗ-1)
ಇಲ್ಲಿನ `ಚಿರಪಾಲು' - ಕ್ಷೀರ- ಹಾಲು ಎಂಬ ದ್ವಿರುಕ್ತಿಯಾಗಿರಬಹುದು. ಇಲ್ಲವೇ ಖೀರ
ಹಾಲು ಎಂದಾಗಿರಬಹುದೆ? ಕೆನೆಮೊಸರು, ಪರಮಾನ್ನದ ಬಗ್ಗೆ ಹೇಳುವದೇನಿದೆ. ಕೃಷಿಯೊಂದಿಗೆ ಪಶು
ಸಂಗೋಪನೆ,
ಹಯನುಗಾರಿಕೆ ಕನ್ನಡ ನಾಡಿಗೇನೂ ಹೊಸದಲ್ಲ. ಹಯನ ಪದಾರ್ಥ ಬಳಕೆಗೆ
ಭಕ್ಷಣೆಗೆ ಆರೋಗ್ಯ ಮತ್ತು ಧಾರ್ಮಿಕ
ದೃಷ್ಟಿಯಿಂದಲೂ ಮಹತ್ವನೀಡಿರುವ ಜನ
ನಮ್ಮದು.
ಭಾಗ-1 ಪು.151ರಲ್ಲಿ ಘೃತ, ಪನೀ
ನೀರು,
ಸಿವಯ ಸಾಲಿಡುವ ಪಾನಗಳ ಪ್ರಸ್ತಾಪವಿದೆ. ಈ `ಸವಿಯ ಸಾಲಿಡುವ' ಪಾನಗಳೆನ್ನುವಲ್ಲಿ
ಬಗೆ ಬಗೆಯ ಪಾನೀಯಗಳಿದ್ದವೆಂದು ತಿಳಿಯುತ್ತದೆ. ಆದರೆ
ಆ ವಿವಿಧ ಬಗೆಯ ಪಾನಗಳ ಕುರಿತ ಹೆಸರುಗಳು ಗೊತ್ತಾಗುವುದಿಲ್ಲ.
ಈಗಾಗಲೇ ನಾವು ಅನೇಕ ಯುದ್ಧಕ್ಕೆ ಸಂಬಂಧಿಸಿದಂತೆ
ಸಾಕಷ್ಟು ರೀತಿಯ ಸಾಮಗ್ರಿಗಳನ್ನು
ಕುರಿತು ಈ ಕೃತಿಯಲ್ಲಿರುವ ಮಾಹಿತಿಗಳನ್ನು ಅವಲೋಕನ ಮಾಡಲಾಗಿದೆ.
ಅದೇ ರೀತಿಯಲ್ಲಿ ಸಂಗೀತಕ್ಕೆ ಸಂಬಂಧಿಸಿದಂಥ ಅನೇಕ
ಮಾಹಿತಿಗಳಲ್ಲದೆ ಬಳಕೆಯಲ್ಲಿದ್ದ ವಾದನಗಳು, ಗಾಯನ ನೃತ್ಯ
ರಂಗಗಳ ಕುರಿತಾದ ವಿವರಗಳು ಈ ಕೃತಿಯಲ್ಲಿ ಹೇರಳವಾಗಿ ಸಿಗುತ್ತವೆ.
ಭೇರಿ,ಜಿಂಜಿಣಿ, ನಿಸ್ಸಾಳ ಕಹಳೆ, ವೀಣೆ, ರುದ್ರವೀಣೆ, ತಂಬಣ, ಭೇರಿಚೋಳಿ, ಶೋಭನ, ಢಕ್ಕೆ,ಡಾವುಳಿ, ಕರಡೆ, ಕೌಸಾಳೆ, ಢಕ್ಕೆ ಡಮರುಗ, ಮುರಜೆ, ಮೃದಂಗ, ವುಡಕ, ಗೆಜ್ಜೆ, ಕೊಳಲು ತೂರವರೆ, ಚಿನ್ನಗಾಳೆ, ತುತ್ತುರಿ, ಕೊಂಬು, ಗಾಳೆ, ತಾಳ, ಹೀಗೆ ಹಲವಾರು ವಾದ್ಯಗಳ ಪ್ರಸ್ತಾಪ ಈ ಕೃತಿಯಲ್ಲಿದೆ.
ಇದರಲ್ಲಿ ಕೆಲವು ಸಂಗೀತ ವಾದ್ಯಗಳೂ
ಕೆಲವು ಯುದ್ಧ -ಬೇಟೆ ಸಂದರ್ಭದಲ್ಲಿ ಬಳಸುವಂತಹ
ವಾದ್ಯಗಳೂ ಆಗಿರುತ್ತವೆ. ಈ ಕೃತಿಯಲ್ಲಿ ಬಂದಿರುವ ಉಲ್ಲೇಖಗಳನ್ನು ಕುರಿತು ಒಂದು ಅವಲೋಕನ ಈ ಕೆಲಳಕಂಡಂತಿದೆ.
ʻʻಇಬ್ಬರು ಗುಂಡಕರಗಿಸಿ ತಾಳವ ಮಾಡಿ'' (ಅದೇ, ಭಾಗ-೧, ಸಂ.೧,ಪು.೨೨)
ಈ ಉಲ್ಲೇಖದಲ್ಲಿ ತಾಳದ
ಪ್ರಸ್ತಾಪವಿದೆ. ತಾಳವೊಂದು ಜೊತೆ ಕಂಚು, ಹಿತ್ತಾಳೆ ಗಳಿಂದ ಮಾಡಿದ ವೃತ್ತಾಕಾರದ ವಾದ್ಯಗಳು. ಬಟ್ಟಲಾಕಾರದಲ್ಲಿ ಇರುತ್ತವೆ. ಇವುಗಳನ್ನು ಭರತನಾಟ್ಯದ
ಪಕ್ಕವಾದ್ಯದ ಮೇಳದಲ್ಲಿ ಮೃದಂಗದೊಂದಿಗೆ ಬಾರಿಸುತ್ತಾರೆ.
ಭಜನೆಗಳಲ್ಲಿ ಬಳಸುತ್ತಾರೆ. ದಾಸರು ತಾಳ-ದಂಡಿಗೆ, ಚಿಟಿಕೆ ಎಂಬ ವಾದ್ಯಗಳಲ್ಲಿ ಬಳಸಿಕೊಂಡ ಹಾಡು
ಹಾಡುತ್ತಿದ್ದರು ಎಂಬುದು ಈಗಾಗಲೇ ಎಲ್ಲರೂ
ತಿಳಿದಿರುವುದೇ ಆಗಿದೆ. ʻʻಅಲ್ಲಿ ಒಬ್ಬ ದೇವಸ್ತ್ರೀ ಪಾರ್ವತಿ ದೇವಿಗೆ
ವೀಣೆಂ ಕೇಳಿಸುತ್ತಿರೆ ಕಂಡು''(ಅದೇ, ಭಾಗ-೧, ಸಂ.೧,ಪು.೯೩)
ʻʻಶಿವನ ಪಾದದಂದುಗೆಯ ಧನಿಯ ಚೇರಮರಾಯ ದಿನದಿನವೂ ಕೇಳುತ್ತ ನಿಚ್ಛವೀಣೆಯಂ ಬಾರಿಸುತ ಲಿಂಗಪೂಜೆಯಂ
ಮಾಡಿ''(ಅದೇ, , ಭಾಗ-೧, ಸಂ.೨,ಪು.೨೫೪)
“......
ನಾರದನ......ಗಾನವಂ ಪಾಡಿ ವೀಣೆಯಂ ನುಡಿಸ ಲಾಗ” (ಅದೇ, ಭಾಗ-೧,
ಸಂ.೪,ಪು.೨೭೫)
ಹೀಗೆ
ವೀಣೆಯ ಉಲ್ಲೇಖ ಬೇರೆ ಬೇರೆ ಭಾಗದಲ್ಲಿ ಹಲವು ಸಲ ಬಂದಿದೆ. ಇದೊಂದು ಸುಸಂಸ್ಕೃತ ಸಂಗೀತವಾದ್ಯ. ತಂತಿವಾದ್ಯವಾಗಿರುವ ಇದು ಪ್ರಾಚೀನ ವಾದ್ಯವೂ ಹೌದು. ಇಂದಿಗೂ ತನ್ನ ಛಾಪನ್ನು
ಉಳಿಸಿ ಕೊಂಡಿದೆ. ಅದರಲ್ಲೂ ದಕ್ಷಿಣ ಭಾಗದ ಕರ್ನಾಟಕ ಸಂಗೀತ ವಾದ್ಯಗಳಲ್ಲಿ ಒಂದೆನಿಸಿದೆ. ಭೈರವಾಂಕನು ಲಿಂಗ ಪೂಜೆಯ ಒಂದು
ಕ್ರಮವಾಗಿ ಒಂದು ಭಾಗವಾಗಿ ವೀಣೆಯನ್ನು
ನುಡಿಸಿದಂತೆ ಅದಕ್ಕೆ ಉಪಕಥೆಗಳಾಗಿ ಬಂದಿರುವ ನಾರದ ಮುನಿ, ಸಕಲೇಶ ಮಾದರಸ, ಚೇರಮರಾಯ, ನಿಜಲಿಂಗ ಚಿಕ್ಕಯ್ಯ,ಕಿನ್ನರಯ್ಯಗಳು, ವೃತ್ತಾಂತಗಳಲ್ಲಿ
ಶಿವಪೂಜೆಯ ಸಂದರ್ಭದಲ್ಲಿ ವೀಣೆ, ಕಿನ್ನರಿ, ವೀಣೆ
ದಂಡಿಗೆಗಳನ್ನು ನುಡಿಸಿದರೆಂದು ಉಲ್ಲೇಖವಿದೆ.
ಇದರಿಂದ ಅನೇಕಜನ ಶಿವನಶರಣರು ವಚನಕಾರರಾಗಿರುವಂತೆ, ಶಿವಭಕ್ತರಾಗಿರುವಂತೆ ವೀಣಾವಾದಕರೂ ಆಗಿದ್ದರೆಂಬುದನ್ನೂ
ಊಹಿಸಲು ಈ ಉಲ್ಲೇಖಗಳು ಪೂರಕ ಸಾಮಗ್ರಿಯನ್ನು ಒದಗಿಸಿದೆ. ಸಂಗೀತವು ಪೂಜಾ
ಕ್ರಮದಲ್ಲಿ ಒಂದು ಭಾಗವೂ ಆಗಿತ್ತೆಂಬುದು ಈ
ಉಪಕಥೆಗಳಿಂದ ವಿದಿತವಾಗುತ್ತದೆ.
ಇಲ್ಲಿ ವೀಣೆಯ ಪ್ರಕಾರಗಳನ್ನು ನಾವು
ಕಂಡುಕೊಳ್ಳಬಹುದಾಗಿದೆ. ವೀಣೆ ಸಾಮಾನ್ಯವಾಗಿ
ನೋಡಸಿಕ್ಕುವಂತಹ ವಾದ್ಯವಾದರೆ, ಅಥವಾ
ತಂತಿ ವಾದ್ಯದ ಪ್ರಭೇದಗಳಲ್ಲಿ ದಂಡಿಗೆ, ಕಿನ್ನರ(ಚಿಕ)
ವೀಣೆ,
ರುದ್ರವೀಣೆಯ
ಉಲ್ಲೇಖಗಳು ಬಂದಿವೆ.
ರುದ್ರವೀಣೆಯಂ ಪಿಡಿದು ರಾಗವಂ ಮಾಡಿ ಕೊಂಡಾಡಲು(ಅದೇ, ಭಾಗ-೨, ಸಂ.೩,ಪು.೮೬) ಇಲ್ಲಿ
ದೊಂಬರ ಚೆನ್ನಿಯೆಂಬುವವಳು ರುದ್ರವೀಣೆಯನ್ನು ಹಿಡಿದು ರಾಗವನ್ನು ಹಾಡಿದಾಗ `ಜಾತೊಡೆಯ' ಎಂಬಾತನು
ಶೃಂಗಾರಮೋಹಿತನಾಗಿ ತಪೋಭಂಗಕ್ಕೆ ಈಡಾಗುತ್ತಾನೆ. ಗುರಭಕ್ತಬಿಲ್ಲಮರಾಯನ ಈ
ಕಥೆಯಲ್ಲಿ ದೊಂಬರು ನಾಟ್ಯವಾಡುವ ವೀಣೆ ನುಡಿಸುವ, ಮೇಳದಾಟ (ಬಯಲಾಟದಂತಹ) ಆಡುವರೆಂಬ ವಿವರಗಳು ಲಭ್ಯವಿವೆ (ಅಲ್ಲೇ ,ಅದೇ)
ಕರಡೆ,
ಢಕ್ಕೆ, ಡಮರುಗ, ಮುರಜೆ, ಮೃದಂಗ, ನಿಸ್ಸಾಳ, ತಂಬಟ, ಭೇರಿ
ಎಂಬ ಸಾಂಪ್ರದಾಯಿಕ ತಾಳ ವಾದ್ಯಗಳು ಉಲ್ಲೇಖಗೊಂಡಿದ್ದು ಇವು ಬಹುತೇಕ ಚರ್ಮವಾದ್ಯಗಳು.
``.......
ತುಂಬಟ ಭೇರಿ ಕಹಳೆ,
ಜೋಳಿ ಶೋಭನಂಗಳಾಂ
ದೋಳ'' - (ಅದೇ, ಸಂಧಿ-3, ಪು.141,ಭಾಗ-2)
ಹೀಗೆ ಇಲ್ಲಿ ಉಲ್ಲೇಖಗೊಂಡ ತಂಬಟ, ಭೇರಿ,ಕಹಳೆ, ಜೋಳಿ, ಶೋಭನಗಳಾಂಗದೊಳ
ಎಂಬಲ್ಲಿ ತಂಬಟಭೇರಿಯೆ ಜೊತೆ ಜೋಳಿ ಶೋಭನ
ಎಂಬುವುದು ತಾಡನ ವಾದ್ಯಗಳಾಗಿದ್ದವು. ಬಹುಶಃ
ಕರ್ನಾಟಕ ಅಥವಾ ದಕ್ಷಿಣ ಭಾರತದ ಯಾವುದಾದರೂ ಭಾಗಗಳಲ್ಲಿ ಜೋಳಿ,ಶೋಭನ ಎಂಬ ವಾದ್ಯಗಳ ಬಳಕೆ ಈಗಲೂ ಇರಬಹುದು. ಭೇರಿ ಅತ್ಯಂತ
ಚಿರಪರಿಚಿತ ಮತ್ತ ತಂಬಟ ತಮಟೆಯಾಗಿರಬಹುದು.
``ತುತ್ತುರುತುರು'' ಎಂಬ ಕೊಳಲು ಬಾರಿಸುತ ಅಘಳಚಘಳಾ ಎಂದುಲಿವ ಘಂಟೆಯಂ ಕಟ್ಚಿ ಜಂಗುಳಿವೈವಂಗಳೆಂಬ
ಪಶುಗಳ ಕಾಯ್ವ ತುರುವಳ, ಶಿವ ಭಕ್ತನ ಮನೆಯ ತುರವಳ
ನಾನೆಂದು ಕೊಳಲ ನೂದಿ ತುರುಗಗಳ ಕಾಯುತ್ತಿರಲೊಂದು ದಿನ'' (ಅದೇ, ಭಾಗ-೨,
ಸಂ.೪,ಪು.೨೫೪) ಎಂಬ ಉಲ್ಲೇಖ ತೆಲುಗ
ಜೊಮ್ಮಣ್ಣಯ್ಯನ ನವಾಂಗ ದೊಳು ಲಿಂಗಗಳ ವಶಮಾಡಿದನು'' ಎಂಬುದಕ್ಕೆಂಬ ಕಥೆಯಲ್ಲಿ
ಬಂದಿದೆ. ತುರುಗಳನ ಕಾಯುವವರು ಕೊಳಲನ್ನು ಊದುತ್ತಿದ್ದರು ಎಂದು ಇದರಿಂದ
ತಿಳಿಯುತ್ತದೆ. ಇಂದಿಗೂ ಕುರಿಗಾಹಿಗಳು ದನಗಾಹಿಗಳು
ಕೊಳಲೂದುವುದನ್ನು ನೋಡಬಹುದು. ಇತ್ತೀಚೆಗೆ ಈ ಸಂಸ್ಕೃತಿ ಮಾಯವಾಗುತ್ತಿದೆ. ಇನ್ನೊಂದು ವಿಚಾರವೆಂದರೆ
ಕೊಳಲು ಒಂದು ಜನಪದ ವಾದ್ಯವೂ ಮತ್ತು
ಪಂಡಿಕ ಸಭೆಯಲ್ಲಿ ಪರಿಣಿತರು ಊದುವ
ಶಿಷ್ಟಪದವಾದ್ಯವೂ ಆಗಿದೆ ಎಂಬುದನ್ನು ಮರೆಯುವಂತಿಲ್ಲ.
ಕೊಳಲು ಒಂದು ಗಾಳಿವಾದ್ಯ. ಅಘಳು
ಚಘುಳೆಂದು ಉಲಿವ ಘಂಟೆ ಜಂಗಮರು ಧರಿಸುತ್ತಿದ್ದ ಜಂಗು ಆಗಿರಬೇಕು. ಹಿಟ್ಟಿಗೆಂದು ಜೋಳಿಗೆ
ಸಹಿತವಾಗಿ ಮನೆ ಮನೆಗೆ ಬರುತ್ತಿದ್ದ ಜಂಗಮರು ಈ `ಜಂಗು' ಎಂಬ
ಘಂಟೆಗಳ ಇಂಡೆಯನ್ನು (ಸಿಂಬೆ) ಮೊಳಕಾಲಿಗೆ
ಹಾಕಿಕೊಂಡು ಬರುತ್ತಿದ್ದರು. ಆ
ಘಂಟೆಗಳನ್ನು ಬೋರುಗ ಎಂಬ ಹೆಸರಿನಿಂದ ಕರೆಯುತ್ತಿದ್ದು ಅದನ್ನು ಎತ್ತಿನ ಕೊರಳಲ್ಲಿ ಕೂಡ
ಹಾಕಲಾಗುತ್ತಿತ್ತು.
ಕೊಳಲಿನಂತೆಯೇ ಉಸಿರಿನಿಂದ
ನುಡಿಯುವ ವಾದ್ಯಗಳು ಕಹಳೆ, ಕೊಂಬು,ತುತ್ತುರಿ, ಗಾಳೆ, ಚಿನ್ನಗಾಳೆ
ಎಂಬ ವಾದ್ಯಗಳ ಉಲ್ಲೇಖವೂ ಉಪಲಬ್ಧವಿದೆ. ಅದನ್ನು ನೋಡುವ ಮೊದಲು `ಕುಂಬಾರನಿದಿರಿ ಕುಣಿದಂತೆ'' ಎಂಬ
ಕಥೆಯಲ್ಲಿ ಬರುವ ಉಲ್ಲೇಖವನ್ನು ನೋಡಿ.
ಸುಜ್ಞಾನವೆಂಬ ಕೊಡತೆಯಿಂದ ಆಮಡಿಕೆಯುಂ ತಟ್ಟುವ ಧ್ವನಿ ಕರೆಡೆ, ಕೌಸಾಳೆ, ಢಕ್ಕೆ, ಡಮರುಗ, ಮುರಜೆ, ಮೃದಂಗ, ವುಟುಕು, ಕಹಳೆಯಂತಾಗ ಲಿಂಗದಲ್ಲಿ ಪರವಶವನೈದಿ(ಅದೇ,ಭಾಗ-೧, ಸಂ.೧,ಪು.೨೫೪)
ಮಡಿಕೆ ತಯ್ಯಾರಿಸುವ ಕಾಯಕದಲ್ಲಿ ನಿರತನಾಗಿರುತ್ತಾನೆ ಕುಂಬಾರ ಗುಂಡಯ್ಯ, ಆತ ಕಾಯಕದಲ್ಲಿ ನಿರತನಾಗಿ ಗಡಿಗೆಗೆ ಆಕಾರ ಕೊಡಲು ಜ್ಞಾನವೆಂಬ ಕೊರಡಿನಿಂದ ತಟ್ಟುತ್ತಿದ್ದರೆ ಆ ಧ್ವನಿ
ವೈವಿಧ್ಯಮಯ ವಾದ್ಯ ವಿನೋದದ ಧ್ವನಿ ಹೊಮ್ಮಿಸುತ್ತಿತ್ತು. ಅವೂ ಶಿವಸಂಸ್ಕೃತಿಯ ವಾದ್ಯಗಳು.
ಕರಡೆ ರುದ್ರ ನರ್ತನದ ವಾದ್ಯ. ಕೌಂಸಾಳೆ ಒಂದು ನೃತ್ಯಕ್ಕೆ ಹಿನ್ನೆಲೆ
ಸಂಗೀತವೊದಗಿಸುವ ತಾಳವಾದ್ಯ. ಢಕ್ಕೆ ಈಗಲೂ ದುರುಗಮುರುಗಿ, ಭಿಕ್ಷುಕರ ವಾದ್ಯವಾಗಿದೆ. ಅದನ್ನು ಉರುಮೆ ಎಂದೂ ಕರೆಯುತ್ತಾರಂತೆ. ಡಮರುಗ, ಪರಮಾತ್ಮನ ಕೈಯಲ್ಲಿರುವ ವಾದ್ಯ. ಹೀಗೆ ಇವು ಚರ್ಮವಾದ್ಯಗಳು, ಇವುಗಳೊಂದಿಗೆ
ಹೆಸರಿಸಲ್ಪಟ್ಟ ಮೃಗದಂತೆ ವುಡುಕ, ಮುರುಜೆಯೆಂಬ
ವಾದ್ಯಗಳೂ ಚರ್ಮನಿರ್ಮಿತ ತಾಳವಾದ್ಯಗಳಾಗಿದ್ದು ಶಿವಾರಾಧನೆಯ ಸಂಪ್ರದಾಯದಲ್ಲಿ
ಬಾರಿಸುವ ವಾದ್ಯಗಳಾಗಿರಬಹುದು.
ಈಗಾಗಲೇ ಪ್ರಸ್ತಾಪಿಸಿರುವಂತೆ ಕೊಳಲು
ಒಂದು ಗಾಳಿವಾದ್ಯ ವರ್ಗಕ್ಕೆ ಸೇರುವ ಕೆಲವು ವಿಶೇಷ ಸಂದರ್ಭದಲ್ಲಿ ಮಾತ್ರ ಊದಲ್ಪಡುವ ಸಾಂಕೇತಿಕ
ವಾದ್ಯಗಳು. ಸಂಪರ್ಕ ವಾದ್ಯಗಳು ಕಹಳೆ ಇತ್ಯಾದಿಗಳ ಕುರಿತು ಉಲ್ಲೇಖ ಬಂದಿವೆ.
ಈ ಹಿಂದೆ ಹೇಳಿದಂತೆ ರಾಜಪರಿವಾರ, ಸೈನ್ಯ, ಯುದ್ಧ, ಬೇಟೆ, ಅಥವಾ
ವನಕೇಳಿಗೆ ಹೊರಟರೆ ಬಾರಿಸುವ ವಾದ್ಯಗಳ ಉಲ್ಲೇಖ ಈ ಕೃತಿಯಲ್ಲಿವೆ. ಎರಡನೇ ಸಂಧಿಯಿಂದ ಆರಂಭವಾಗಿ ಒಂದು ಚಿಕ್ಕ ಕಾವ್ಯವಾಗಿ ಉಪಕಾವ್ಯವಾಗಿ, ಈ ಕೃತಿಯಲ್ಲಿ
ಸೇರ್ಪಡೆಯಾಗಿರುವ ಕಾಶ್ಮೀರದರಸು
(ಮೋಳಿಗೆ ಮಾರಯ್ಯ) ಮಹಾದೇವ ಭೂಪಾಲನು ವನಕೇಳಿಗೆ ಹೊರಟನಂತೆ ಆಗ -
ಸೂಳೈಪ ನಿ
ಸ್ಸಾಳ ತಂಬಟ, ಭೇರಿ,ಪಲವು
ತೂಳವರೆಯು ಚಿ
ನ್ನಾಗಾಳೆ, ತುತ್ತೂರಿಂಗೊಂಬು
ಗಾಳೆಗಳೊದರಿದವಾಗ (ಸಂಧಿ-2, ಪದ್ಯ-7, ಪುಟ
266,
ಭಾಗ-1)
ಈಗಾಗಲೇ ವಿವರಿಸಲಾಗಿರುವಂತೆ
ನಿಸ್ಸಾಳ,
ತಂಬಟ, ಭೇರಿ, ಚರ್ಮವಾದ್ಯಗಳು, ಆದರೆ ಪಲವು ತೂಳವರೆ ಗಳುವಾದ್ಯ ಗಳೆಂಬುದೇನೋ ಸರಿ. ಅವುಗಳು
ಯಾವ ಆಕಾರ, ವರ್ಗದ ವಾದ್ಯಗಳೆಂಬುದು
ನಮಗರಿಯದು. ಚಿನ್ನಗಾಳೆ, ತುತ್ತೂರಿ, ಗೊಂಬು, ಗಾಳೆಗಳೊದರಿದವಂತೆ
ಊದಿದಾಗ ಒದರುವ ವಾದ್ಯಗಳು ಇವು ಆಗಿವೆ. ಅಂದರೆ ಉಸಿರುವಾದ್ಯ-
ಗಾಳಿವಾದ್ಯಗಳು.
ಸಂಗೀತಕ್ಕೆ ಸಂಬಂಧಿಸಿದ ಇನ್ನು ಅನೇಕ
ಸಂಗತಿಗಳು ಈ ಕೃತಿಯಲ್ಲಿ ಪ್ರಸ್ತಾಪಿತವಾಗಿವೆ.
ರಾಗಗಳು- ಮೇಳಗಳು, ತರುಪಾಟ, ನೃತ್ಯ, ನೃತ್ಯ
ಪರಿಭಾಷೆಗಳು,
ಈ ಕಥನಕಾರನ ಜ್ಞಾನ ಮತ್ತು ಸ್ಮರಣಶಕ್ತಿಯ ಅಗಾಧತೆಗೆ ಸಾಕ್ಷಿಯಾಗಿದೆ.
``ಶೃತಿಗೊವಾದೀಶರೋಳ್ ಶ್ರುತಿಗೇಯರಸಕೊಲ್ಕು ಶೃತಿಯೊಳಲಂ ಕೃತಿಗೆಯ್ದು '' ಎಂಬ
ಕಥೆಯಲ್ಲಿ 32 ರಾಗ 64
ಗೀತೆ,
ಎಂಬತ್ತೆಂಟು ಪ್ರಬಂಧ, ನೂರೊಂದು ತಾಳ ಮೊದಲಾದ ಸಂಗೀತರಾಗಗಳು ಯಾವ ರೀತಿ
ಉದಯವಾದವು ಎಂಬುದನ್ನು ಹೇಳಿದ್ದಾನೆ.
ಸ್ತ್ರೀರಾಗ- ಪುರುಷರಾಗಗಳೆಂಬ ಭೇದವಿದ್ದು 8 ಪುರುಷ ರಾಗ- 24
ಸ್ತ್ರೀರಾಗಗಳು ಹೀಗೆ ಒಟ್ಟು 32
ರಾಗಗಳು.
ಇವುಗಳನ್ನು ಯಾರು ಯಾರು ಹಾಡುತ್ತಾರೆ ಅಥವಾ ಯಾವ ಯಾವ ವರ್ಗದವರಿಗೆ ಯಾವ ಯಾವ ರಾಗಗಳು
ಎಂಬುದರ ವಿವರವೂ ಪ್ರಕಟವಾಗಿದೆ.
8 ಪುರುಷ ರಾಗಗಳನ್ನು ನಂದೀಶ್ವರಾ ಪ್ರಮಥಗಣರು, ಧನ್ಯಾಸಿ, ಭೂಪಾಳಿ, ಮಂಗಳಕಾಶಿ, ಮಲಹರಿ, ಲಲಿತ
ಈ ಐದು ರಾಗಗಳನ್ನು ದೇವತೆಗಳು, ವೇಶಾಕ್ಷಿ, ನಾರಾಯಣಿ, ವಸಂತ, ಮಾಳವಶ್ರೀ, ದೇವಗಾಂಧಾರ ಈ ರಾಗಗಳನ್ನು ಹನ್ನೆರಡು ಲಕ್ಷ ಗಂರ್ಧವರ ಹಾಡುವರಂತೆ. ಗುಂಡಶ್ರೀ, ಗುರ್ಜರಿ
ರಾಮಶ್ರೀ,
ಸೌರಾಷ್ಟ್ರೀ
ಈ ಐದು ರಾಗಗಳನ್ನು ಋಷಿಗಳು ಪಾಡುವರು.ವರಾಳಿ, ಅಹಾರಿ, ಫಳಮಂಜರಿ, ದೇವಗುಪ್ತಿ, ಕುರಂಜಿ, ಈ
ಐದು ರಾಗಗಳನ್ನು ಯಕ್ಷಗಳು ಹಾಡುವರು, ನಾಟ್ಯ,ಸಾಳಂಗ, ಬಂಗಾಳಿ- ಈ ನಾಲ್ಕುರಾಗಗಳಲ್ಲಿ ರಾಗಗಳನ್ನು
ನಂದೀಶ್ವರಾದಿಯಾಗಿ ಪ್ರಮಥರು ಹಾಡುವರು ಎಂದಿದ್ದಾನೆ. ವಸಂತರಾಗ ವಸಂತ ಪೂಜೆ, ಶಿವನಿಗೆ
ಮಾಡಿದಲ್ಲದೆ ಆ ರಾಗ
ಮಾಡಬಾರದೆಂದರಿವುದು. ಈ ರಾಗವನ್ನು ಮನು,ಮುನಿ, ಯಕ್ಷರ, ರಾಕ್ಷಸ, ಗರುಡ,ಗಂಧರ್ವ
ಪ್ರಮಥಗಣಂಗಳು ಹಾಡುವಂತೆ. ಈ ಎಲ್ಲಾ
ರಾಗಗಳು ಅಕಾರ, ಉಕಾರ, ಮಕಾರ
ಮಿಶ್ರಿತ ಓಂಕಾರದಿಂದ ಉದಿಸಿದವೆಂದೂ, ಕಂಠ, ಶಿರ, ನಾಸಿಕ, ಹೃದಯ
ಮುಖ,
ತಾಳುಗೆ, ಪೂವಾಂಗ ಎಂಬ ಸಪ್ತಾಂಗದಿಂದ ಉದಿಸಿದವೆಂತೆಲೂ,ಅಂದರೆ ಶರೀರದ ಈ 'ಷಡು ಸ್ವರ ಜನನ ಸ್ಥಾನಂಗಳು.' ಇವುಗಳಿಂದ ಮಯೂರಧ್ವನಿ,ವೃಷಭ ಧ್ವನಿ, ಅಜ
ಧ್ವನಿ,
ಸಿಂಹಧ್ವನಿ, ಕೋಕಿಲಧ್ವನಿ, ಜಾತ್ಯಶ್ವಧ್ವನಿ, ಮದಗಜ
ಧ್ವನಿ,
ಇಂತೀ ಸಪ್ತಸ್ವರಗಳು, ಸಪ್ತ
ಸ್ವರಗಳಿಂದಲೇ 22 ಶ್ರುತಿಗಳಾದವೆಂದು
ಈ ಕೃತಿಯಲ್ಲಿ ಪ್ರಸ್ತಾಪಿತವಾಗಿದೆ. (ಅದೇ, ಭಾಗ-೧,
ಸಂ.೧,ಪು.೨೧-೨೨)ಈ ವಿವರಗಳು ಶಾಂತಲಿಂಗದೇಶಿಕನ ಸಂಗೀತದ ಬಗೆಗಿನ ಅಪರಿಮಿತವಾದ ಜ್ಞಾನವನ್ನು ಸೂಚಿಸುತ್ತದೆ.
ಇದೆಲ್ಲ ನೋಡಿದಾಗ ರಾಗಗಳು, ಅದನ್ನು
ಹಾಡುವ ವರ್ಗ, ನಿಯಮ, ಮೂಲನಾದ, ಸ್ವರಜನ್ಮ ಸ್ಥಾನಗಳು ಮತ್ತು ಸಂಗೀತದ ಸಪ್ತಸ್ವರಗಳಿಗಿರುವ ಹೆಸರುಗಳು ಇವನ್ನೆಲ್ಲ ಕಥನಕಾರ ಶಾಂತಲಿಂಗದೇಶಿಕ
ನಿರೂಪಿಸಿದ್ದಾನೆ. ಇಲ್ಲಿ ಸೂಚಿಸಿದ ಬಹುತೇಕ ರಾಗಗಳು ಕರ್ನಾಟಕ ಸಂಗೀತ ಪರಂಪರೆ ಅಥವಾ ದಕ್ಷಿಣಾದಿ ಸಂಗೀತ ಪರಂಪರೆಗೆ ಸೇರಿದವೆಂಬುದನ್ನು
ಗಮನಿಸ ಬಹು ದಾಗಿದೆ.
(ರಾಮದೂತನಾದ ಹನುಮಂತ-ಮುಕ್ತಿಗಾಗಿ ರುದ್ರನಿಂದ
ಶಿವದೀಕ್ಷೆ ಪಡೆದು ಶಿವನನ್ನು
ಸ್ತುತಿಸಿದನಂತೆ.ಸಂಗೀತದ ಮೂಲಕ ಶಿವ ಸಾಕ್ಷಾತ್ಕಾರ ಪಡೆದ ರಾಮದೂತ ಹನುಮಂತ)
ಹೀಗೆ ಇಡೀ ಕತೆಯ ತುಂಬ ಸಂಗೀತದ ಬಗ್ಗೆ ಹಲವು ಹತ್ತು ವಿಚಾರಗಳು ಎಡೆ ಪಡೆದುಕೊಂಡಿವೆ.
ಬಹುರೂಪಿ ಚವುಡಯ್ಯ
ಕಥೆಯಲ್ಲಿ ``ಭಾಸ್ಕರ ಭಟನೆಂಬುವನ ಮಗ ಅಚ್ಯುತನೆಂಬವನು ಗಾನ, ನರ್ತನ
ಜಾತಕಾರ ವಿದ್ಯಮಂ ಕಲಿತ ಗಾನ ವಿದ್ಯಾಗಜೇಂದ್ರ ಸಿಂಹ ನೆಂಬ
ಬಿರಿದ ಹೊಗಳಿಸಿಕೊಳ್ಳುತ್ತಿರಲು''(ಅದೇ, ಭಾಗ-೧, ಸಂ.೧,ಪು.೨೨೨) ಎಂಬ
ಉಲ್ಲೇಖವಿದೆ. ಇದನ್ನು ಗಮನಿಸಿದರೆ ಗಾನ ನರ್ತನ ವಿದ್ಯೆಗಳು ಹೊಟ್ಟೆ ಹೊರೆವ ಸಾಧನಗಳನ್ನಾಗಿ ಮಾಡಿಕೊಂಡರೆ
ಅದು ಬಹುಶಃ ಜಾತಕಾರ ವಿದ್ಯ
ಎನಿಸುತ್ತಿತ್ತೆಂದು ಕಾಣುತ್ತದೆ.
ಯಾಕೆಂದರೆ ಭಾಸ್ಕರಭಟ್ಟ ಎಂಬ
ಬ್ರಾಹ್ಮಣ ವರ್ಗದವನ ಮಗ ಗಾನ, ನರ್ತನ
ವಿದ್ಯೆಗಳೆಂಬ ಜಾತಿಕಾರ ವಿದ್ಯ ಕಲಿತನಂತೆ. ಇದರಿಂದ ಜಾತಿಕಾರ ವಿದ್ಯೆ ಒಂದು ವರ್ಗಕ್ಕೆ ಸೀಮಿತವಾಗಿರಲಿಲ್ಲವೆನಿಸುತ್ತದೆ. ಮತ್ತು
ಅದರಲ್ಲಿ ಪರಿಣಿತರಾದವರಿಗೆ ಬಿರುದು ಬಾವಲಿಗಳು
ದೊರೆಯುತ್ತಿದ್ದವೆಂಬುದಾಗಿ ತಿಳಿದು ಬರುತ್ತದೆ.
``ದೇಶ-ಕೋಶ,
ಬೊಕ್ಕಸ,ಭಂಡಾರ, ಆನೆ
ಕುದುರೆ ರಥ,
ಪದಾತಿ,ಛತ್ರ, ಚಾಮರ,ಕುಂಚ,ಕಳಂಚಿ, ಸಿಂಧ
ಸೀಗುರಿ,
ಮುತ್ತು ರತ್ನ ಮೊದಲಾದ ಸಕಲೈಶ್ವರ್ಯಮಂ
ಶಿವಭಕ್ತರಿಗಿತ್ತು''(ಅದೇ, ಭಾಗ-೧, ಸಂ.೧,ಪು.೫) ನಡೆಯುತ್ತಾನೆ ಭೈರವರಾಜ. ಇಲ್ಲಿ ರಾಜನೊಬ್ಬನಿಗೆ ಇರ ಬಹುದಾದ ಸಕಲೈಶ್ವರ್ಯದ ಪ್ರಸ್ತಾಪವಿರುವುದನ್ನು ಕಾಣಬಹುದಾಗಿದೆ.
ಇದು ತೀರಾ ಅನುಷಂಗಿಕ
ಪದ್ಧತಿಯಾಗಿದ್ದರೂ ಐತಿಹಾಸಿಕತೆಯ ದೃಷ್ಯಿಯಿಂದ
ಶಾಂತಲಿಂಗ ದೇಶಿಕರ ಸಮಕಾಲೀನ ರಾಜನೊಬ್ಬನ ಅಧಿಕಾರ
ಮತ್ತು ಐಶ್ವರ್ಯದ ಕುರುಹುಗಳೆಂಬುದನ್ನು ಮರೆಯುವಂತಿಲ್ಲ.
ಚರಣದ ಬಿರಿದು
ಕಂಡಾಗಲೇ ಮಲ್ಲಿಪಟ್ಟಣದ ರಾಮರಾಜನ ಪಟುಭಟ
ಭೈರವಾಂಕನನ್ನು ತಡೆಯುತ್ತಾನೆ.
(ಅದೇ, ಭಾಗ-೧, ಸಂ.೧,ಪು.೫) ಇದರಿಂದ ಚರಣದ ಬಿರಿದು ಕದನಂಕಶೂರರಿಗೆ ಯುದ್ಧಾಹ್ವಾನವೂ ಆಗಿತ್ತೆಂಬುದನ್ನು ನಾವು ಮನಗಾಣುತ್ತೇವೆ.
ಹರಿಶ್ಚಂದ್ರನ ಮುಂದೆ ವಿದ್ಯಗಳ ತೋರಿ ಗಾನಮಾಡಿದ ವಿಶ್ವಾಮಿತ್ರನ ಕೃತಕ
ಜನ್ಯಪುತ್ರಿಯರಿಗೆ ರಾಜಮುದ್ರೆ, ಛತ್ರವ
ನೀಡುತ್ತಾನೆ. ಅವನ್ನು ಪಡೆದೆ ವಿಶ್ವಾಮಿತ್ರ
ರಾಜ್ಯ ನನ್ನದಾಯಿತು. ನೀ ಹೋಗು ಎನ್ನುತ್ತಾನೆ. (ಅದೇ, ಭಾಗ-೧, ಸಂ.೧,ಪು.೭೧) ಇಲ್ಲಿ ಛತ್ರ ಮತ್ತು ರಾಜಮುದ್ರೆಗಳು ಪ್ರಾಚೀನ ಕಾಲದ ರಾಜ ಅಧಿಕಾರದ ಕುರುಹುಗಳಾಗಿದ್ದವು. ಅವನ್ನು
ಹೊಂದಿದವರೇ ರಾಜ್ಯಾಧಿಪತಿಗಳೆಂಬ ಸಾಂಪ್ರದಾಯಿಕ
ರಾಜನೀತಿ ಶಾಂತಲಿಂಗದೇಶಿಕರ ಕಾಲದಲ್ಲೂ ಇತ್ತೆಂದು ಭಾವಿಸಬಹುದೆ? ಯಾಕೆಂದರೆ
ಸಮಕಾಲೀನ ಬೆಳಕಿನಲ್ಲಿ ಪುರಾತನ ಹರಿಶ್ಚಂದ್ರ ಕಥೆಯನ್ನು ಕವಿ ಹೇಳಿರಬಹುದಲ್ಲವೆ?
``ಆನೆ ಕುದುರೆ ಮಂತ್ರಿ
ಸೇನೆ ಭಂಡಾರದೇ
ಶಾನಿಕ ಹಿತರಾಪ್ತ ಸಖರು'' (ಸಂಧಿ-1, ಪದ್ಯಸಂಖ್ಯೆ-(? ) ಪು.69 ,ಭಾಗ-1)
-
ಇವು
ರಾಜನೊಬ್ಬನ ಸುತ್ತಮುತ್ತ ಸಹಜವಾಗಿ
ಇರುತ್ತಿದ್ದ ರಾಜ್ಯಪರಿವಾರದ ಸಂಗತಿಗಳು.
ಅಥವಾ ರಾಜನೊಬ್ಬನ ಬದುಕಿನ ಅವಿಭಾಜ್ಯ ಸಂಗತಿಗಳು
ಎಂದು ಭಾವಿಸಬಹುದಾಗಿದೆ.
ಅನೇಕ ಕಾಯಕಗಳ ಪ್ರಸ್ತಾಪವೂ ಈ
ಕೃತಿಯಲ್ಲಿದೆ. ಶಾಂತಲಿಂಗದೇಶಿಕರು ಹೇಳುವ ಪೌರಾಣಿಕ ಸಮಯದ
ಕಥೆಗಳನ್ನು ಬಿಟ್ಟರೆ ಆತ ಹೇಳುವ ಬಹುತೇಕ ಕಥೆಗಳು
63 ಪುರಾತನರು ಮತ್ತು ಕಲ್ಯಾಣದ ಶರಣರಿಗೆ ಸಂಬಂಧಿಸಿದವುಗಳಾಗಿವೆ. ಪೂರ್ವ ಪುರಾತನರೆನಿಸಿದ 63 ತಮಿಳು ಪುರಾತನರ ಕಾಯಕಗಳು, ನೂತನ ಕಲ್ಯಾಣದ ಶರಣರ ಕಾಯಕಗಳು ಮತ್ತು ಅವುಗಳ
ರೀತಿಯನ್ನು ಕುರಿತು ಸಂಗತಿಗಳು
ಈ ಕೃತಿಯಲ್ಲಿ ವ್ಯಕ್ತವಾಗಿವೆ.
ತಳವಾರಿಕೆ
ಬೇಟೆ ಕಾಯಕ
ಮೀನುಗಾರಿಕೆ ಕಾಯಕ
ಚೋರಕಲವೃತ್ತಿ
ಒಕ್ಕಲಿಗಕಾಯಕ
ಕನ್ನ ಕಾಯಕ,
ಮೆದೆ ಒಟ್ಟುವ ಕಾಯಕ,
ವಾರಾಂಗನ ಕಾಯಕ,
ಪುಷ್ಪದಿಂಡೆ ಕಾಯಕ,
ವೀಳ್ಯದ ಕಾಯಕ,
ರತ್ನ ಪರೀಕ್ಷಣದ ಕಾಯಕ,
ಮೋಳಿಗೆ ಕಾಯಕ,
ಮೊರನ ಕಾಯಕ,
ಬಿದಿರ ಕಾಯಕ,
ಕರುಣಿಕ ಕಾಯಕ,
ಗೋಣೀ ಕಾಯಕ,
ಕೀರ್ತಿಸು ಕಾಯಕ,
ಸ್ತೋತ್ರಕಾಯಕ,
ಭಸಿರವಿಡುವ ಕಾಯಕ,
ಮಜ್ಜಿಗೆ ಕಾಯಕ,
ಮಡಿವಾಳಕಾಯಕ,
ಸೂಜಿಕಾಯಕ,
ದೋಸೆಕಾಯಕ,
ನಗೆಸುವ ಕಾಯಕ,
ಚಮ್ಮಾರಿಕೆ ಕಾಯಕ,
ಢಕ್ಕೆಯ ಕಾಯಕ,
ಪಡಿಹಾರ ಕಾಯಕ,
ಕುರುಳಮಾರುವ ಕಾಯಕ.
ಹೀಗೆ ಹಲವಾರು ಶರಣರು ಕೈಗೊಂಡು ಮಾಡುತ್ತಿದ್ದ
ಕಾಯಕಗಳ ಪ್ರಸ್ತಾಪ ಈ ಕೃತಿಯಾಗಿದೆ. ಅಷ್ಟೇ ಅಲ್ಲ.
ಅವುಗಳ ರೀತಿ,
ಹಿಂದಿರುವ ತಾತ್ವಿಕನೆಲೆಗಳೂ ಅಲ್ಲಲ್ಲಿ
ವ್ಯಕ್ತವಾಗಿರುವುದನ್ನು ಕಾಣಬಹುದಾಗಿದೆ.
ಅಚ್ಚರಿ ಹುಟ್ಟಿಸುವ ಸಂಗತಿ
ಎಂದರೆ ವಾರಾಂಗನಾ ವೃತ್ತಿ, ಕನ್ನಗಳ್ಳತನ, ನಗಿಸುವುದು ಇವೂ ಕೂಡ ಕಾಯಕಗಳು ಎಂದು ಹೇಳಿರುವುದು. ಇವನ್ನೂ ಸತ್ಯಶುದ್ಧತೆಯಿಂದ ಮಾಡಿ ಮುಕುತಿ ಪಡೆದವರ ಕಥೆಗಳು
ಹೇಳಲ್ಪಟ್ಟಿವೆ.
ತಳವಾರಿಕೆ, ಬೇಟೆಗಾರಿಕೆ, ಮೀನುಗಾರಿಕೆ, ಒಕ್ಕಲಿಗಕಾಯಕ, ಪುಷ್ಪದಿಂಡೆ
ಕಾಯಕ,
ಮೋಳಿಗೆ ಕಾಯಕ, ಚಮ್ಮಾವುಗೆ ಕಾಯಕ, ಮಡಿವಾಳ ಕಾಯಕ, ಬಿದರಿರಕಾಯಕ, ಸೂಜಿ ಕಾಯಕ, ಮಡಿವಾಳ ಕಾಯಕ, ತುರಗಾಡ
ಕಾರ್ಯ ಪಡಿಹಾರ ಕಾಯಕ, ಇವೇ ಮುಂತಾದವುಗಳು
ಸೇವಾವೃತ್ತಿಯ ಕಾಯಕಗಳಾಗಿದ್ದೆವೆಂದು ತೋರುತ್ತದೆ. ಇಂಥ ಅನೇಕ ಕಾಯಕಗಳನ್ನು ಕೈಗೊಂಡು, ಬಂದ ಆದಾಯವನ್ನು ಜಂಗಮದಾಸೋಹಕ್ಕೆ ಸವೆಸಿದ ಸಾಕಷ್ಟು ಶರಣರು ಕಲ್ಯಾಣದಲ್ಲಿದ್ದರು.
ಇವರಲ್ಲಿ ಕೆಲವರು ವಚನಕಾರರೂ ಆಗಿರುವರು ಎಂಬುದನ್ನು ಮರೆಯುವಂತಿಲ್ಲ.
ಕೀರ್ತಿಸುವ, ಭಸಿತವಿಡುವ, ಸ್ತೋತ್ರ ಕಾಯಕಗಳು, ಧಾರ‍್ಮಿಕ
ವಿಧಿವಿಧಾನಕ್ಕೆ ಸಂಬಂಧಿಸಿದ ಕಾಯಕಗಳಾಗಿವೆ.
ಮಜ್ಜಿಗೆ ಕಾಯಕ, ದೋಸೆಕಾಯಕ, ಇವುಗಳು
ಇಂದಿನ ಹೊಟೇಲ್ ಸಂಸ್ಕೃತಿಯ ಮೂಲರೂಪ ಗಳಾಗಿರಬಹುದಲ್ಲವೆ?
ಚೋಳದೇಶದ ಅತಿಭಕ್ತ ಒಬ್ಬ
ಮೀನುಗಾರರ
ಶಿವಭಕ್ತನಾಗಿದ್ದನಂತೆ(ಅದೇ, ಕಥೆ೩೫೮ ಭಾಗ-೨, ಸಂ.೩,ಪು.೩೮) ಒಕ್ಕಲಿಗ ಮುದ್ದಯ್ಯ (ಮುಗ್ಧಯ್ಯ)ವ್ಯವಸಾಯ ಮಾಡಿ ಲೌಕಕ
ಮಾರ್ಗದೊಳಿದ್ದು ಜಂಗಮಾರ್ಚನೆ ಮಾಡುತ್ತಿದ್ದನಂತೆ. (ಅದೇ,ಕಥೆ೨೬೯ ಭಾಗ-೨, ಸಂ.೩,ಪು.೪೯)
ಆಮುಗಿ ದೇವ ಮತ್ತು ಆತನ ಸತಿ ವರದಾನಿಯಮ್ಮ ಸೊನ್ನಲಾಪುರದಲ್ಲಿ ನೇಯ್ಗೆ ಕಾಯಕವ ಮಾಡುತ್ತಿದ್ದರಂತೆ (ಅದೇ,ಕಥೆ೨೮೩
ಭಾಗ-೨, ಸಂ.೩,ಪು.೬೪-೬೫)
ಸೌರಾಷ್ಟ್ರದ ಆದಯ್ಯ ಹುಲಿಗೆರೆಗೆ ವ್ಯವಹಾರಕ್ಕಾಗಿ ಬಂದನಂತೆ, (ಅದೇ,ಕಥೆ೨೮೩ ಭಾಗ-೨,
ಸಂ.೩,ಪು.೭೧) ನುಲಿಯ
ಚಂದಯ್ಯ `ಮೆದೆಯ ಹುಲ್ಲನ್ನು ತಂದು ನುಲಿಯಂ ಹೊಸೆದು ಮಾರಿ
ಜಂಗಮಾರ್ಚನೆಯ' ಮಾಡುತ್ತಿದ್ದನಂತೆ.
(ಅದೇ,ಕಥೆ೨೮೪ ಭಾಗ-೨, ಸಂ.೩,ಪು.೬೪-೬೫)
ಬಳ್ಳದಲ್ಲಿಯೇ ಲಿಂಗವನ್ನು ಕಂಡು ಬಳ್ಳೇಶ ಮಲ್ಲಯ್ಯನೂ ಒಬ್ಬ
ವ್ಯಾಪಾರಿ(ಅದೇ,ಕಥೆ೨೯೦ ಭಾಗ-೨, ಸಂ.೩,ಪು.೭೯)
ಗೊಲ್ಹಾಳಯ್ಯ ಕುರಿಯ ಹಿಕ್ಕೆಯಲ್ಲಿ ಲಿಂಗವನ್ನು ಕಂಡುಕೊಂಡ ಅಪ್ರತಿಮ ಮುಗ್ಧ ಶಿವಭಕ್ತ.
ಈತ ಒಬ್ಬ ಕುರಿಗಾಹಿ. ಕುರಿ ಕಾಯುವುದೇ ಈತನ ಕಾಯಕವಂತೆ. (ಅದೇ,ಕಥೆ೨೯೧
ಭಾಗ-೨, ಸಂ.೩,ಪು.೭೯) ಚಂಡೇಶನು
ಒಬ್ಬ ದನಗಾಹಿ ಕಾಯಕದ ಶರಣ. (ಅದೇ,ಕಥೆ೨೯೨
ಭಾಗ-೨, ಸಂ.೩,ಪು.೮೧)
``ಶಂಕರ ದಾಸಮಯ್ಯನು
ಕೌದಿಯ ಹೊಲಿದು ಕಾಯಕ ತಂದು ಜಂಗಮಕ್ಕೆ' ನೀಡುವಂಥ
ಶರಣನಾಗಿದ್ದನಂತೆ. ಶಿವನು ಪ್ರತ್ಯಕ್ಷನಾಗಿ ಬೇಡು
ಎಂದರೆ ಆತ ``ಸೂಜಿಗೆ ದಾರನೇರಿಸುವ ದೃಷ್ಟಿಯ ನೀಡು'' ಎಂದನಂತೆ ! (ಅದೇ,ಕಥೆ೨೯೬ ಭಾಗ-೨,
ಸಂ.೩,ಪು.೮೪)
ಈ ಕಥೆಪುನರುಕ್ತವಾಗಿದೆ. ಆಂಧ್ರದೇಶದ ಪುಲೀಂದ್ರ ಪುರದ ಕಲ್ಯಾಣಶೆಟ್ಟಿ ವ್ಯಾಪಾರಿ
ಕಾಯಕದಿಂದ ಜಂಗಮಭಕ್ತಿ ಮಾಡುತ್ತಿದ್ದನಂತೆ. (ಅದೇ,ಕಥೆ೩೦೦
ಭಾಗ-೨, ಸಂ.೩,ಪು.೮೮)
ಚೋಳ ದೇಶದ ಇಳಿಯಾಂಡ ಗುಡಿಯಮಾರಯ್ಯ ಹಲಾಯುಧ ಕಾಯಕ(ನೇಗಿಲು ಕಾಯಕ) ಮಾಡುತ್ತಿದ್ದು, ಶಿವನಿಗೆ
ಸರ್ವಾರ್ಪಣ ಮಾಡಿ ಕೈಲಾಸಕ್ಕೆ ಹೋದನಂತೆ,ಈತನೊಬ್ಬ ತಮಿಳು
ಪುರಾತನ ಶರಣ. (ಅದೇ,ಕಥೆ೩೧೩, ಭಾಗ-೨, ಸಂ.೩,ಪು.೧೦೮)
ತೊಂಡ ಮಂಡಲದ ಕಾಂಚಿಪುರದ
ತಿರುಕುರುಪೆ ತೊಂಡನು ಕೇವಲ- ಶಿವಭಕ್ತರಂಬರಗಳ ತೊಳೆದು, ಒಣಗಿಸಿ,ಘಟಿಸಿ, ಗಳಿಗೆ ಮಾಡಿ ಭಕ್ತರಿಗೆ ಕೊಡಲವರು ಕೊಟ್ಟ ಧನದಿಂದ ಜಂಗಮಾರ್ಚನೆ
ಮಾಡುತ್ತಿದ್ದ ನಂತೆ(ಅದೇ,ಕಥೆ೩೧೭ ಭಾಗ-೨, ಸಂ.೩,ಪು.೧೧೩-೧೧೪).ಬ್ರಹ್ಮಾವರದ ಪರಮಹಂಸಯ್ಯ ``ಗೋವುಗಳನ್ನು ಸಾಕಿ ತುಪ್ಪವಂ ಮಾರಿ.... ಶಿವಭಕ್ತಿದಾಸೋಹವ ನಡೆಸುತ್ತಿರಲು ತೊಂಭತ್ತು ವರುಷ ಕಳೆದು ಮುಪ್ಪಾಗಲು'' ನಿಷ್ಠೆಯಿಂದ
ಶಿವನನ್ನು ಅಷ್ಟವಿಧಾರ್ಚನೆಗೈದು ಸಾಯುಜ್ಯ ಪಡೆದನಂತೆ, ಈತನದು ತುರುಗಾಹಿ ಕಾಯಕವೇ ಸರಿ. (ಅದೇ,ಕಥೆ೩೧೯ ಭಾಗ-೨, ಸಂ.೩,ಪು.೧೧೫-೧೧೬)
ಹಿಪ್ಪರಿಗೆ ಪುರದ ಮಡಿವಾಳ ಮಾಚಯ್ಯ ರಜಕ ಕಾಯಕದಿಂದ ಜಂಗಮ ದಾಸೋಹ ಮಾಡುತ್ತಿದ್ದ ಶರಣ
ನಾಗಿದ್ದಾನೆ. ಬಸವಾದಿ ಶರಣರ ಪೈಕಿವೀರ ಗಣಾಚಾರದ ಮಡಿವಾಳ ಕಾಯಕಯೋಗಿ ಶರಣನೀತ. (ಅದೇ,ಕಥೆ೩೩೬
ಭಾಗ-೨, ಸಂ.೩,ಪು.೧೩೬)
ಚೋಳದೇಶದ ನೇಸರು
ತಿರುಪನ್ನಂದಪುರದಲ್ಲಿಲ್ಲ ನೆಯ್ಗೆ ಕಾಯಕ ಮಾಡಿ ಶಿವನನ್ನು ಮೆಚ್ಚಿಸಿದ ಶಿವಶರಣನಾಗಿದ್ದಾನೆ. (ಅದೇ,ಕಥೆ೩೫೦ ಭಾಗ-೨,
ಸಂ.೪,ಪು.೧೫೮)
ಮುದನೂರು ದಾಸಯ್ಯ ಒಬ್ಬ ನೇಕಾರ.ಈತನ ಹೆಸರು ಚಾರಿತ್ರ್ಯಕ
ಸಂಗತಿಗಳೊಂದಿಗೆ ಮಿಳಿತವಾಗಿದೆ. (ಅದೇ,ಕಥೆ೩೫೧
ಭಾಗ-೨, ಸಂ.೪,ಪು.೧೫೯)
ಚೋಳ ದೇಶದ ತಿರನೆಲ್ಲೂರು ಪುರದ ಅಮರನೀತಿ ಜವಳಿ ಮಾರುವ ಕಾಯಕ ಕೈಗೊಂಡು ಅದನ್ನೇ ಲಿಂಗಪೂಜೆ
ಎಂದು ಭಾವಿಸಿದ್ದನಂತೆ. (ಅದೇ,ಕಥೆ೩೫೨ ಭಾಗ-೨, ಸಂ.೪,ಪು.೧೬೧-೧೬೩)
ಇಳೆಹಾಳ ಬೊಮ್ಮಯ್ಯ, ಕಮ್ಮತದ
ಕಾಯಕವನ್ನು ಮಾಡುತ್ತಿದ್ದನಂತೆ.
(ಅದೇ,ಕಥೆ೩೩೮ ಭಾಗ-೨, ಸಂ.೪,ಪು.೧೮೮-೧೮)
ಅನೈಗಾರು ಗೋಪಳ (ಗೊಲ್ಲ) ಕಾಯಕ ಮಾಡುತ್ತಿದ್ದನಂತೆ. ಕೊಳಲಿನಲ್ಲಿ ಪಂಚಾಕ್ಷರಿಯನ್ನು
ನುಡಿಸುತ್ತಿದ್ದು,
ಶಿವನನ್ನು ಒಲಿಸಿದನಂತೆ. (ಅದೇ,ಕಥೆ೩೭೩ ಭಾಗ-೨,
ಸಂ.೪,ಪು.೧೯೮-೧೯೯)
ಹೆಂಡ ಮಾರುವ ಕಾಯಕವಿತ್ತೆಂಬುದು ಹೆಂಡದ
ಮಾರಯ್ಯನೆಂಬ ಬಸವ ಸಮಕಾಲೀನ ಶರಣನ ವೃತ್ತಾಂತದಿಂದ ತಿಳಿದುಬರುತ್ತದೆ. ಮಾತ್ರವಲ್ಲ ಹೆಂಡವನ್ನು
ತಯ್ಯಾರು ಮಾಡುವ ಸಾಮಗ್ರಿಗಳು, ವಿಧಾನವನ್ನು ವಿವರಿಸಲಾಗಿದೆ. (ಅದೇ,ಕಥೆ೩೭೫ ಭಾಗ-೨, ಸಂ.೪,ಪು.೨೦೫-೨೦೬)
``ಸಿರಸಣಿಯೆಂಬ ಪುರದಲ್ಲಿ ಶಿವಯೋಗಿ ದೇವನೆಂಬ ಶರಣರು ಭಕ್ತರ ಪೊಕಳಿ ಕಾಯಕವ ತಂದು ಲಿಂಗ-ಜಂಗಮ ದಾಸೋಹ ಮಾಡತ್ತ '' ಇದ್ದನಂತೆ. (ಅದೇ,ಕಥೆ೩೮೩ ಭಾಗ-೨,
ಸಂ.೪,ಪು.೨೧೬)
``ಮೊಸಳೆಕಲ್ಲೆಂಬ ಪುರದಲ್ಲಿ ಅಜಗಣ್ಣನೆಂಬ
ಶರಣನು ಹಲಾಯುಧದ ಕಾಯಕದಿಂದ ಭಕ್ತಿದಾಸೋಹ
ಮಾಡುತ್ತ''
ಇದ್ದ ಕಥೆ ಇದರಲ್ಲಿದೆ. (ಅದೇ, ಭಾಗ-೨, ಸಂ.೪,ಪು.೨೨೫,೨೨೭)
ಈತನು ಬಸವಾದಿ ಶರಣ ಸಮಕಾಲೀನ
ಶರಣನಾಗಿದ್ದ. ಆದರೆ ಬಸವಣ್ಣ ಮೊದಲಾದವರಿಗಿಂತ
ಹಿರಿಯನಾಗಿದ್ದನೆಂಬುದು ಮತ್ತು ಮುಕ್ತಾಯಕ್ಕನ ಅಣ್ಣನಾಗಿದ್ದನೆಂಬ ವಿಚಾರ ಎಲ್ಲರಿಗೂ
ತಿಳಿದಿರುವ ಸಂಗತಿ.
ಕುಂತಳ ದೇಶದ ಮುಕಂದಪುರದ ಅಗ್ಗಣಿ ಹಂಪಯ್ಯ `ಆಚಾರಯುಕ್ತ ಶೀಲವಂತರಿಗೆ ಕಂಬಿಯಲ್ಲಿ ಚೆಲುಮೆಯಗ್ಘವಣಿಯ ಹೊತ್ತು
ತಂದು ಕೊಟ್ಟು ಕಾಯಕವ ತೆಗೆದುಕೊಂಡು ಪೋಗಿ ಜಂಗಮ ದಾಸೋಹವ ಮಾಡುತ್ತಿರಲು, ಶಿವನೊಲಿದು ಕೈಲಾಸಕ್ಕೆ ಕರೆದೊಯ್ದನಂತೆ. (ಅದೇ, ಭಾಗ-೨,
ಸಂ.೪,ಪು.೨೪೩,೨೪೫)
``ಹಡಪದ ರೈಚಂಕು ಯಂಗಿ ಭೂಪಾಲರಿಗೆ ಹಡಪವಂ
ಪಿಡಿದೋಲೈಸಿ ಕಾಯಕವಂ ತಂದು ಜಂಗಮಾರ್ಚನೆ
ಮಾಡುತ್ತಿರಲು''
ಪ್ರಸಂಗಾವಧಾನದಿಂದ ಯಂಗಿಭೂಪನಿಂದ ಶಿವದ್ರೋಹವಾಗಲು ಆತನ ಶಿರವನ್ನು
ಹರಿದು ಕಲ್ಯಾಣಕ್ಕೆ ಬಂದು ``ಬಸವಣ್ಣಂಗೆ ವಂದಿಸಿ ಹಡಪದ ಪಿಡಿದು ಊಳಿಗದ ಕಾಯಕವಿಡಿದು ಭಕ್ತಿ ದಾಸೋಹವಂ ಮಾಡುತಂ'' ಇದ್ದನಂತೆ (ಅದೇ, ಭಾಗ-೨, ಸಂ.೪,ಪು.೨೩೪,೨೩೫) ಹಡಪದ ಅಪ್ಪಣ್ಣ ಶರಣರಿಗೆ ಸಂಬಂಧಿಸಿದ ಕಥೆ ಪ್ರಸ್ತಾಪವಾಗಿದೆ. (ಅದೇ,ಕಥೆ ೩೫೦ ರ ಉಪಕಥೆ,
ಭಾಗ-೨, ಸಂ.೪,ಪು.೨೬೬-೬೭) ಇಲ್ಲಿ
ಹಡಪದ ಕಾಯಕ ವೆಂದರೆ ವೀಳ್ಯೆಯವನ್ನು ಕೊಡುವ ಊಳಿಗ ವೃತ್ತಿ. ಅದರಿಂದ ಬರುವ ಕೈ ಕೂಲಿ ಯಿಂದ
ಜಂಗಮ ದಾಸೋಹವನ್ನು ಮಾಡುವುದು ಎಂಬುದನ್ನು ಈ ಕಥೆಗಳಿಂದ ತಿಳಿದುಕೊಳ್ಳಬಹುದು.
ಕಿನ್ನರಯ್ಯನೆಂಬ ಶರಣ ʻʻಕಿನ್ನರ
ವೀಣೆಯ ರಚಿಸಿ ಲಿಂಗಕ್ಕೆ ಪಾಡಿ,ಕೇಳಿಸಿ
ಭಕ್ತರಿಂದ ಕಾಯಕವಂ ತಂದು ಜಂಗಮಕ್ಕೆ
ನೀಡುತ್ತಿರಲಿತ್ತಂ''(ಅದೇ,ಕಥೆ೪೦೪ರ ಉಪಕಥೆ ಭಾಗ-೨, ಸಂ.೪,ಪು.೨೩೪-೩೫) ಕಲ್ಯಾಣದ ಬಸವಣ್ಣನವರ ಕೀರ್ತಿಕೇಳಿ ದರುಶನಾಪೇಕ್ಷೆಯಿಂದ
ಕಲ್ಯಾಣಕ್ಕೆ ಬಂದನಂತೆ. ಈತನು ಕಲ್ಯಾಣದ ಬಸವಾದಿ ಶರಣರ ಪೈಕಿ ಪ್ರಸಿದ್ಧನಾದ ಶರಣನಾಗಿದ್ದಾನೆ.
ಇದೊಂದು ವಾದ್ಯ ನಿಪುಣನ ವಿಶೇಷ ಕಾಯಕ.
ಮುತ್ತುರತ್ನ ಪರೀಕ್ಷಿಸಿ ಬೆಲೆಗಟ್ಟುವಕಾಯಕವನ್ನು ಚಂದ್ರಯ್ಯನೂ(ಪು.356) ಚಂದನವಂ ಮಾರಿ ಜಂಗಮದಾಸೋಹ ಮಾಡುತ್ತಿದ್ದನಂತೆ.(ಪು.357) ಘಟ್ಟಿವಾಳಯ್ಯನಟ್ಟುವ ಕಾಯಕದಿಂದ ಮದ್ದಳೆಯನ್ನು
ನುಡಿಸುತ್ತ ಭಕ್ತಿ ಮಾಡುತ್ತಿದ್ದನಂತೆ (ಪು.365) ಇಂಡೆ ದಂಡೆಯ ರೇಕವ್ವೆ(ಪು.370), ಭಕ್ತರ
ಕೀರ್ತಿಸುವ ಕಾಯಕದ ಬಲದೇವ(ಪು.375), ಸೊಡ್ಡಳ
ಬಾಚರಸರ ಕರಣಿಕತ್ವ ಕಾಯಕ (376), ಗುಡುಚಿ
ಕಾಳವ್ವೆಯೆಂಬವಳ ಮಜ್ಜಿಗೆ ಕಾಯಕ(ಪು.377), ಇಂಡೆದಂಡೆ
ಕಟ್ವು ಕಾಯಕದ ಬೊಮ್ಮಯ್ಯ(ಪು.384).
ಹೀಗೆ ಬೇರೆ ಬೇರೆ ಕಾಯಕಗಳನ್ನು
ಮಾಡುವ ಶರಣರ ಕಥೆಗಳು ಈ ಕೃತಿಯಲ್ಲಿ ಸಾಲು ಸಾಲಾಗಿ ಬಂದಿವೆ. 63ಜನ ತಮಿಳು ಪುರಾತನರಾಗಲಿ, ನೂತನ ಬಸವಾದಿ ಕಲ್ಯಾಣದ ಶರಣರಾಗಲಿ, ಇಲ್ಲವೇ ಆನಂತರದ
ಕೆಲ ವೀರಶೈವ ಶರಣರು ಒಂದಿಲ್ಲೊಂದು ಕಾಯಕದೊಂದಿಗೆ
ಭಕ್ತಿಯಿಂದ ಜಂಗಮ ದಾಸೋಹದಾಚರಣೆಯನ್ನು ಒಂದು ವ್ರತದಂತೆ ಮಾಡಿದ್ದಾರೆ. `ಕಾಯಕವೇ ಕೈಲಾಸ'ವೆಂಬ
ಬಸವಣ್ಣನ ಮಾತಿಗೆ ಮುನ್ನವೇ ಕೃತಿರೂಪದ
ಸಂದೇಶವನ್ನು ನೀಡಿದ್ದಾರೆಂಬುದನ್ನು
ಗಮನಿಸಬೇಕಾಗಿದೆ. ಶಿವ ಸಾಕ್ಷಿಯಾಗಿ ದಾಸೋಹ ನಿಮಿತ್ಯವೇ ಕಾಯಕವನ್ನು ಮಾಡುವ ಶಿವಶರಣರ ಶರಣಭಕ್ತಿಯನ್ನು
ಕಾಣಬಹುದಾಗಿದೆ. ದೇವ ಸಾಕ್ಷಿಯಾಗಿ ದುಡಿಯುವ ಧರ್ಮಕ್ಕಾಗಿ ದೇಹ-ಪ್ರಾಣ
ಮುಡಿಪಾಗಿಡುವ ಕಾಯಕ ನಿಷ್ಠೆ ಸಂಸ್ಕೃತಿಯನ್ನು ಅನೇಕ ಕಥೆಗಳು ಬಿಂಬಿಸಿವೆ.
ಮಾನವನ ಮೂಲಭೂತ ಅವಶ್ಯಕತೆಗಳಾದ ಅನ್ನ, ನೀರು, ಬಟ್ಟೆ, ಆಶ್ರಯಗಳು
ನಮ್ಮ ಬದುಕಿನ ಸ್ಥಿತಿಗತಿಯ ಬಿಂಬಗಳೂ ಹೌದು. ಇವುಗಳ ಬಯಕೆ ಭೌತಿಕವಾದುದಾದರೂ, ಅಂತರಂಗದ ವಿಕಾಸಕ್ಕೆ ಇವು ಅನುವು ಮಾಡಿಕೊಡುತ್ತದೆ.
ಬಹಿರಂಗದ ಶ್ರೀಮಂತಿಕೆ -ಅಂತರಂಗದ ಬಡತನ ನಿವಾರಣೆಗೂ ಕಾರಣವಾಗುತ್ತದೆ. ಬಹಿರಂಗದ ಬಡತನ ಅಂತರಂಗದ
ಜ್ಞಾನ-ಪ್ರತಿಭಾ ಕುಸುಮದ ಕುಡಿಯ-ಕಮರುವಿಕೆಗೆ ಕಾರಣವಾಗುತ್ತದೆ. ಈ ಮೂಲಭೂತ ಅವಶ್ಯಕತೆಗಳಿಗೂ
ಸಂಸ್ಕೃತಿಗೂ ನಂಟಿದೆ ಎಂಬುದನ್ನು ಅಲ್ಲಗಳೆಯಲಾಗದು. ಇಂಥಹ ಮಹತ್ತರವಾದ ಸಂಗತಿಗಳ ಪೈಕಿ ಅನ್ನ-ಅಡುಗೆಗಳ
ವೈವಿಧ್ಯತೆಯ ಬಗ್ಗೆ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರದಲ್ಲಿಯ
ಉಲ್ಲೇಖಗಳ ಅವಲೋಕನ ಮಾಡಲಾಗಿದೆ. ಈಗ ಆಶ್ರಯದ ಕುರಿತಾಗಿರುವ ಉಲ್ಲೇಖಗಳತ್ತ ಒಂದು ಪಕ್ಷಿನೋಟ
ಬೀರುವ ಪ್ರಯತ್ನ ಮಾಡಲಾಗಿದೆ.
ಗೃಹ,
ದೇವಗೇಹ, ಜೂಜಿನಕಟ್ಟೆ. ಸುತನೋದುವಮಠ, ಮರವಡ, ಚಪ್ಪರ, ಉಪ್ಪರಿಗೆ ಲಿಂಗಮುದ್ರೆಯಭೂಮಿ, ಯಾಗಶಾಲೆ, ರತ್ನಾಖಚಿತ ಅರಮನೆ ಶೃಂಗಾರ ತೋಟ ಚಿತ್ರಮಂಟಪ ವಾಲಗ (ಓಲಗ) ಏಳು
ನೆಲೆಯುಪ್ಪರಿಗೆ,
ಪರ್ಣಶಾಲೆ, ಸೂರು, ಹೇಗೆ
ಮನುಷ್ಯ ಅವಾಸಕ್ಕಾಗಿ ವಿದ್ಯಾಭ್ಯಾಸಕ್ಕಾಗಿ, ವಿರಾಮಕ್ಕಾಗಿ
ಸಭೆ ಸೇರುವುದಕ್ಕಾಗಿ, ಪ್ರಣಯ-ವಿಹಾರಕ್ಕಾಗಿ, ಜೂಜಾಟಕ್ಕಾಗಿ ಮೀಸಲಾಗಿಟ್ಟುಕೊಂಡಿದ್ದ ಹಲವು ಜಾಗಗಳು ಈ
ಕೃತಿಯಲ್ಲಿ ಉಲ್ಲೇಖವಾಗಿವೆ.
ಗೃಹ-ಮನೆ , ದೇವಗೇಹ-ದೇವರಮನೆ, ರಾಜರಮನೆ, ದಾನಮಾಡಿದ ಲಿಂಗಮುದ್ರೆಯ ಭೂಮಿ ಪರ್ಣಶಾಲೆ, ಸೂರು ಚಾಪುರ ಇವು ಅತ್ಯಂತ ಸಾಮಾನ್ಯ ಸಂಗತಿಗಳು ಬಹುಶಃ
ಮನುಷ್ಯ ಒಂದೆಡೆನೆಲೆ ನಿಂತು ಕೌಟುಂಬಿಕ ಜೀವನಾರಂಭ ಮಾಡಿದಾಗಿನಿಂದಲೂ ಈ ವ್ಯವಸ್ಥೆಗಳು
ರೂಪಗೊಂಡುವೆಂದು ಹೇಳಬಹುದು.ಸುತನೋದುವ ಮಠ, ಮರವಡ, ಏಳುನೆಲೆಯುಪ್ಪರಿಗೆ, ಶೃಂಗಾರತೋಟ, ಚಿತ್ರಮಂಟಪ
ಎಂಬ ಆಶ್ರಯ ಸ್ಥಾನಗಳು ಕೊಂಚ ವಿಶೇಷವೆನಿಸುತ್ತವೆ.
ಸಿರಿಯಾಳನ ಕಥೆಯಲ್ಲಿ “ಸುತನೋದುವಮಠ”ದ ಪ್ರಸ್ತಾಪವಿದೆ(ಅದೇ,ಕಥೆ೧೦೧ಭಾಗ-೨, ಸಂ.೧,ಪು.೧೨) ಅಂದರೆ ಹಿಂದೆ ಮಠಗಳು ವಿದ್ಯಾಭ್ಯಾಸ
ಕೇಂದ್ರಗಳಾಗಿದ್ದವು ಎಂಬುದಕ್ಕಿದು ಪುರಾವೆಯಾಗಿದೆ. ಬಸವಣ್ಣನ ವಿದ್ಯಾಭ್ಯಾಸವು ಕಪ್ಪಡಿಯ
ಸಂಗಮನಾಥನಾಲಯದ ಸಾರಂಗ ಮಠದಲ್ಲಿ ಅಯಿತೆಂದು ಕೇಳಿದ್ದೇವೆ.
ಸಾಲಿಮಠ ಎಂಬ ಹೆಸರಿನ ಹಲವಾರು ಜಂಗಮ ಮನೆತನಗಳು ಇಂದು ಅಸ್ತಿತ್ವದಲ್ಲಿವೆ ಎಂಬುದನ್ನು ನಾವು
ನೆನಪಿಸಿಕೊಳ್ಳಬೇಕು.
‘ಮರವಡ’ ಇದು ಪಾಯಖಾನೆ ಅಥವಾ ಶೌಚಾಲಯಕ್ಕೆ ಸಮವಾದ ಪದ.
ಈ ಪದ ಇಂದು ಸತ್ತು ಹೋಗಿದೆ ಶೌಚಾಲಯ ಎಂಬ ಸಂಸ್ಕೃತ ಪದಕ್ಕೆ ಸಂವಾದಿಯಾದ ಕನ್ನಡ ಪದ ಮರವಡು
ಎಂಬುದನ್ನು ಈ ಕೃತಿಯು ದಾಖಲಿಸಿದೆ.
ಶಿವನಿಲ್ಲವೆಂಬವನ ಬಾಯಿ ಮರವಡವಾಗಿ ಮಲಮೂತ್ರಗಳ ಬಿಡುವ ಠಾವು ನಮಗೆ ಎನ್ನುತ್ತಾನೆ ಕೀಟಲೆ
ಮಾಡುವ ಜೈನರಿಗೆ ದಾಸಯ್ಯನೆಂಬ ಶರಣ.
(ಅದೇ,ಕಥೆ೨೫೬ ಭಾಗ-೨, ಸಂ.೩,ಪು.೨೫) ಮರವಡವೆಂದರೆ ಕಕ್ಕಸುಕೋಣೆ ಎಂದರ್ಥ ಶೌಚಾಲಯ , ಪಾಯಖಾನೆ ಇವು ಸದ್ಯದ ದಿನ ನಿತ್ಯದ ಬಳಕೆ ಪದಗಳು
ಈಗಿರುವಂತೆ ಹಿಂದಿನ ಕಾಲದಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದರೆಂಬುದಕ್ಕೆ ಈ
ಉಲ್ಲೇಖವೇ ಪುರಾವೆಯಾಗಿದೆ.
ಕಂದಾರ ಪಟ್ಟಣದಲ್ಲಿ ಒಬ್ಬಗಾಣಿಗಿತ್ತಿಯು ಏಳುನೆಲೆಯುಪ್ಪರಿಗೆ ಮೇಲೆ ನಿಂತು ಕೆಳಗಿರುವವರ ಗಿಣ್ಣಿಲುಗಳಿಗೆ
ಎಣ್ಣೆಯನ್ನು ಎರೆಯುತ್ತಿದ್ದಳಂತೆ ಅವಳ ಕೋರಿಕೆಗೆ ಮನ್ನಿಸಿ ಕಂಧರಪುರಕ್ಕೆ ಭೋಜರಾಜನು
ಧಾರಾಪುರವೆಂದು ಹೆಸರಿಟ್ಟನಂತೆ (ಅದೇ,
ಭಾಗ-೧, ಸಂ.೧,ಪು.೮೯) ಅಂದರೆ ಏಳು
ಅಂತಸ್ತಿನ ಮನೆಗಳನ್ನು ಸ್ಥಿತಿವಂತರು ಕಟ್ಟಿಕೊಳ್ಳುತ್ತಿದ್ದರೆಂದು ಊಹಿಸಬಹುದಾಗಿದೆ.
ಪಾರ್ವತಿ ಪರಮೇಶ್ವರರು ಶೃಂಗಾರತೋಟದ ಚಿತ್ರಮಂಟಪದಲ್ಲಿರ್ದು ದೇವಿಯರು ಅಲ್ಲಿ ಬರೆದಿರ್ದ ಚಿತ್ರದ ಆನೆಗಳ ರತಿಕೂಟವಂ ಕಂಡು ಶಿವಗೆ
ತೋರಿ ನಗುವಾಗ (ಅದೇ,ಕಥೆ ಭಾಗ-೧, ಸಂ.೧,ಪು.೪೦-೪೧) ಎಂಬ ಉಲ್ಲೇಖವಿದೆ. ಇದು ಪುರಾಣದ ಕಥೆಯಾದರೂ ವಾಸ್ತವದ
ಕಲ್ಪನೆಗಳಿಂದ ಪರಿಪೂರ್ತವಾಗಿರುತ್ತದೆ. ಶೃಂಗಾರ ತೋಟ ಎನ್ನುವ ಜಾಗೆ ರತಿಕ್ರೀಡೆಯ ಆಶ್ರಯ
ಸ್ಥಾನವಾಗಿತ್ತೆಂದೂ ಮತ್ತು ಅಲ್ಲಿ ಬಗೆ ಬಗೆಯ ಪ್ರಾಣಿ, ಪಕ್ಷಿ ಮಾನವ ರತಿಕೂಟದ ಚಿತ್ರಗಳಿರುತ್ತಿದ್ದಿರಬಹುದೆಂದು ಊಹಿಸಲು
ಸಾಧ್ಯವಿದೆ. ಪ್ರಾಚೀನ ಕಾಲದ ದೇವಾಲಯಗಳು, ಹಳೆಗಾಲದ
ತೇರುಗಳ ಮೇಲೆ ಲೈಂಗಿಕ ಕ್ರಿಯೆಯ ಚಿತ್ರಗಳಿರುವುದನ್ನು ನೋಡಬಹುದಾಗಿದೆ.. ಆಹಾರ , ನಿದ್ರೆ, ಮಿಥುನ
ಇವು ಪ್ರಾಣಿಗಳಿಗೆ ಸಹಜವೂ ಮಾನವ ಪ್ರಾಣಿಗೆ ವಿಶಿಷ್ಟ ಭೋಗದ ಸಂಗತಿಗಳಾಗಿರುವುದನ್ನು
ಅಲ್ಲಗಳೆಯಬಹುದೇ ?
ಸಾಧ್ಯವಿಲ್ಲ. ಹಿಂದೆ ನಮ್ಮ ಜನರು ಇವುಗಳಲ್ಲಿ ಅದೆಷ್ಟು
ತೀವ್ರ ಆಸಕ್ತ ರಸಿಕರಾಗಿದ್ದರೆಂಬುದನ್ನು ಇದು ಸೂಚಿಸುತ್ತದೆ.
ಇನ್ನೊಂದು ವಿಶೇಷವಾದ ಸ್ಥಾನ-ಆಶ್ರಯವೆಂದರೆ ಜೂಜಿನಕಟ್ಟೆ, ಕುಂಬಕೋಣೆಯಪುರದ (ಈಗಿನ ಕುಂಭಕೋಣಂ) ಮುರ್ಖನೈನಾರರೆಂಬ ಶರಣನಿದ್ದು, ಆತ ಜೂಜಿನಿಂದ ಗೆದ್ದು ತಂದ ದ್ರವ್ಯದಿಂದ ಜಂಗಮಕ್ಕೆ
ಸತ್ಕಾರಮಾಡಿ ನೀಡುತ್ತಿದ್ದನಂತೆ ಆಗ ಶಿವನು.
“ನೋಡಬೇಕೆಂದೀಶ
ಜೋಡಿಸಿದನು ಮಹಾ
ದಾಡಂಬರದ ವಣಿಜತೆಯ (287)
ತೊಟ್ಟಭರಣ ಪೊದ್ದ
ಪಟ್ಟವಳಿಯ ಪೊನ್ನ
ಪೆಟ್ಟಿಗೆಗಳ ಪೊತ್ತು ಬರ್ಪ
ರೊಟ್ಟೋಚೆ ಸಹಿತ ಬಂ
ದಿಟ್ಟಿಸಿ ಜೂಜಿನ
ಕಟ್ಟೆಯ ಸಾರುತೆನೊಡನೆ (288)
ವಾಣಿಜ್ಯ ರೂಪಧರಿಸಿ, ಮುತ್ತುರತ್ನಾಭರಣವ
ತೊಟ್ಟು ದುಕೂಲವನ್ನುಟ್ಟ, ಪೆಟ್ಟಿಗೆಯೊಳು ಹೊನ್ನ
ಹೊರಿಸಿಕೊಂಡು ಬಂದು ಜೂಜಿನ ಕಟ್ಟೆಯೋಳ್ನಿಂದು” (ಅದೇ,ಕಥೆ೯೭ ಭಾಗ-೧, ಸಂ.೧,ಪು.೨೦೬)
ಹಲವರನ್ನು ಜೂಜಿಗೆ ಆಹ್ವಾನಿಸಿ, ಸೋಲಿಸುತ್ತಾನೆ
ಕೊನೆಗೆ ಮೂರ್ಖನೈನಾರ ಚರಿಯನನ್ನು ಆಹ್ವಾನಿಸಿ, ತಾನೇ
ಅವನಿಗೆ ಎಲ್ಲವನ್ನು ಸೋತು-ಅವನ ಜಂಗಮ ಭಕ್ತ-ದಾಸೋಹಕ್ಕೆ ಮೆಟ್ಟಿ ಬೇಡಿದ್ದನ್ನು
ಕೊಡುತ್ತಾನೆ. ಈ ಕಥಾ ಪ್ರಸಂಗ ನೋಡಿದಾಗ, ದೊಡ್ಡ
ದೊಡ್ಡ ಊರು,
ರಾಜಧಾನಿ
ಪಟ್ಟಣಗಳಲ್ಲಿ ಜೂಜಿಗೇ ಮೀಸಲಾಗಿರುವು ಜಾಗವೊಂದು ಇರುತ್ತಿತ್ತೆಂದು ಕಾಣುತ್ತದೆ. ಬೇರೆ
ಊರಿನವರು ಬಂದು ಜೂಜಿಗೆ ಆಹ್ವಾನ ನೀಡಬಹುದಾಗಿತ್ತೆಂದೂ ಭಾವಿಸಬಹುದಾಗಿದೆ.
ಹೀಗೆ ಭೈರವೇಶ್ವರ ಕಥಾಮಣಿ ಸೂತ್ರರತ್ನಾಕರ ಕೃತಿಯು ಮಾನವ ಸಾಮಾನ್ಯ ಆಶ್ರಯ ಸ್ಥಾನಗಳ ಬಗೆಗೆ ಬೆಳಕು ಚೆಲ್ಲಿದೆ. ವಿಶಿಷ್ಟವಾದ ಸಂಗತಿಗಳನ್ನು ಹೊರಹಾಕುತ್ತದೆ.
ದೇಶಿ ಸಂಸ್ಕೃತಿಯಲ್ಲಿನ ಇಂಥ ವಿಶಿಷ್ಟ ಆಶ್ರಯ ಸ್ಥಾನಗಳ ಕುರಿತಾದ ಉಲ್ಲೇಖಗಳನ್ನು ನಾವು
ಗಮನಿಸಬೇಕು.
ಕೊಡು-ಕೊಳುಗೆ ವ್ಯವಹಾರದಲ್ಲಿನ ಕೆಲವು ವಿಶಿಷ್ಟ ಅಂಶಗಳೂ ಈ ಕೃತಿಯ ಕೆಲವು ಕಥೆಗಳಲ್ಲಿ
ಅನಾವರಣಗೊಂಡಿವೆ. ಒಂದು ಕೆಲಸಕ್ಕೆ ಕೆಲಸ ಮಾಡಿಸಿಕೊಂಡವನು-ಕೆಲಸಗಾರನಿಗೆ ಏನಾದರೂ ಪ್ರತಿಫಲವನ್ನು
ಕೊಡಬೇಕು ಹಣ,
ಕಾಳುಕಡಿ, ವಸ್ತು ಇತ್ಯಾದಿ ಇದು ಲೋಕಾರೂಢಿ, ನಿಯಮ ಆದರೆ ಇದಕ್ಕೆ ವಿರುದ್ಧವಾದ ವಿಚಿತ್ರ ಸಂಗತಿಯೊಂದು ನಾಲ್ಕೈದು ಕಥೆಗಳಲ್ಲಿ ವ್ಯಕ್ತವಾಗಿದೆ. ಅದೆಂದರೆ “ಬಿಟ್ಟಿಗೆಲಸ” “ಬಿಟ್ಟಿ ಕೊಟ್ಟಣ” “ಬಿಟ್ಟಿ
ಉತ್ತರಿಸುವುದು” ಈ ಮುಂತಾದ ಉಲ್ಲೇಖಗಳಿವೆ. ಸಾಮೂಹಿಕ ಕಾರ್ಯಗಳಲ್ಲಿ, ಸಾರ್ವಜನಿಕವೋ, ಧಾರ್ಮಿಕವೋ ಆದ ಕಾರ್ಯಗಳಲ್ಲಿ
ಬಿಟ್ಟಿಯಾಗಿ (ಪುಕ್ಕಟೆ-ಪುಗಸಟ್ಟೆ) ಆಗಿ ಮನೆಗೊಂದಾಳು ಕಡ್ಡಾಯವಾಗಿ ಆ ಕೆಲಸದಲ್ಲಿ ದುಡಿಯಲ್ಲೇ ಬೇಕಾಗಿತ್ತೆಂಬುದು ಕಥಾ ಸಂದರ್ಭದಿಂದ ಗೊತ್ತಾಗುತ್ತದೆ. ಬಿಟ್ಟಿ ಉತ್ತರಿಸುವುದು-
ಒಬ್ಬನು ತನ್ನ ಪರವಾಗಿ ಇನ್ನೊಬ್ಬನನ್ನು
ಕೆಲಸಕ್ಕೆ ಕಳಿಸಿಕೊಡುವ ವ್ಯವಸ್ಥೆಯೇ ಬಿಟ್ಟಿ ಉತ್ತರಿಸುವುದು.
“ತಿರುವಾಲೂರಲ್ಲಿ ಕರಿಕಾಲಚೋಳನು ಕಾವೇರಿಯ ಕಟ್ಟೆಯ ಕಟ್ಟುವಾಗ, ಪುರಜನರ ಬಿಟ್ಟಿಯ
ಹಿಡಿದಲ್ಲಿ ಮುದಗೊಂಡೆಯ ಪಿಟ್ಟಿವ್ವೆ ಎಂಬ ವೃದ್ಧ ಭಕ್ತೆಯಂ ಬಿಟ್ಟಿಗೆ ಹಿಡಿತರುವಾಗ “ಶಿವಧೋ”
ಎನಲು ಶಿವನಾಕೆಯ ಮೊರೆಯಂ ಕೇಳ್ದು ಬಂದು ಮನೆಯೂಟದವನಾಗಿ ಚೋಳನ ಬಿಟ್ಟಿಗೆ ಮಣ್ಣ ಹೋವಲ್ಲಿ
ಯಂಗೆವನಾಡಲು ಬಲ್ಲಾಳ್ಗಳು ಪೊಯ್ಯಲು, ಅವರಂ ತಾನು ಕೆಟ್ಟು ಬೈಯ್ಯಲು ಮತ್ತವರು ಪೊಯ್ದೊಡಾ
ಪೆಟ್ಟೆ ಅನಂತಕೋಟಿ ಮನುಷ್ಯರ ತಾಗಿ ಮೊರೆಯಿಡಲು” ಎಂಬ ಕಥಾ ಸಂದರ್ಭ ಪುನರಾವರ್ತಿತವಾಗಿದೆ. ಇದೇ
ಕಥೆ ಸಂಪುಟ ಒಂದರ ಸಂಧಿ -ಒಂದರ 78ನೇ ಕಥೆಯಾಗಿ ಪುನರಾವರ್ತಿತವಾಗಿದೆ ಈ ಕಥಾ ಪ್ರಸಂಗವನ್ನು
ಗಮನಿಸಿದಾಗ ಕೆರೆ-ಕಟ್ಟೆ ಕೆಲಸಗಳಿಗಾಗಿ ತಮ್ಮ ತಮ್ಮ ಆಡಳಿತ ವ್ಯಾಪ್ತಿಯ ಊರುಗಳಿಂದ ಬಿಟ್ಟಿಕೆಲಸದಕ್ಕಾಗಿ ಆಳುಗಳನ್ನು ಕರೆತರುವುದು.
ಬಾರದಿದ್ದಲ್ಲಿ ಒತ್ತಾಯಪೂರ್ವಕ ಹಿಡಿದು ತರುವಂಥ ಪದ್ಧತಿ ಇತ್ತೆಂದು ತೋರುತ್ತದೆ. ಬಿಟ್ಟಿ ಹಿಡಿದು
ತರುವಾಗ -ಅವರಿವರನ್ನೆದ ಮುದಗೊಂಡೆ ಎಂಬ ಊರಿನ ಮುದುಕಿಪಿಟ್ಟವ್ವೆ ಯನ್ನು ಹಿಡಿರು
ತರುತ್ತಾರೆಂಬುದು ಕಥೆಯ ಉಲ್ಲೇಖ ರಾಜನ ನೇತೃತ್ವದ ಸಾರ್ವಜನಿಕ ಕೆಲಸ ಅತ್ಯಂತ ನಿರ್ದಾಕ್ಷಣ್ಯ
ರೀತಿಯಲ್ಲಿ ಬಿಟ್ಟಿಯೂಳಿಗದ ಮೂಲಕ
ನಡೆಯುತ್ತಿತ್ತೆಂದು ಭಾವಿಸಬಹುದಾಗಿದೆ.
“ಪರಮಗಾವದಿ ರೂಪ
ಧರಿಸಿ ಪಿಟ್ಟವ್ವೆಯಿ
ದಿರನಿಂದು ಚಿಂತೆ ಬೇಡಿದಕೆ
ಅರಸನ ಬಿಟ್ಟಿಯು
ತ್ತರಿಸುವೆ ನೀನೆನ್ನ
ಪೊರೆ ಪೊಟ್ಟೆಗಸನವನಿಕ್ಕು”
(ಪದ್ಯ 96-1 ಪು.ಸಂ.141 ಕಥೆ)
ಪಿಟ್ಟಿವ್ವೆಯ ಬದಲಾಗಿ ತಾನು ಕೆಲಸಕ್ಕೆ ಹೋಗುವುದಾಗಿ
ಗಾವದಿರೂಪದ ಶಿವ ತಿಳಿಸುತ್ತಾನೆ ಅಂದರೆ ಒಬ್ಬರ ಪರವಾಗಿ ಮತ್ತೊಬ್ಬರು ಒಬ್ಬರ ಈಡಿಗೆ ಇನ್ನೊಬ್ಬರು
ಕೆಲಸ ಮಾಡುವಂಥ ರೀತಿಯನ್ನು
ಬಿಟ್ಟಿಯುತ್ತರಿಸುವುದು ಎನ್ನುತ್ತಿದ್ದರು.
ಕಲಿಗಣಪುಂಗವ ಕಾಂಚಿಪುರದ ಶರಣ ವೀರಶೈವ ನಿಷ್ಠನಾಗಿದ್ದು ಬೇರೆ ಸುತ್ತಮುತ್ತಣ ರಾಜರಿಂದ ಕಪ್ಪತರಿಸಿ- ಎಲ್ಲರೂ
ಶಿವಭಕ್ತರನ್ನಾಗಿ ಒತ್ತಾಯದಿಂದ ಪರಿವರ್ತಿಸುತ್ತಿರುತ್ತಾನೆ. ಆತನ ಈ ಶಿವನಭಕ್ತಿವೃತ್ತದುದ್ರೆಕ
ಪರೀಕ್ಷೆಗೆ ಶಿವ ಬರಬೇಕಾಗುತ್ತದೆ. ಸಾಕ್ಷತ್ ಶಿವನಿಗೇ ದೀಕ್ಷೆ ನೀಡದೇ ಬಿಡುವುದಿಲ್ಲ ಈ
ಕಲಿಗಣಪುಂಗವ |
ಶಿವದೀಕ್ಷೆ ಶಿವಸಂಸ್ಕಾರ ಹೊಂದಿದವರಿಗೆ , ತೆರಿಗೆ ಸುಂಕಗಳ ಕಾಣಿಕೆಗಳ ರಿಯಾಯ್ತಿ
ನೀಡುತ್ತಿದ್ದನೆಂಬುದು ಕಥಾ ಸಂದರ್ಭದಲ್ಲಿ ಅರ್ಥವಾಗುತ್ತದೆ(ಅದೇ,ಕಥೆ ೯೬ ಭಾಗ-೧,
ಸಂ.೧,ಪು.೨೦೨-೨೦೫)
ಇದನ್ನು ವಿರೋಧಿಸುವ ನಟನೆಯನ್ನು ಶಿವ ಮಾಡುತ್ತಾನೆ ಕೆಲಸಲ ಇಂತಹದ ಪರಿಣಾಮ
ವೇನೆಂಬುದನ್ನು ಶಿವನ ಮಾತುಗಳಲ್ಲೇ ಕೇಳಬಹುದಾಗಿದೆ.
“ತೆರೆ -ಹೊರೆ, ಸುಂಕ ಸೊದಿಗೆ, ಕಾಣಿಕೆ-ಕಡ್ಡಾಯ ಬಿಟ್ಟಿ-ಬಿರಾಡ, ಬಾಳ ಮಳೆಯಾದೀತೆ? ಬೆಳೆ ಬೆಳೆದೀತೆ? ಈಯ
ನ್ಯಾಯದಿಂದನೆ” ಎಂದು ಮೊರೆಯಿಡ್ಡುತ್ತಂ ಉಟ್ಟ ಸೀರೆ ಉಂಬ ಬಟ್ಟಲು, ದನಕರು , ಮನೆ-ಮಕ್ಕಳನೆಲ್ಲ
ಮಾರಿ ತೆರಿಗೆಯನು ಕೊಟ್ಟನು. ಮತ್ತೆ ಕಟ್ಟಿ-ಕುಟ್ಟಿ-ಕೊಲ್ಲುತ್ತ ಹರ;.... ಹುಲ್ಲು ಗೊಬ್ಬರದಾಣೆ ಹುಸಿಯಲ್ಲವೂ (ಅದೇ, ಭಾಗ-೧,
ಸಂ.೧,ಪು.೨೦೩)
ಇಂಥ ಕೊಡು -ಕೊಳುಗೆಯಿಂದ ಜನ ಸಂತ್ರಸ್ತರಾಗುತಿದ್ದರೆಂಬುದನ್ನು ಕಥೆಯಲ್ಲಿನ ಅಂಶವೇ
ಹೇಳುತ್ತದೆ. ಆದರೆ ಕಲಿಗಣ ಪುಂಗವನ ಈ ಕಟ್ಟು ನಿಟ್ಟು ಆತನ ಸ್ವಾರ್ಥಕ್ಕಾಗಿ ಅಲ್ಲ ‘ ಅದು ಶಿವ
ಸಮಯೋದ್ಧರಣಕ್ಕಾಗಿ, ಅಷ್ಟೇ ಅಲ್ಲ
ಶಿವಭಕ್ತರಾಗಿ ಮತಾಂತರ ಹೊಂದಿರೆ ಅವರಿಗೆ ಎಲ್ಲಾ ಬಗೆಯ ರಿಯಾಯ್ತಿಗಳೂ ಆತನಿಂದ
ಲಭ್ಯವಾಗುತ್ತಿದ್ದವು ಎಂಬುದನ್ನು ಗಮನಿಸಬೇಕು. ಇಂಥ ಸ್ವಧರ್ಮ ಪಕ್ಷಪಾತ ವೀರಶೈವರಿಗೆ ಮಾತ್ರವಲ್ಲ
ಉಳಿದ ಮತಧರ್ಮದವರಲ್ಲಿ ಸಹಜವಾಗಿದ್ದಿರಬಹುದಲ್ಲವೇ? ಇದೊಂದು ಊಹೆ ಅಷ್ಟೇ.
ಶರಣರು ಮಾಡುವ ಕೆಲಸಗಳಿಗೆ ಪ್ರತಿಫಲ ನೀಡುವುದಕ್ಕೆ ಕಾಯಕವ ಕೊಡುವುದು ಎನ್ನುತ್ತಿದ್ರು.
ಅದಕ್ಕೆ ಕೂಲಿ,
ಕೈಕೂಲಿ, ಸಂಬಳ ಎಂಬ ಪದಗಳ ಬಳಕೆ ಮಾಡದಿರುವೇ ಇಲ್ಲಿನ ವಿಶೇಷತೆ.
ನಗೆಮಾರಯ್ಯ ನೆಂಬ ಶರಣ
“ಭಕ್ತನ ನಗಿಸಿ ಕಾಯಕವಂ ತಂದು ಜಂಗಮಾರ್ಚನೆಯಂ ಮಾಡುತ್ತಾರೆ...... ಕಾಯಕವ ಕೊಂಡು ಬಂದು ...
ಕಾಯಕವಕೊಡಲಾದ.....
ಹೀಗೆ ಮುಂತಾಗಿ ಉಲ್ಲೇಖವಿದೆ. ಮಾಡುವುದು ಕಾಯಕವೆಂದಾದ ಮೇಲೆ ಅದು ಕೈಕುಲಕಿ ಪಡೆಯುವ
ವೃತ್ತಿಯಲ್ಲ ಸಂಬಳಕ್ಕೆ ದುಡಿವ ಆಳಿನ ಕೆಲಸವಲ್ಲ ಅದಕ್ಕೆ
ದೊರೆವ ಪ್ರತಿಫಲ. ಕೈಕೂಲಿಯೂ ಅಲ್ಲವೆಂಬ ನಿಷ್ಠೆ ಹಿಂದಿನ ಶರಣರಲ್ಲಿ
ಬಲವಾಗಿದ್ದಿತ್ತು ಎಂದು ಭಾವಿಸಬಹುದಾಗಿದೆ.
ಕೋರನಿಕ್ಕುವ ವ್ಯವಸಾಯ
ವ್ಯವಹಾರ ಆಗಲೂ ಇತ್ತೆಂಬುದಕ್ಕೆ ಇಳಿಹಾಳ ಬೊಮ್ಮಯ್ಯನ ಕಥೆ ಸಾಕ್ಷಿಯಾಗುತ್ತದೆ.
“ಭೂಲೋಕದೊಳೊಪ್ಪುವ ಇಳಿಹಾಳೆಂಬ ಪುರದಲ್ಲಿ ಬೊಮ್ಮಯ್ಯನೆಂಬ ಸದ್ಭಕ್ತನು ಮುನ್ನೂಪ್ಪತ್ತು
ಮಾರಲಿ ಹೊಲನ ಪೆರ್ಮ್ಮಡಿರಾಯನ ಕಮ್ಮತವಗೆಯ್ದು ಕೋರನಿಕ್ಕವಾಗ” (ಅದೇ,ಕಥೆ೩೬೮ ಭಾಗ-೨, ಸಂ.೪,ಪು.೧೮೮-೧೮೯) ಮತ್ತು
ಇದೇ ಕಥೆಯ “ಆ ದವಸದಿಂದ ರಾಜರಿಗೆ ಕೋರನಿಕ್ಕಿ ಉಳಿದ ಧಾನ್ಯವನ್ನು ಉದುಕಾರರಿಗೆ ಪಾಲ ಕೊಟ್ಟು
ತಮಗುಳಿದ ಧಾನ್ಯದಿಂದ ಅನಂತ ದಾಸೋಹ ಮಾಡಿ” ಶೀಲ ಸಂಪದದಲ್ಲಿ ಲಿಂಗೈಕ್ಯನಾದ ಶರಣ ಬೊಮ್ಮಯʼ.
ಇಲ್ಲಿ ಸ್ವಂತ ಹೊಲದವರಿಗೆ ಬಿತ್ತಿಬೆಳೆದ ರೈತನು ನೀಡುವ ದಾನವೇ ಕೋರು, ರೈತನ ಕೃಷಿಗೆ ಪೂರಕವಾಗಿ ದುಡಿದ ಆಯಗಾರರೇ ಉದುಕಾರರು ಈ
ಪದ್ಧತಿ 10-15 ವರ್ಷಗಳೆಂದೀಚೆಗೆ ಕ್ಷೀಣಿಸುತ್ತದೆ.
ಕೋರು ಕೊಡುತ್ತಾರೆ. ಆದರೆ ಉದುಕಾರರು ಈಗ ರೈತನಿಗಾಗಿ ದುಡಿಯುತ್ತಿಲ್ಲ. ರೈತಪ್ಪನೂ ಅವರ ಬಗ್ಗೆ
ತಲೆ ಕೆಡಿಸಿಕೊಳ್ಳುವುದಿಲ್ಲ. ಒಟ್ಟಿನಲ್ಲಿ ನೀನನಗಾದರೆ ನಾನಿನಗೆ ಎಂಬಂಥ ಮಾನವೀಯ ಸಂಬಂಧದ ಒಂದು
ಪ್ರಾಚೀನ ಪಾರಂಪರಿಕ ಸಂಬಂಧ -ಸಂಪ್ರದಾಯ ಇಂದು ಸತ್ತುಹೋಗುತ್ತಿದೆ ಎಂದು ಹೇಳಬಹುದು.
ಕೆಲ ವೀರಶೈವರನ್ನು ಬಿಟ್ಟರೆ ಇನ್ನುಳಿದ ಮತ ಪ್ರಪಂಚದ ಕೊಡುಕೊಳಿಗೆಗೆ ಪದಾರ್ಥ ವಿನಿಮಯ ಪದ್ಧತಿಯೊಂದಿಗೆ ಹಣವಿನಿಮಯ ಪದ್ಧತಿಯೂ
ಸಹಜವಾಗಿತ್ತು.
ಚಿಕ್ಕಮಾದಣ್ಣನೆಂಬ ಶರಣ ಸತಿ ಮಹಾದೇವಿ ಸುತ ಬಾಲಸಂಗಣ್ಣ ನೋಡಗೂಡಿ ಮೂವರು ದೂರ್ವಾಂಕುರದ ಪತ್ರ ತಂದು ಕೊಡುವ
ಕಾಯಕ ಮಾಡುತ್ತಿರುತ್ತಾರೆ. ಕಲ್ಯಾಣ ಪಟ್ಟಣದಲ್ಲಿ ಸೆರೆ ಸೇರು , ಪಾವು, ಪಂಚೇರು, ಧಡೆಯ, ಧಾನ್ಯಬಂದರೂ, ರುವ್ವೆ, ದುಡ್ಡ ದುಗ್ಗಾಣಿ ವೀಸ, ಬೇಳೆ ಹಣ ಬಂದರೆಯೂ ಜಂಗಕ್ಕೆ ಖಂಡಿತ ಕಾಯಕದಿಂದ ಮಾಡುತ್ತಿರಲು (ಅದೇ,ಕಥೆ೪೩೯ ಭಾಗ-೨, ಸಂ.೪,ಪು.೩೩೬) ಎಂಬ ಉಲ್ಲೇಖ ಈ ಕಥೆಯಲ್ಲಿದೆ ಅಂದರೆ ಇಲ್ಲಿ ಮಾಡುವ ಕಾಯಕಕ್ಕೆ (ಪ್ರತಿಫಲ)ವಾಗಿ ಧನ-ಧಾನ್ಯ ಹಣ ಹಾಗ, ದುಡ್ಡು, ದುಗ್ಗಾಣಿ, ರುವೈ, ವೀಸ, ಬೇಳೆ ಹೀಗೆ ಹಣ ಮತ್ತು ಪದಾರ್ಥಗಳು
ವಿನಿಮಯವಾಗುತ್ತಿದ್ದವೆಂದು ತಿಳಿದುಕೊಳ್ಳಬಹುದಾಗಿದೆ ಮತ್ತು ಅಳತೆಗಾಗಿ ಪಾವು, ಪಂಚೇರು ಧಡೆ, ಸೇರು ಮತ್ತು ಸೆರೆ (ಮುಷ್ಠಿ ಪ್ರಮಾಣ) ಇತ್ಯಾದಿಗಳನ್ನು
ಬಳಸುತಿದ್ದರು ಎಂಬುದನ್ನು ನಾವು ಗಮನಿಸಬೇಕು ಪಂಚೇರು, ಧಡೆ ತೂಕದ ಅಳತೆಗಳಾದರೆ, ಸೇರು -ಸೆರೆ ಹಿಡಿಕೆಗಳು ಎಂಬುದು ಎಲ್ಲರಿಗೂ ಗೊತ್ತಿರುವ ಮಾತೇ
ಹಳ್ಳಿಗಳಲ್ಲಿ ಈ ರೀತಿಯ ದೇಶಿ ಅಳತೆ-ಪ್ರಮಾಣಗಳು ಈಗಲೂ ಜೀವಂತವಾಗಿದೆ.
ಇದಲ್ಲದೆ ಅನೇಕ ತೂಕ ಅಳತೆ
ಪ್ರಮಾಣಗಳನ್ನು ಉಪಯೋಗಿಸುತ್ತಿದ್ದರೆಂಬುದಕ್ಕೆ ಪುರಾವೆಗಳು ಈ ಕೃತಿಯಲ್ಲಿವೆ. ಒಮ್ಮೂರು
ಇದು ಉದ್ದಳತೆ, ಹತ್ತಕೊಳಗ
ಇದು ಹಿಡಿಪು ದೊಡ್ಡ ಪ್ರಮಾಣ) ಅಳಿವ ಸಾಧನ. ಖಂಡುಗ- ಇದು ಕಾಳಿನ ಒಂದು ಪ್ರಮಾಣ ಅಳಿಯಲು, ಬಳ್ಳ ಸೊಲಗೆ, ತಾಸು(ಚಕ್ಕಡಿ) ಹೇರು ಇತ್ಯಾದಿ ಪ್ರಮಾಣಗಳನ್ನು ಬಳಸುತ್ತಿದ್ದರು
ಘಳಿಗೆ ಬಟ್ಟಲು-ಸಮಯದ ಅಳತೆಯಾಗಿತ್ತೆಂಬುದನ್ನು ಈ ಕೃತಿಯು ದಾಖಲಿಸಿದೆ.
ತೂಕದ ಸಾಧನವಾಗಿ ತೊಲೆ (ತಕ್ಕಡಿ) ತ್ರಾಸು (ತಕ್ಕಡಿ)ಬಳಸುತ್ತಿದ್ದುದನ್ನು ಈ ಕೃತಿ
ದಾಖಲಿಸಿದೆ. ಕೊಡುಕೊಳುಗೆಯಲ್ಲಿ ಬಳಸುತ್ತಿದ್ದ ಮಾಪಕಗಳು ಈ ಕೆಳಗಿನಂತಿವೆ ಶಿವಿಯ ಪಕ್ಷಿ
ತೂಕಕ್ಕೆ ಸಮವಾಗಿ ತನ್ನ ದೇಹದ ಮಾಂಸವನು ತೆಗೆ ತೆಗೆದು ತೊಲೆಯಲ್ಲಿದ್ದ ತೂಗಿದನಂತೆ ಕಥೆ -ಉದಾರ
ಕೀರ್ತಿಯು ಶಿಬಿ ಚಕ್ರವರ್ತಿ (ಅದೇ,
ಭಾಗ-೧, ಸಂ.೧,ಪು.೯೧) ಅಮರನೀತಿಯ ಕಥೆಯಲ್ಲಿ ಅಮರನೀತಿಗಳು ಹಸಾದವೆಂದು
ತ್ರಾಸಿನೊಂದೆಡೆಯಲ್ಲಿ ಕವುಪುನಿರಿಸಿ, ಒಂದೆಸೆಯಲ್ಲಿ
ದಿವ್ಯವಸ್ತ್ರದ ಪೆಂಡಿಗಳು ಹಾಕಿ ತೂಗಲು ತ್ರಾಸು ಮುರಿದು ಬೀಳಲಾಗು...... ಶಿವಾಲಯದ ಮುಂದೆ
ಪೆದ್ದೊಲೆಯನಿಕ್ಕಿ ಬ್ರಹ್ಮಾಂಡವ ಹೋಳು ಮಾಡುವಂತೆ ಸಮವೆರಡು ಕೊಪ್ಪರಿಗೆಗಳಂ ತರಸಿ ಸರ್ಪಳಿಯಂ
ಹೂಡಿ ತ್ರಾಸ ಮಾಡಿ (ಅದೇ,ಕಥೆ ೩೫೨ ಭಾಗ-೨, ಸಂ.೪,ಪು.೧೬೨)
ಒಮ್ಮಾರು ಎಂಬ ದೇಶಿ ಅಳತೆ ಅರಿಯುವ ಪದ್ಧತಿ ಶೈವ ಶಿವಭಕ್ತರಾಜನ ಕತೆಯಲ್ಲಿ ದಾಖಲಾಗಿದೆ.
ಈಗಲೂ ಹಳ್ಳಿಗಳಲ್ಲಿ ಈ ಅನೌಪಚಾರಿಕ ಅಳತೆ
ರೂಢಿಯಲ್ಲಿದೆ. ಎರಡೂ ಕೈ ಗಳನ್ನು ಎರಡೂ ಬದಿಗೆ ಭುಜದ ಸಮನಾಂತರಕ್ಕೆ ಎತ್ತಿ ಚಾಚಿದರೆ-
ಎತ್ತಿದೆರಡೂ ಕೈಗಳ ತುದಿಯಿಂದ ತುದಿಯವರೆಗಿನ ಅಳತೆಯೇ ಮಾರು ಕಟ್ಟಿದ ಹೂಗಳ ಸರವನ್ನು ಮಾರು
ಲೆಕ್ಕದಲ್ಲಿ ಅಳತೆ ಮಾಡುವ ಪದ್ಧತಿ ಈಗಲೂ ಇದೆ. (ಅದೇ,ಕಥೆ ೨೬೧ ಭಾಗ-೨, ಸಂ.೩,ಪು.೪೨)
ಕೊಳಗ ಎಂಬ ಮಾಪಕ ಹಿಡಿಪಾಗಿದ್ದು, ಇದೂ
ಕೂಡ ದೇಶಿ ಅಳತೆ ಬಳಕಲ್ಲೊಂದು ದಿನ ಸಿದ್ಧರಾಮಯ್ಯನು ಮಲ್ಲಿಕಾರ್ಜುನ ಪರ್ವಕ್ಕೆ ಎಂದು ಹತ್ತು
ಕೊಳಗಬತ್ತವಂ ಕುಟ್ಟುವುದಕ್ಕೆ ಬಿಟ್ಟಿಯ ಕೊಟ್ಟಣದ ಅಮುಗಿದೇವಯ್ಯಗಳ ಮನೆಗೆ ಕಳುಹಲು(ಅದೇ,ಕಥೆ೨೬೧
ಭಾಗ-೨, ಸಂ.೩,ಪು.೬೪) ಸ್ಥಾವರಲಿಂಗ ಪೂಜಿಸುವವರಿಗೆ
ನಾವೇಕೆ ಕೊಟ್ಟಣವ ಕುಟ್ಟಿಹವೆಂದು ತಿರಸ್ಕರಿಸಿ ಬಿಡುತ್ತಾರೆ.
“ಬೆಳಗಾಗಿ ಮಾರಿ ಮಸಣಿಯರು ಮೂರು ಸಾವಿರ ಖಂಡುಗಕ್ಕಿಯಂ ಪೊತ್ತಕೊಂಡು ಬ್ರಹ್ಮಯ್ಯನ ಮನೆಗೆಬಂದು “ನಿಮ್ಮಕ್ಕಿಯ
ನೊಪುಸಿಕೊಳ್ಳಿಯೆಂದು ನಿಂದಿರಲಾಗ (ಅದೇ,ಕಥೆ೨೮೯
ಭಾಗ-೨, ಸಂ.೩,ಪು.೭೮)
ಸಾಮಾನ್ಯವಾಗಿ 32 ಸೇರಿಗೆ ಒಂದು ಪಡುಗ (ಗಡಿಗೆ) ಎರಡು ಗಡಿಗೆಗೆ (64 ಸೇರಿಗೆ ) ಒಂದು ಹೇರು ಇಪ್ಪತ್ತು ಹೇರಿಗೆ ಒಂದು ಖಂಡುಗ
ಎಂಬುವಂಥ ಕಾಳಿನ ದೊಡ್ಡ ಪರಿಮಾಣದ ದೇಶೀ ಅಳತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿದೆ.
ಕಣ್ಬೇನೆ ಬಂದಿದ್ದ ಮಲ್ಲಯ್ಯನಿಗೆ ಭಾವ ಮೈದುನರು ಬಳ್ಳವನ್ನು
ಬೋರಲು ಹಾಕಿ ಇದೇ ಲಿಂಗೆವಂದು ಹೇಳಿದರು.-ಆತನು ಪೂಜೆಯಿಂದ ಆ ಬಳು(ಸೇರು) ಲಿಂಗವೇ ಆಗಿ ಬಳ್ಳೇಶ ಮಲ್ಲಯ್ಯನೆಂದು ಪ್ರಸಿದ್ಧನಾದನಂತೆ ಬಳ್ಳಿವೆಂದರೆ ಸೇರು (ಇದು ಬಂದು ಕಾಳುಗಳನ್ನು
ಅಳೆಯುವ ಹಿಡಿಪು ಒಂದು ಪರಿಮಾಣ. (ಅದೇ,ಕಥೆ೨೯೦ ಭಾಗ-೨, ಸಂ.೩,ಪು.೭೯)
ಇಳೆಯಾಂಡ ಗುಡಿಯಾರ- ಸೊಲಗೆ
ಬೀಜದ ಹೊಲದಿಂದ ಬೆವಸಾಯವಂ ಮಾಡುತ್ತಂ ಬಿತ್ತಿ ಬೆಳೆದು ಜಂಗಮ ದಾಸೋಹ ಮಾಡುತ್ತಿದ್ದನಂತೆ(ಅದೇ,ಕಥೆ೩೧೩
ಭಾಗ-೨, ಸಂ.೩,ಪು.೧೦೮) ಸೊಲಗ
ಇದು ಕೂಡ ಕಾಳಿನ ಪರಿಮಾಣ ಸೂಚಕ ಸೊಲಗೆ ಬೀಜದ ಹೊಲ ವೆಂದರೆ ಒಂದು ಸೋಲಗೆ ಕಾಳನ್ನು
ಬಿತ್ತಬಹುದಾದೆಷ್ಟು ವಿಸ್ತಾರವಾದ ಹೊಲ ಎಂದರ್ಥ. ಡವುಗಿ ಬರದ ಸಂದರ್ಭ
ಬಣ್ಣದ ಗುಬ್ಯಾರು ಮಳೆರಾಜ ಅವರು ಮಣ್ಣಾಗಿ ಹೋದಾರು ಮಳೆರಾಜ ಎಂಬ ಹಾಡಿನಲ್ಲಿ ಸೊಲಗಿ
ಹಿಟ್ಟಿನ್ಯಾಗ ಮಳೆರಾಜ ಅವರು ಅಪ್ಪುವನ್ಗೆ ಕೂಡಿಸಾಯರೋ ಮಳೆರಾಜ ಎಂಬ ಸಾಲುಗಳನ್ನು ಓದಿದ ನೆನಪು.
ಸೊಲಗೆ ಎಂಬ ಶಬ್ದ ಇಂದಿಗೂ ಬಳಕೆಯಲ್ಲಿದೆ ಒಂದು ಹಳ್ಳಿಯ ಅನೌಪಚಾರಿಕ ಕಾಳು ಮಾಪಕ ಸೋಲಗೆ.
ಹೀಗೆ ಈ ಕೃತಿಯಲ್ಲಿ ಉದ್ದಗ, ಸಮಯದ
ಕಾಳುಪರಿಮಾಣ, ಸೂಚಕಗಳ ಕುರಿತಾದ
ಉಲ್ಲೇಖಗಳಿವೆ ಇವು ಕೊಡುಕೊಳುಗೆಗೆ ಪೂರಕವಾದ ಮಾಪನ ಸಾಧನಗಳು. ಕೊಡುಕೊಳಿಗೆ ಎಂದ ಮೇಲೆ
ಲೆಕ್ಕಪತ್ರ ಇಡುವುದನ್ನು ಸಹಜವೇ ಸಿವುಡಿಲೆಕ್ಕ ಎಂಬ ಪದಬಳಕೆ ವಿಶೇಷವಾಗಿದೆ ಸೊಡ್ಯಾಳ ಬಾಚರಸರು
ಬಿಜ್ಜಳರಾಯನ ಕರಣಿಕತ್ರಕ್ಕೆ ಮುಖ್ಯ ನಾಯಕರಾಗಿದ್ದು, 360 ಕರಣಿಕರ ಸಿವುಡಿಲೆಕ್ಕಕ್ಕೆ ಕೊಟ್ಟಿದ್ದು ಕೊಂಡುದಕ್ಕೆಲ್ಲ ನಮಃ
ಶಿವಾಯ ಎಂದು ಮಂತ್ರ ಬರೆದಿದ್ದ ರಂತೆ ಸಿವುಡಿ ಲೆಕ್ಕಾವೆಂದರೆ ಬಹುಷಃ ಸಮಗ್ರ ಮೊತ್ತವಾಗಿರಬೇಕು.
ಹಲವಾರು ಮೊತ್ತಗಳು ಸೇರಿದ (ಸಿವುಡು ಸೂಡು) ಸಮಗ್ರ ಮೊತ್ತವೇ ಸಿವುಡಿಲೆಕ್ಕ) (ಕಥೆ-ಬಸವ ಬಾಚರಸ
ಲೆಕ್ಕ ನಿಮಿತ್ಯಾವ ತರುಣಿಯ ನಿಲಿಸಿದನೆಂಬುದಕ್ಕೆ ಕಥೆ-) (ಅದೇ, ಭಾಗ-೨, ಸಂ.೩,ಪು.೩೭೬)
ಹೀಗೆ ಕೊಡುಕೊಳುಗೆ, ಹಣಕಾಸು, ಮಾಪಕಗಳು ಮತ್ತು ಲೆಕ್ಕ ಪತ್ರದ ಪರಿಗಳನ್ನು ಈ ಕೃತಿ
ದಾಖಲಿಸಿದೆ ಮಾನವನ ಸಂಸ್ಕೃತಿಯ ಸಂಗತಿಗಳಾಗಿ ರೂಪುದಳೆದಿರುತ್ತದೆ ಇವು ನೇರವೂ, ನಿರ್ದಿಷ್ಟವೂ ಆಗಿದಷ್ಟು ಆ ನಾಗರಿಕ ಪ್ರಪಂಚದ
ಸಂಸ್ಕಾರವೂ ಶ್ರೀ
ಮಂತವಾಗಿ, ಮೇಲುಮಟ್ಟದ್ದಾಗಿ ಕಾಣಿಸುತ್ತದೆ. ಈ ರೀತಿಯಲ್ಲಿ ಸಂಸ್ಕೃತಿಯ
ಚೂರುಪಾರುಗಳ ಅಧ್ಯಯನದಿಂದ ಸಂಸ್ಕೃತಿಯ ತಿಳುವಳಿಕೆಯ ಪಕ್ವತೆಯತ್ತ ಸಾಗುತ್ತದೆಂಬುದನ್ನು
ಗಮನಿಸಬೇಕು.
ಇನ್ನೊಂದು ಮುಖ್ಯ ಸಂಗತಿಯೆಂದರೆ ವೀರಶೈವಾಚಾರದ ಅತಿ ಸಂಪ್ರದಾಯಿಕ ಹರಿತ ಕುರಿತು
ವಿವರಿಸುವಂಥ ಶೀಲ ಸಂಪಾದನೆಯ ಕಥೆಗಳು ಇಲ್ಲಿ
ಬಂದಿವೆ.
ವಚನಕಾರರು ವಿವರಿಸಿದ ವಿಭಜಿಸಿದ ಭವಿ-ಭಕ್ತನೆಂಬ ವಿಂಗಡಣೆಯೂ ಪ್ರಶ್ನಾರ್ಹವಾಗುತ್ತದೆ.
ಭವಿಯೊಂದುಕುಲ ಭಕ್ತನೊಂದು ಕುಲ ಎಂಬ ಮಾತು ಎಂಥ ವಿಪರೀತ ಸಂಸ್ಕೃತಿಯನ್ನು ಹುಟ್ಟು ಹಾಕಿತ್ತು
ಎಂಬುದನ್ನು ಈ ಶೀಲಸಂಪಾದನೆಯ ಕಥೆಗಳು ವಿವರಿಸುತ್ತವೆ.
ಶೀಲ ಸಂಪಾದನೆಯ ವಚನಗಳು ಮತ್ತು ಕಥೆಗಳನ್ನು ತುಲನಾತ್ಮಕ ಅಧ್ಯಯನ ಮಾಡಬೇಕಾಗಿದೆ. ಇಲ್ಲಿ ವೀರಶೈವ
ಶೀಲವ್ರತಗಳನ್ನು ಕೈಗೊಂಡು ಬದುಕುತ್ತಿರುವ ಶರಣ-ಶಿವನೆಂಬುದನ್ನು ಕೇಳುತ್ತಾನೆ, ಆನ್ಯ ದೈವದ ಹೆಸರು ಕಳೆದಿರುತ್ತಾನೆ. ಕೆಲ ಸಲ
ಸೇರಿಸದಾಗುತ್ತಾನೆ. ಲಿಂಗಮುದ್ರೆಯ ಹೊಲದಲ್ಲಿ ಬೆಳೆದುದನ್ನು ಉಣ್ಣುತ್ತಾನೆ. ಲಿಂಗದೃಪಲಾದ
ಎತ್ತುಗಳು ಬೇಕು -ವ್ಯವಸಾಯಕ್ಕೆ, ಲಿಂಗವಂತ
ಅರಳಿನ ಹಾಲು ಮಾತ್ರ ಆತನಿಗೆ ಸೇವನಾಯೋಗ್ಯ, ಆತನ
ಸೇವೆಗಿರುವವರೆಲ್ಲರು ಲಿಂಗ ಧರಿಸಿದ, ಭವಿಗಳಲ್ಲದ
ಭಕ್ತರೇ ಆಗಿರಬೇಕಿತ್ತು ! ಇಂಥ ಕಠಿಣ ವ್ರತಹಿಡಿದ ವ್ಯಕ್ತಿ ನಾಮಧಾರಿ ಹಾರುವರನ್ನು ಕಂಡರೆ ಸೈರಿಸ, ಲಿಂಗಹೀನರ ನೆರೆಯನು ಬೆರೆಯನು, ಲಿಂಗಾಯತವಲ್ಲದ, ಲಿಂಗರ್ಪಿತವಲ್ಲದ ಎಲ್ಲವೂ ಆತನಿಗೆ ಭವಿಸ್ವರೂಪವಾಗಿ- ಅಪೇಯ, ಅಸೇವ್ಯ- ಅಭಕ್ಷ್ಯವಾಗಿ
ಪರಿಣಮಿಸುತ್ತದೆ.- ಇಂಥಹ ತಾತ್ವಿಕ ಬದುಕಿಗೆ ಶರಣರು ಒಗ್ಗಿಸಿಕೊಂಡಿದ್ದು ಅದೂ ಒಂದು
ಸಂಪ್ರದಾಯವಾಗಿತ್ತೆಂದು ತೋರುತ್ತವೆ ಇದಕ್ಕೆ ಉದಾಹರಣೆಯಾಗಿ ನಿಲ್ಲುವಂತ
ಕಥೆಗಳು ಈ ಕೃತಿಯಲ್ಲಿವೆ. ಮುಖ್ಯ ಕಥಾ ಸಂಖ್ಯೆ 367 ರ ಅಡಿಯಲ್ಲಿ-ಭೈರವಾಂಕನು ಶೀಲನ ಪಿಡಿದುದಕ್ಕೆ ಮುನ್ನಿನ ಪುರಾತನ
ಕಥೆಗಳು ಎಂಬ ತಲೆ ಬರಹದಡಿಯಲ್ಲಿ ಒಟ್ಟು ಎರಡು ಉಪಕಥೆಗಳೂ ಸೇರಿಸಲ್ಪಟ್ಟಿವೆ.
ಏಲೇಶ್ವರದ ಕೌತಯ್ಯನ ಕಥೆ ಪಾಲ್ಕುರಿಕೆ ಸೋಮೇಶ್ವರನ ಕಥೆಗಳು ಆ ಎರಡು ಕಥೆಗಳಾಗಿವೆ.
ಏಲೇಶ್ವರದ ಕೇತಯ್ಯ 64 ಶೀಲಗಳನ್ನು ಆಚರಿಸುತ್ತಿದ್ದನಂತೆ! ಗುರುಲಿಂಗ
ಜಂಗಮದಲ್ಲಿ ವಿಶ್ವಾಸ, ಪರಶಿವನಲ್ಲಿ ಏಕೈಕನಿಷ್ಠೆ, 88 ಲೌಕಿಕಾಚಾರಗಳನ್ನು ಅತಿಗಳೆದ ನಿಲುವು, ರಜತ್ಸೋತಕ, ಪಂಚಸೂತಕಗಳನ್ನು ಬಗೆಯದ ಶಿವಭಾವ ತೀರ್ಥ ಕ್ಷೇತ್ರಗಳನ್ನು
ಬಿಟ್ಟು ಇಷ್ಟ ಲಿಂಗದಲ್ಲಿ ಮಾತ್ರ ಮಾತ್ರ ನಿಷ್ಠೆ ಇಟ್ಟು, ಲಿಂಗವಂತರಲ್ಲದ ಭವಿಗಳು ಮಾಡಿದ ಪಾಕವನ್ನು ಸೇವಿಸದ, ಪಂಚಾಕ್ಷರಿ ಮಂತ್ರೋದಿತ
ಜಲವನ್ನು ಮಾತ್ರ ಸರ್ವಾಚಾರಕ್ಕೆ ಬಳಸುತ್ತಾ, ಲಿಂಗಸಮಾನ್ವಿತ
ಶಿಶುಗಳನ್ನು ಮಾತ್ರಗಣಿಸುವ, ಹೀಗೆ
ಭಕ್ತನಾದವನು ಹಿಡಿಯ ಬೇಕಾದುದನ್ನು ಹಿಡಿದು ಬಿಡಬೇಕಾದುದನ್ನು ಭವಿ ಭವಿತ್ತವೆಂದು ಕೈಬೀರುವ ಶೀಲಾಚಾರ
ವೀರಶೈವ ಅದೆಂಥ ಕಠೋರ ನಿಷ್ಠೆಗೆ ಗುರಿಯಾಗಿತ್ತೆಂದು ತಿಳಿಸಿಕೊಡುತ್ತದೆ (ಹೆಚ್ಚಿನ ವಿವರಗಳಿಗೆ
ಕಥೆ ನೋಡಿ)
(ಅದೇ,ಕಥೆ೩೬೭ ಭಾಗ-೨, ಸಂ.೪,ಪು.೧೮೬-೮೭)
ಬಹುಶಃ ಇಷ್ಟೂ ದೊಡ್ಡ ಕತೆ ಭೈರವೇಶ್ವರ ಕಾವ್ಯ ಕಥಾಮಣಿ ಸೂತ್ರ ರತ್ನಾಕರದಲ್ಲಿ
ಇದೊಂದೇ ಆಗಿದೆ. ಪಾಲ್ಕುರಿಕೆ ಸೋಮಾರಾಧ್ಯ
(ತೆಲುಗು ಬಸವಪುರಾಣದ ಕರ್ತೃ) ಕೂಡ ಇಂಥದೊಂದು ಶೀಲ ಕೈಕೊಂಡು ಸಾಂಪ್ರದಾಯಕವಾದ ನಿಷ್ಠುರ
ಚೌಕಟ್ಟಿನಲ್ಲಿ ಬದುಕಿದ್ದರೆಂಬುದು ಕಥಾ ಸಂಖ್ಯೆ 368 ರಿಂದ ತಿಳಿದು ಬರುತ್ತದೆ. (ಅದೇ, ಭಾಗ-೨, ಸಂ.೪,ಪು.೧೮೭-೧೮೮)
ಹೀಗೆ ಹಲವು ರೀತಿಯ ಆಯಾಮಗಳನ್ನೊಳಗೊಂಡ ಈ ಕೃತಿಯು ಭೌತಿಕ ಮತ್ತು ಅಭೌತಿಕ ಸಂಗತಿಗಳಿಗೆ
ಕನ್ನಡಿಯಾಗುತ್ತದೆ. ಸಮಕಾಲೀನ ಸಮಾಜ ಬಳಸುತ್ತಿದ್ದ ಪಾತ್ರ -ಪಂಡೆ, ವಸ್ತ್ರ-ಉಡುಗೆ, ಕಾಯಕದ
ಸಾಧನಗಳು ಸಲಕರಣೆಗಳು, ಕೊಡುಕೊಳುಗೆ- ಹಣಕಾಸು, ಜಾದು , ಲೈಂಗಿಕತೆ, ಆಭರಣ ಹೀಗೆ ಈ ಎಲ್ಲಾ ಭೌತಿಕ ಸಂಸ್ಕೃತಿಯ ಸಂಗತಿಗಳು ಈ
ಕೃತಿಯಲ್ಲಿ ನೋಡಸಿಗುತ್ತವೆ. ಮಾನವರ ಅರಿವು-ಅಚಾರ, ಜ್ಞಾನ, ಸಂಪ್ರದಾಯ
ನಂಬಿಕೆ,
ಕಲೆ, ಊಟ
ವಿಹಾರ ಇತ್ಯಾದಿಗಳು ಆತನ ಆಂತರಿಕವಾದ ಅಭೌತಿಕ ಸಂಗತಿಗಳು. ಈ ಅಭೌತಿಕ ಸಂಸ್ಕೃತಿಯು ಈ ಕೃತಿಯಲ್ಲಿ
ಬಹುಮುಖವಾಗಿ ತೆರೆದುಕೊಳ್ಳುತ್ತದೆ. ಸಂಸ್ಕೃತಿಯ ಪುನರ್ರಚನೆಗೆ
ಈ ಸಂಕಲಿತ ಕೃತಿಯು ಬಹುದೊಡ್ಡ ಆಕರವಾಗುವುದರಲ್ಲಿ ಸಂದೇಹವಿಲ್ಲ. ದುರಾದೃಷ್ಟಕರ ಸಂಗತಿಯೆಂದರೆ ಈ
ಸಂಕಲಿತ ಕೃತಿಯ ಕುರಿತ ಪರಿಚಯ ಕನ್ನಡ ಸಾಹಿತ್ಯಾಸಕ್ತರಿಗೆ ಆಗದಿರುವುದು.ಇನ್ನು ಮುಂದಾದರೂ
ಸಾಂಸ್ಕೃತಿಕ ಗಣಿಯನ್ನೇ ಹೊಂದಿರುವ ಈ ಕೃತಿಯ ವ್ಯವಸ್ಥಿತ ಅಧ್ಯಯನ ನಡೆಯುವುದರ ಮೂಲಕ ಸಾಂಸ್ಕೃತಿಕ
ಮತ್ತು ಸಾಹಿತ್ಯಕ ಮಹತ್ವದ ಆಕರಕೃತಿಯಾಗಿಯೂ
ಪರಿಗಣಿಸ ಬೇಕಾಗಿದೆ.
ಆಕರ ಗ್ರಂಥಗಳು
1. ಶಾಂತಲಿಂಗದೇಶಿಕ ವಿರಚಿತ ಭೈರವೇಶ್ವರ ಕಾವ್ಯದ ಕಥಾಮಣಿ
ಸೂತ್ರರತ್ನಾಕರ ಭಾಗ – 1
ಮತ್ತು 2
ಸಂಪಾದಕರು : ಆರ್.ಸಿ.
ಹಿರೇಮಠ ಮತ್ತು ಎಂ.ಎಸ್.ಸುಂಕಾಪುರ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. 1968
2.
ನಂಜುಂಡದೇವ ಕವಿಕೃತ ಭೈರವೇಶ್ವರ ಕಾವ್ಯ, ಸಂ:
ಶ್ರೀ.ಶಿವಬಸವ ಸ್ವಾಮಿಗಳು, ಮೈಸೂರು,
1954
3. ಸಿ.ನಾಗಭೂಷಣ, ಶರಣಸಾಹಿತ್ಯ-ಸಂಸ್ಕೃತಿ
ದೀಪಿಕೆ, ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರ್ಗಿ, ೨೦೧೭
4.ಉತ್ತರ ದೇಶದ ಬಸವಲಿಂಗ ವಿರಚಿತ ಭೈರವೇಶ್ವರ ಕಾವ್ಯದ
ಕಥಾಸಾಗರ ಮತ್ತು ಉಚಿತ ಕಥೆಗಳು
ಸಂ.ಎಸ್.ಉಮಾಪತಿ, ವೀರಶೈವ ಅಧ್ಯಯನ ಸಂಸ್ಥೆ, ಗದಗ 2000